ಬೆಂಗಳೂರು: ವೈದ್ಯಕೀಯ(Medical) ಮತ್ತು ದಂತ ವೈದ್ಯಕೀಯ(Dental ) ಕೋರ್ಸ್ ಗಳ ಪ್ರವೇಶಕ್ಕೆ ಎರಡನೇ ಸುತ್ತಿನ ಸೀಟು ಹಂಚಿಕೆಯ ತಾತ್ಕಾಲಿಕ ಫಲಿತಾಂಶವನ್ನು ಕರ್ನಾಟಕ ಪರೀಕ್ಷಾ ಪ್ರಾಧಿಕಾರ(KEA) ಇಂದು ಪ್ರಕಟಿಸಿದೆ.
ಎಂಸಿಸಿ ಮತ್ತು ಕೆಇಎ – ಎರಡೂ ಕೌನ್ಸೆಲಿಂಗ್ ಗಳಲ್ಲಿ ಸೀಟು ಹಂಚಿಕೆಯಾಗಿರುವ ಅಭ್ಯರ್ಥಿಗಳಿಗೆ ಒಂದು ವೇಳೆ ಎಂಸಿಸಿ ಸೀಟಿಗೆ ಪ್ರವೇಶ ಪಡೆಯಲು ಇಚ್ಛಿಸಿದಲ್ಲಿ ಅಂತಹವರು ಸೆ.14ರ ಸಂಜೆ 5ಗಂಟೆವರೆಗೆ ಚಾಯ್ಸ್- 4 ಆಯ್ಕೆ ಮಾಡಿಕೊಂಡು ಕೆಇಎಯಿಂದ ಹೊರ ಹೋಗುವುದಕ್ಕೆ ಅವಕಾಶ ನೀಡಲಾಗಿದೆ ಎಂದು ಪ್ರಾಧಿಕಾರದ ಕಾರ್ಯನಿರ್ವಾಹಕ ನಿರ್ದೇಶಕ ಹೆಚ್.ಪ್ರಸನ್ನ ತಿಳಿಸಿದ್ದಾರೆ. ಇದನ್ನೂ ಓದಿ: ಐದೇ ದಿನಗಳಲ್ಲಿ ಪೊಲೀಸ್ ಕಾನ್ಸ್ಟೇಬಲ್ ನೇಮಕಾತಿ ಫಲಿತಾಂಶ ಪ್ರಕಟ: ಕೆಇಎ
ಈ ರೀತಿ ಚಾಯ್ಸ್-4 ಹಾಕಿ ಹೊರ ಹೋಗುವ ಅಭ್ಯರ್ಥಿಗಳಿಂದ ತೆರವಾಗುವ ಸೀಟುಗಳನ್ನು 2ನೇ ಸುತ್ತಿಗೇ ಪರಿಗಣಿಸಿ, ಮತ್ತೊಮ್ಮೆ ಸೀಟು ಹಂಚಿಕೆ (Re-Run) ಮಾಡಿ ಅಂತಿಮ ಫಲಿತಾಂಶ ಪ್ರಕಟಿಸಲಾಗುವುದು ಎಂದು ಅವರು ವಿವರಿಸಿದ್ದಾರೆ.
ವೈದ್ಯಕೀಯ ಕೋರ್ಸ್ ನಲ್ಲಿ ಒಟ್ಟು 12,010 ಸೀಟುಗಳ ಪೈಕಿ 11,626 ಸೀಟು ಹಂಚಿಕೆಯಾಗಿವೆ. ಮ್ಯಾನೇಜ್ಮೆಂಟ್ ಕೋಟಾದ ಇನ್ನೂ 384 ಸೀಟು ಬಾಕಿ ಉಳಿದಿವೆ. ಆದರೆ ದಂತ ವೈದ್ಯಕೀಯ ಕೋರ್ಸ್ ನಲ್ಲಿ ಎಲ್ಲ 2,689 ಸೀಟುಗಳೂ ಹಂಚಿಕೆಯಾಗಿವೆ ಎಂದು ಅವರು ತಿಳಿಸಿದ್ದಾರೆ.

