LatestLeading NewsMain PostNational

225 ಮೀ. ಆಳದ ಕಲ್ಲಿದ್ದಲು ಗಣಿ ಝಾಂಜ್ರಾ ಒಳಗೆ ಪ್ರವೇಶಿಸಿ ಪರಿಶೀಲಿಸಿದ ಮೊದಲ ಸಚಿವ ಪ್ರಹ್ಲಾದ್ ಜೋಶಿ

ಕೋಲ್ಕತ್ತಾ: 225 ಮೀಟರ್‌ ಆಳದ ಭೂಗತ ಕಲ್ಲಿದ್ದಲು ಗಣಿ ಝಾಂಜ್ರಾ (Jhanjra Coal Mine) ಒಳಗೆ ಪ್ರವೇಶಿಸಿದ ಮೊದಲ ಸಚಿವ ಎಂಬ ಹೆಗ್ಗಳಿಕೆಗೆ ಪ್ರಹ್ಲಾದ್‌ ಜೋಶಿ (Pralhad Joshi) ಅವರು ಪಾತ್ರರಾಗಿದ್ದಾರೆ.

ದೇಶದಲ್ಲೇ ಅತಿ ಹೆಚ್ಚು ಕಲ್ಲಿದ್ದಲು ಉತ್ಪಾದಿಸುವ, ಭೂ ಮೇಲ್ಮೈಯಿಂದ 225 ಮೀಟರ್ ಆಳದಲ್ಲಿರುವ ಪಶ್ಚಿಮ ಬಂಗಾಳ (West Bengal) ರಾಜ್ಯದ ಪಶ್ಚಿಮ್ ಬರ್ದಮಾನ್ ಜಿಲ್ಲೆಯ ದುರ್ಗಾಪುರ್ ಸಬ್ ಡಿವಿಷನ್‌ನಲ್ಲಿರುವ ಝಾಂಜ್ರಾ ಕಲ್ಲಿದ್ದಲು ಗಣಿಗೆ ಇಂದು ಕೇಂದ್ರ ಕಲ್ಲಿದ್ದಲು ಸಚಿವ ಪ್ರಹ್ಲಾದ್‌ ಜೋಶಿ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಇದನ್ನೂ ಓದಿ: ಡಿ.1 ರಿಂದ ಮಿಲ್ಮಾ ಹಾಲಿನ ದರ ಲೀಟರ್‌ಗೆ 6 ರೂ. ಏರಿಕೆ

ಗಣಿ ಒಳಗೆ 225 ಮೀಟರ್ ಆಳಕ್ಕೆ ತೆರಳಿ ಕಲ್ಲಿದ್ದಲು ಉತ್ಪಾದನೆ ಪರಿಶೀಲನೆ ನಡೆಸಿದ ಜೋಶಿ, ಅಂಡರ್ ಗ್ರೌಂಡ್‌ನಲ್ಲಿ 1.5 ಕಿ.ಮೀ. ಪ್ರಯಾಣಿಸಿದರು. ಈ ವೇಳೆ ಮಾತನಾಡಿದ ಸಚಿವರು, ಈಸ್ಟರ್ನ್‌ಕೋಲ್‌ನ ಝಂಜ್ರಾ ಭೂಗತ ಗಣಿಯೊಳಗೆ 225 ಮೀಟರ್ ಆಳಕ್ಕೆ ತೆರಳಿ ಅಂಡರ್ ಗ್ರೌಂಡ್‌ನಲ್ಲಿ ಒಂದೂವರೆ ಕಿ.ಮೀ. ಪ್ರಯಾಣಿಸಿದ್ದು, ಹೊಸ ಅನುಭವ ನೀಡಿದೆ ಎಂದರು.

