Connect with us

Latest

ಮಹಿಳೆಯರಿಬ್ಬರ ಬ್ಯಾಗ್‍ನಲ್ಲಿ 49.98 ಲಕ್ಷ ಹಣ ಪತ್ತೆ

Published

on

ಡಿಸ್ಪುರ್: ಅಸ್ಸಾಂನ ಹೊಜೈ ಜಿಲ್ಲೆಯ ಲುಮ್ಡಿಂಗ್ ರೈಲ್ವೆ ನಿಲ್ದಾಣದಲ್ಲಿ ದಿನನಿತ್ಯದ ತಪಾಸಣೆ ವೇಳೆ ಇಬ್ಬರು ಮಹಿಳೆಯರ ಬಳಿ 49,98,000 ರೂ. ಹಣ ಪತ್ತೆಯಾಗಿದ್ದು, ಸರ್ಕಾರಿ ರೈಲ್ವೆ ಪೊಲೀಸ್ (ಜಿಆರ್ ಪಿ) ಹಣವನ್ನು ವಶಪಡಿಸಿಕೊಂಡಿದ್ದಾರೆ.

ಇಬ್ಬರು ಮಹಿಳೆಯರು 15665 ಯುಪಿ ಡಿಮಾಪುರ್ ಬಿಜಿ ಎಕ್‍ಪ್ರೆಸ್ ರೈಲು ಮೂಲಕ ಪ್ರಯಾಣಿಸುತ್ತಿದ್ದರು. ಗುರುವಾರ ಸಂಜೆ ಸುಮಾರು 8 ಗಂಟೆಗೆ ಹಣವನ್ನು ವಶಪಡಿಸಿಕೊಳ್ಳಲಾಗಿದೆ. ಮೋಹನ್ ಹಾಲ್ಡರ್ ಪತ್ನಿ ಗಾಯತ್ರಿ ಹಾಲ್ಡರ್(60) ಮತ್ತು ಜಂತು ಹಾಲ್ಡರ್ ಪತ್ನಿ ಆರತಿ ಹಾಲ್ಡರ್(55) ಎಂದು ಗುರುತಿಸಲಾಗಿದ್ದು, ಸದ್ಯಕ್ಕೆ ಇಬ್ಬರನ್ನು ರೈಲ್ವೆ ಪೊಲೀಸರು ಬಂಧಿಸಿದ್ದಾರೆ.

ಪಶ್ಚಿಮ ಬಂಗಾಳದ ಕೂಚ್ ಬೆಹಾರ್ ಪೊಲೀಸ್ ಠಾಣೆಯ ವ್ಯಾಪ್ತಿಯನ್ನು ಬರುವ ಫ್ಯಾಸಿಟೋಲಾ ಗ್ರಾಮದವರು ಎಂದು ತಿಳಿದು ಬಂದಿದೆ. ಮಹಿಳೆಯರು ಕೂಚ್ ಬೆಹಾರ್ ನಿಂದ ಬೊಕಾಜೆನ್‍ಗೆ ಹಣವನ್ನು ಸಾಗಾಟ ಮಾಡುತ್ತಿದ್ದೆವು ಎಂದು ವಿಚಾರಣೆಯ ಸಂದರ್ಭದಲ್ಲಿ ಒಪ್ಪಿಕೊಂಡಿದ್ದಾರೆ.

ಈ ಕುರಿತು ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಇಂದು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ. ಸದ್ಯಕ್ಕೆ ಅಧಿಕಾರಿಗಳು ಹಣ ಯಾರದ್ದು? ಅದರ ಮೂಲದ ಬಗ್ಗೆ ತನಿಖೆ ಶುರು ಮಾಡಿದ್ದಾರೆ.