ಚಾಮರಾಜನಗರ: ಅಂತೂ ಇಂತು ಕುಂತಿ ಮಕ್ಕಳಿಗೆ ರಾಜ್ಯವಿಲ್ಲ ಎಂಬಂತಾಗಿದೆ ದಲಿತರ ಸ್ಥಿತಿ ಎಂದು ಮಾಜಿ ಸಚಿವ ಎನ್.ಮಹೇಶ್ (N.Mahesh) ಮಾರ್ಮಿಕವಾಗಿ ನುಡಿದಿದ್ದಾರೆ.
ಕೊಳ್ಳೇಗಾಲದಲ್ಲಿ ಮಾತನಾಡಿದ ಅವರು, ದಲಿತ ಮುಖ್ಯಮಂತ್ರಿ ಎಂಬುದು ಕನಸಾಗಿದೆ. ದಲಿತರು ಎಲ್ಲಿಯವರೆಗೆ ಒಂದು ಪಕ್ಷದ ವೋಟ್ ಬ್ಯಾಂಕ್ ಆಗಿರ್ತಾರೋ ಅಲ್ಲಿಯವರೆಗೂ ಸ್ಥಾನಮಾನ ಸಿಗಲ್ಲ ಎಂದು ಮಾತನಾಡಿದ್ದಾರೆ. ಇದನ್ನೂ ಓದಿ: ಡಿಕೆಶಿ ಅವಧಿಯಲ್ಲಾದರೂ ರಾಜ್ಯ ಅಭಿವೃದ್ಧಿ ಕಾಣಲಿ: ಅರವಿಂದ್ ಬೆಲ್ಲದ್
ಸಿದ್ದರಾಮಯ್ಯ ರಾಜೀನಾಮೆ ನೀಡಿದ್ರೆ ದಲಿತರು ಸಿಎಂ ಆಗ್ತಾರೆ ಅಂತ ದಲಿತರ ನಿರೀಕ್ಷೆ ಆಗಿತ್ತು. ಆದರೆ ಅದು ಸುಳ್ಳಾಗಿದೆ. ಮಲ್ಲಿಕಾರ್ಜುನ ಖರ್ಗೆ ಸಿಎಂ ಆಗ್ತಾರೆ ಅಂತ ದಲಿತರು ಕಾಂಗ್ರೆಸ್ ಬೆಂಬಲಿಸಿದರು ಎಂದು ತಿಳಿಸಿದರು.
ಪರಮೇಶ್ವರ್ ಸಿಎಂ ಆಗಿ ಬಿಡ್ತಾರೆ ಅಂತ ಅವರನ್ನು ಸೋಲಿಸಲಾಯ್ತು. ಸಿಎಂ ಮಾಡ್ಲಿ ಬಿಡ್ಲಿ ದಲಿತರು ತಮ್ಮ ವೋಟ್‌ಬ್ಯಾಂಕ್ ಅಂತ ಕಾಂಗ್ರೆಸ್ ಅಂದುಕೊಂಡಿದೆ. ಈ ಸೂಕ್ಷ್ಮ ಅರ್ಥ ಆಗುವವರೆಗೂ ದಲಿತರಿಗೆ ಸ್ಥಾನಮಾನ ಸಿಗುತ್ತೆ ಎಂಬುದು ಕೇವಲ ಭ್ರಮೆ. ದಲಿತರು ಆತ್ಮಾವಲೋಕನ ಮಾಡಿಕೊಳ್ಳಲು ಇದು ಸಕಾಲ ಎಂದು ಸಲಹೆ ನೀಡಿದರು. ಇದನ್ನೂ ಓದಿ: ಮಾಜಿ ಸಚಿವ ವೆಂಕಟರಮಣಪ್ಪ ಅಂತಿಮ ದರ್ಶನ ಪಡೆದ ಸಿದ್ದರಾಮಯ್ಯ