ವರ್ಷಕ್ಕೆ 3.5 ಮಿಲಿಯನ್ ಟನ್ ಸಾಮರ್ಥ್ಯ ಹೊಂದಿರುವ ಝಂಜ್ರಾ ಕಲ್ಲಿದ್ದಲು ಗಣಿ, ಭಾರತದ ಅತಿ ಹೆಚ್ಚು ಕಲ್ಲಿದ್ದಲು ಉತ್ಪಾದಿಸುವ ಯಾಂತ್ರೀಕೃತ ಭೂಗತ ಗಣಿಯಾಗಿದೆ. ಇಷ್ಟೊಂದು ಆಳಕ್ಕೆ ಹೋಗಿ ಪ್ರತಿ ನಿತ್ಯ ಕಷ್ಟಕರ ಪರಿಸ್ಥಿತಿಗಳನ್ನ ಎದುರಿಸಿ ಕಲ್ಲಿದ್ದಲು ಉತ್ಪಾದನೆಗೆ ಶ್ರಮಿಸುತ್ತಿರುವ ಕಾರ್ಮಿಕರಿಗೆ ಪ್ರಹ್ಲಾದ್ ಜೋಶಿಯವರು ಇದೇ ವೇಳೆ ಅಭಿನಂದನೆ ಸಲ್ಲಿಸಿದರು. ಇಲ್ಲಿನ ಕಾರ್ಮಿಕರು ಯೋಧರ ರೀತಿಯಲ್ಲಿ ಕೆಲಸ ಮಾಡ್ತಿದ್ದಾರೆ ಎಂದು ಕೇಂದ್ರ ಸಚಿವರು ಇದೇ ವೇಳೆ ಶ್ಲಾಘನೆ ವ್ಯಕ್ತಪಡಿಸಿದರು. ಇದನ್ನೂ ಓದಿ: ಸೆನ್ಸೆಕ್ಸ್‌ ಹೈಜಂಪ್‌ – ಸಾರ್ವಕಾಲಿಕ ಎತ್ತರಕ್ಕೆ ಜಿಗಿದು ದಾಖಲೆ ಸೃಷ್ಟಿ

ದೇಶದಲ್ಲಿ ಕಲ್ಲಿದ್ದಲು ಉತ್ಪಾದನೆ ಹೆಚ್ಚಿಸುವ ಗುರಿಯೊಂದಿಗೆ ಕಲ್ಲಿದ್ದಲು ಗಣಿ ಪ್ರದೇಶಗಳಿಗೆ ಭೇಟಿ ನೀಡ್ತಿರುವ ಪ್ರಹ್ಲಾದ್ ಜೋಶಿ, ಹಲವು ಯೋಜನೆಗಳನ್ನ ಹಾಕಿಕೊಂಡಿದ್ದಾರೆ. ಕಲ್ಲಿದ್ದಲು ಉತ್ಪಾದನೆಯನ್ನು ಮತ್ತಷ್ಟು ಹೆಚ್ಚಿಸಲು ಉತ್ಪಾದನಾ ಸಾಮರ್ಥ್ಯವನ್ನು ವರ್ಷಕ್ಕೆ 2MT ಗಿಂತ ಅಧಿಕ ಪ್ರಮಾಣಕ್ಕೆ ಹೆಚ್ಚಿಸಲಾಗಿದೆ. ಕಡಿಮೆ ಎತ್ತರದ 2 ನಿರಂತರ ಗಣಿಗಳನ್ನ ಪರಿಚಯಿಸುವ ಜೊತೆಗೆ 5 MTY ಸಾಮರ್ಥ್ಯದ ಕಲ್ಲಿದ್ದಲು ನಿರ್ವಹಣೆ ಸ್ಥಾವರ ಹಾಗೂ ರೈಲ್ವೇ ಕಾರಿಡಾರ್ ನಿರ್ಮಾಣ ಹಂತದಲ್ಲಿದೆ ಎಂದು ಸಚಿವರು ತಿಳಿಸಿದ್ದಾರೆ. ಪ್ರಗತಿ ಪಥದಲ್ಲಿ ಸಾಗುತ್ತಿರುವ ಕೇಂದ್ರ ಸಚಿವರ ಈ ನಡೆ ವ್ಯಾಪಕ ಪ್ರಶಂಸೆಗೆ ಪಾತ್ರವಾಗಿದೆ.

Live Tv

Leave a Reply

Your email address will not be published. Required fields are marked *

Back to top button