ಶುಕ್ರವಾರ ನಡೆದ ಐಪಿಎಲ್ (IPL) ಕ್ವಾಲಿಫೈಯರ್ 2ರಲ್ಲಿ ಗುಜರಾತ್ ಟೈಟಾನ್ಸ್ (GT) ವಿರುದ್ಧ ರಾಜಸ್ಥಾನ್ ರಾಯಲ್ಸ್ (RR) ಸೋಲು ಅನುಭವಿಸಿ ಟೂರ್ನಿಯಿಂದ ಹೊರಬಿತ್ತು. ಆದರೆ 15 ವರ್ಷದ ವೈಭವ್ ಸೂರ್ಯವಂಶಿ (Vaibhav Sooryavanshi) ಪಂದ್ಯದಲ್ಲಿ ತಮ್ಮ ಪ್ರತಿಭೆಯನ್ನು ಅದ್ಭುತವಾಗಿ ಸಾಬೀತುಪಡಿಸಿದರು. ಸೋಲಿನ ನಂತರ ವೈಭವ್ ಅವರ ಭಾವನಾತ್ಮಕ ವೀಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಬಾಲಿವುಡ್ ಸೂಪರ್‌ಸ್ಟಾರ್ ಅಮಿತಾಬ್ ಬಚ್ಚನ್ (Amitabh Bachchan) ಸೂರ್ಯವಂಶಿಯ ಆಟವನ್ನು ಮೆಚ್ಚಿ ಹೊಗಳಿದ್ದಾರೆ.
ಪಂದ್ಯದಲ್ಲಿ ಸೋಲುಂಡ ಬಳಿಕ ವೈಭವ್ ನಿರಾಶೆಗೊಂಡು ಕಣ್ಣೀರಿಟ್ಟಿದ್ದರು. ಈ ವೀಡಿಯೊಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ಆದರೆ ವೈಭವ್ ಆಟವನ್ನು ಬಿಗ್ ಬಿ ಅಮಿತಾಬ್ ಸೇರಿದಂತೆ ಕ್ರಿಕೆಟ್ ವಿಶ್ಲೇಷಕರು ಯುವ ಆಟಗಾರನ ಪ್ರದರ್ಶನವನ್ನು ಹಾಡಿ ಹೊಗಳಿಸಿದ್ದಾರೆ.
T 5756(i) –
Sooryavanshi – १५ साल की उम्र का अद्भुत सूर्या ।
इस उम्र में तो हम बंटों और गुल्ली डंडा भी ठीक से नहीं खेल पा रहे थे !!— Amitabh Bachchan (@SrBachchan) May 29, 2026
ವೈಭವ್ ಸೂರ್ಯವಂಶಿ ಅವರ ಅದ್ಭುತ ಪ್ರದರ್ಶನವನ್ನ ಕಂಡು ಎಕ್ಸ್‌ನಲ್ಲಿ ಟ್ವೀಟ್ ಮಾಡಿರುವ ಅಮಿತಾಬ್, 15ನೇ ವಯಸ್ಸಿನಲ್ಲಿ ಸೂರ್ಯವಂಶಿ ಅದ್ಭುತವಾಗಿ ಆಡಿದ್ದಾನೆ. ಆ ವಯಸ್ಸಿನಲ್ಲಿ ನಮಗೆ ಗೋಲಿ ಅಥವಾ ಚಿನ್ನಿ ದಾಂಡು ಆಡಲು ಕೂಡ ಸರಿಯಾಗಿ ಬರುತ್ತಿರಲ್ಲ. ಆದರೆ ಈ ಹುಡುಗ ಇಷ್ಟು ಚಿಕ್ಕ ವಯಸ್ಸಿಗೆ ವಿಶ್ವದ ದೊಡ್ಡ ವೇದಿಕೆಯಲ್ಲಿ ಅಬ್ಬರಿಸುತ್ತಿದ್ದಾನೆ ಎಂದು ಸಂತಸ ವ್ಯಕ್ತಪಡಿಸಿದ್ದಾರೆ.
ಐಪಿಎಲ್ ಇತಿಹಾಸದಲ್ಲಿ ಅತ್ಯಂತ ಕಿರಿಯ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ 15 ವರ್ಷದ ವೈಭವ್ ಸೂರ್ಯವಂಶಿ, ತಮ್ಮ ಸ್ಫೋಟಕ ಬ್ಯಾಟಿಂಗ್ ಮೂಲಕ ಕ್ರಿಕೆಟ್ ಲೋಕದ ಗಮನ ಸೆಳೆದಿದ್ದಾರೆ. ರಾಜಸ್ಥಾನ್ ರಾಯಲ್ಸ್ ತಂಡದ ಪರವಾಗಿ ಆಡುತ್ತಿರುವ ಈ ಯುವ ಪ್ರತಿಭೆ, ಇತ್ತೀಚೆಗೆ ಗುಜರಾತ್ ಟೈಟಾನ್ಸ್ ವಿರುದ್ದದ ಪಂದ್ಯದಲ್ಲಿ ತೋರಿದ ಪ್ರದರ್ಶನ ಇಡೀ ದೇಶದ ಕ್ರೀಡಾಭಿಮಾನಿಗಳ ಮೆಚ್ಚುಗೆಗೆ ಪಾತ್ರವಾಗಿದೆ. ಇದೀಗ ಅಮಿತಾಭ್ ಬಚ್ಚನ್ ಕೂಡ ಈ ಪುಟ್ಟ ಬಾಲಕನ ಬ್ಯಾಟಿಂಗ್ ಕೌಶಲ್ಯಕ್ಕೆ ಮಾರುಹೋಗಿದ್ದು, ಸೋಶಿಯಲ್ ಮೀಡಿಯಾದಲ್ಲಿ ವಿಶೇಷವಾಗಿ ಅಭಿನಂದಿಸಿದ್ದಾರೆ.
