ನವದೆಹಲಿ: ಹೊಸ ಸಿಮ್ ಕಾರ್ಡ್ (Sim Card) ಪಡೆಯಲು ಇನ್ಮುಂದೆ ಬಯೋಮೆಟ್ರಿಕ್ ಪರಿಶೀಲನೆ ಕಡ್ಡಾಯಗೊಳಿಸಿ ಕೇಂದ್ರ ಸರ್ಕಾರ (Central Govt) ಆದೇಶಿಸಿದೆ.
ಕೇಂದ್ರದ ಆದೇಶದ ಹಿನ್ನೆಲೆ ಹೊಸ ಸಿಮ್ ಕಾರ್ಡ್ ಪಡೆಯುವ ಮುನ್ನ ಗ್ರಾಹಕರು ಬಯೋಮೆಟ್ರಿಕ್ ಪರಿಶೀಲಿಸಬೇಕು. ಗ್ರಾಹಕರ ಮಾಹಿತಿ ಅಪ್‌ಡೇಟ್ ಹಾಗೂ ಮರುಪರಿಶೀಲನೆ ಸಂದರ್ಭದಲ್ಲೂ ಬಯೋಮೆಟ್ರಿಕ್ ವೆರಿಫಿಕೇಶನ್ ಅಗತ್ಯ ಅಂತ ಸೂಚಿಸಿದೆ. ಇದನ್ನೂ ಓದಿ: ಇನ್ಮುಂದೆ ಒಬ್ಬ ವ್ಯಕ್ತಿ ಹೆಸರಿಗೆ ಗರಿಷ್ಠ 9 ಸಿಮ್ – ರಿಯಲ್ ಟೈಮ್ ವೆರಿಫಿಕೇಷನ್ ಕಡ್ಡಾಯ
ಸಿಮ್ ಕಾರ್ಡ್ ಸ್ಥಗಿತಗೊಳಿಸುವ ಪ್ರಕ್ರಿಯೆಯಲ್ಲೂ ಗುರುತು ಪರಿಶೀಲನೆ ನಿಯಮ ಅನ್ವಯವಾಗಲಿದೆ. ಸೈಬರ್ ವಂಚನೆ ಹಾಗೂ ನಕಲಿ ಸಿಮ್ ಕಾರ್ಡ್ ಕನೆಕ್ಷನ್‌ಗಳಿಗೆ ಕಡಿವಾಣ ಹಾಕಲು ಕೇಂದ್ರ ಈ ಕ್ರಮ ಕೈಗೊಂಡಿದೆ. ಈ ಹೊಸ ನಿಯಮಗಳನ್ನು ಸಿಮ್ ಕಾರ್ಡ್ ಮತ್ತು ಟೆಲಿಕಾಂ ಸೇವೆ ಒದಗಿಸುವ ಕಂಪನಿಗಳು ಕಟ್ಟುನಿಟ್ಟಾಗಿ ಜಾರಿಗೊಳಿಸಬೇಕು ಅಂತ ಆದೇಶಿಸಿದೆ.

