ಹೈದರಾಬಾದ್: ತಾಂತ್ರಿಕ ದೋಷ ಕಾಣಿಸಿಕೊಂಡ ಹಿನ್ನೆಲೆ ಬೆಂಗಳೂರಿನಿಂದ ನಾಗ್ಪುರಕ್ಕೆ 126 ಪ್ರಯಾಣಿಕರನ್ನು ಹೊತ್ತು ತೆರಳುತ್ತಿದ್ದ ಇಂಡಿಗೋ ವಿಮಾನ (Indigo Flight) ಹೈದರಾಬಾದ್‌ನ ರಾಜೀವ್ ಗಾಂಧಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ (Rajiv Gandhi International Airport) ತುರ್ತು ಭೂಸ್ಪರ್ಶ (Emergency Landing) ಮಾಡಿದೆ.
ಪ್ರಯಾಣದ ಸಮಯದಲ್ಲಿ ತಾಂತ್ರಿಕ ದೋಷ ಕಂಡುಬಂದ ನಂತರ ಪೈಲಟ್ ತಕ್ಷಣ ವಿಮಾನ ನಿಲ್ದಾಣ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ. ಅಲ್ಲದೇ ತುರ್ತು ಪ್ರೋಟೋಕಾಲ್‌ಗಳನ್ನು ಸಕ್ರಿಯಗೊಳಿಸಿದ ಬಳಿಕ ವಿಮಾನವು ಹೈದರಾಬಾದ್‌ನಲ್ಲಿ ಸುರಕ್ಷಿತವಾಗಿ ಇಳಿಯಿತು. ಸದ್ಯ ಎಲ್ಲಾ ಪ್ರಯಾಣಿಕರು ಮತ್ತು ಸಿಬ್ಬಂದಿ ಸುರಕ್ಷಿತರಾಗಿದ್ದಾರೆ ಎಂದು ವರದಿಯಾಗಿದೆ. ಇದನ್ನೂ ಓದಿ: ಶಾಸಕಾಂಗ ಪಕ್ಷದ ನಾಯಕನಾಗಿ ಡಿ.ಕೆ.ಶಿವಕುಮಾರ್ ಆಯ್ಕೆ
𝙀𝙈𝙀𝙍𝙂𝙀𝙉𝘾𝙔 𝙇𝘼𝙉𝘿𝙄𝙉𝙂 𝙀𝙉𝙎𝙐𝙍𝙀𝙎 𝟭𝟮𝟲 𝙋𝘼𝙎𝙎𝙀𝙉𝙂𝙀𝙍𝙎’ 𝙎𝘼𝙁𝙀𝙏𝙔 🚨✈️🛫🛬🛩️
An IndiGo flight operating from Bengaluru to Nagpur with 126 passengers on board made an emergency landing at Hyderabad’s Rajiv Gandhi International Airport (RGIA) after a… pic.twitter.com/xwXCG7ZdUM
— Hyderabad Rising (@HydRising_1) May 30, 2026
ವಿಮಾನ ಸಿಬ್ಬಂದಿ ಮತ್ತು ವಿಮಾನ ನಿಲ್ದಾಣ ತಂಡ ತ್ವರಿತ ಕ್ರಮ ಕೈಗೊಂಡಿದ್ದು, ವಿಮಾನ ಸುರಕ್ಷಿತವಾಗಿ ಲ್ಯಾಂಡ್ ಆಗಿದೆ. ಲ್ಯಾಂಡಿಂಗ್ ಬಳಿಕ ಪ್ರಯಾಣಿಕರನ್ನು ಸುರಕ್ಷಿತವಾಗಿ ಸ್ಥಳಾಂತರಿಸಲಾಗಿದೆ. ಇದನ್ನೂ ಓದಿ: ಈ ವಯಸ್ಸಲ್ಲಿ ನನಗೆ ಚಿನ್ನಿದಾಂಡು ಆಡೋಕೂ ಬರುತ್ತಿರಲಿಲ್ಲ: ಸೂರ್ಯವಂಶಿಯನ್ನು ಹೊಗಳಿದ ಅಮಿತಾಬ್ ಬಚ್ಚನ್

