ಚಿಕ್ಕಮಗಳೂರು: ಬೈಕ್‌ಗೆ (Bike) ಸೈಡ್ ಕೊಡುವಾಗ ಚಾಲಕನ ನಿಯಂತ್ರಣ ತಪ್ಪಿ ಕಾರೊಂದು (Car) ಕಾಫಿ ತೋಟಕ್ಕೆ ನುಗ್ಗಿ, ಪಲ್ಟಿಯಾಗಿರುವ (Accident) ಘಟನೆ ಕಳಸ (Kalasa) ತಾಲೂಕಿನ ಬೈನೇಕಾಡು ಹೋಮ್ ಸ್ಟೇ ಬಳಿ ನಡೆದಿದೆ. ಕಾರಿನಲ್ಲಿದ್ದ ಐವರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ವ್ಯಾಗನರ್ ಕಾರು ಹೊರನಾಡಿನಿಂದ ಉಡುಪಿ ಕಡೆ ಹೊರಟಿತ್ತು. ಈ ವೇಳೆ, ಬೈನೇಕಾಡು ಹೋಮ್ ಸ್ಟೇ ಬಳಿ ಎದುರಿನಿಂದ ಬಂದ ಬೈಕ್‌ಗೆ ಕಾರಿನ ಚಾಲಕ ಸೈಡ್ ಕೊಡುವಾಗ ಈ ಅವಘಡ ನಡೆದಿದೆ. ನಿರಂತರ ಮಳೆಯಿಂದ ನೆನೆದಿದ್ದ ರಸ್ತೆ ಬದಿಗೆ ಕಾರು ಇಳಿಯುತ್ತಿದ್ದಂತೆ ಸ್ಕಿಡ್ ಆಗಿ ಕಾಫಿ ತೋಟಕ್ಕೆ ನುಗ್ಗಿದೆ. ಕೂಡಲೇ ಸ್ಥಳೀಯರು ಕಾರಿನಲ್ಲಿದ್ದವರನ್ನು ರಕ್ಷಿಸಿದ್ದಾರೆ. ಈ ಸಂಬಂಧ ಕಳಸ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ: ಬಿಎಂಟಿಸಿ ಬಸ್ಸುಗಳ ನಡುವೆ ಡಿಕ್ಕಿ- ಮೂವರು ಪ್ರಯಾಣಿಕರಿಗೆ ಗಾಯ
ಮಳೆಯಿಂದ ರಸ್ತೆ ಬದಿಯಲ್ಲಿ ನೆಲ ನೆನೆದಿರುತ್ತದೆ. ಇದರಿಂದ ಅಪಘಾತ ಆಗುವ ಸಾಧ್ಯತೆ ಇರುತ್ತದೆ. ಎಚ್ಚರಿಕೆಯಿಂದ ವಾಹನ ಸವಾರರು ಸೈಡ್ ಕೊಡಬೇಕು ಎಂದು ಪೊಲೀಸರು ಪ್ರವಾಸಿಗರಿಗೆ ಹಾಗೂ ಸ್ಥಳೀಯರಿಗೆ ಮನವಿ ಮಾಡಿದ್ದಾರೆ. ಇದನ್ನೂ ಓದಿ: ವೈರ್‌ನಿಂದ ಕುತ್ತಿಗೆ ಬಿಗಿದು ಪತ್ನಿ ಕೊಲೆ; ಮೂವರು ಮಕ್ಕಳನ್ನು ಬಿಟ್ಟು ಗಂಡ ಎಸ್ಕೇಪ್
