– ದಕ್ಷಿಣ ಏಷ್ಯಾದ ಅತಿ ದೊಡ್ಡ ಖಾಸಗಿ ವಲಯದ ಉತ್ಪಾದನಾ ಘಟಕ
– 5 ಸಾವಿರ ಉದ್ಯೋಗ ಸೃಷ್ಟಿ
ಭೋಪಾಲ್: ಕೇಂದ್ರ ಸರ್ಕಾರದ ‘ಆತ್ಮನಿರ್ಭರ ಭಾರತ’ ಯೋಜನೆಯಡಿ ದೇಶದ ರಕ್ಷಣಾ ಉತ್ಪಾದನಾ ಸಾಮರ್ಥ್ಯವನ್ನು ವಿಸ್ತರಿಸುವ ನಿಟ್ಟಿನಲ್ಲಿ ಅದಾನಿ ಡಿಫೆನ್ಸ್ ಅಂಡ್ ಏರೋಸ್ಪೇಸ್ (Adani Defence & Aerospace) ಸಂಸ್ಥೆಯು ಮಧ್ಯಪ್ರದೇಶದ ಶಿವಪುರಿಯಲ್ಲಿ ದಕ್ಷಿಣ ಏಷ್ಯಾದ (South Asia) ಅತಿ ದೊಡ್ಡ ಖಾಸಗಿ ವಲಯದ ಕ್ಷಿಪಣಿ ಉತ್ಪಾದನಾ ಘಟಕಕ್ಕೆ ಶಂಕುಸ್ಥಾಪನೆ ನೆರವೇರಿಸಿದೆ.
ಮಧ್ಯಪ್ರದೇಶದ ಮುಖ್ಯಮಂತ್ರಿ ಮೋಹನ್ ಯಾದವ್ (Mohan Yadav) ಹಾಗೂ ಕೇಂದ್ರ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ ಅವರ ಸಮ್ಮುಖದಲ್ಲಿ ಈ ಬೃಹತ್ ಯೋಜನೆy ಶಂಕುಸ್ಥಾಪನೆ ನಡೆಯಿತು.
ಅದಾನಿ ಸಮೂಹವು ಮುಂಬರುವ ಮೂರು ವರ್ಷಗಳಲ್ಲಿ ಈ ಅತ್ಯಾಧುನಿಕ ಕ್ಷಿಪಣಿ ಉತ್ಪಾದನಾ ಪರಿಸರ ವ್ಯವಸ್ಥೆಗಾಗಿ 2,500 ಕೋಟಿ ರೂ. ಹೂಡಿಕೆ ಮಾಡಲಿದೆ. ಕಚ್ಚಾ ವಸ್ತುಗಳ ಸಂಸ್ಕರಣೆಯಿಂದ ಹಿಡಿದು ಸಂಪೂರ್ಣವಾಗಿ ಸಿದ್ಧಗೊಂಡ ಕ್ಷಿಪಣಿ ವ್ಯವಸ್ಥೆಗಳ (Mission-ready missiles) ಉತ್ಪಾದನೆಯವರೆಗಿನ ಇಡೀ ಪ್ರಕ್ರಿಯೆಯು ಒಂದೇ ಸೂರಿನಡಿ ನಡೆಯಲಿದೆ.
ಭಾರತದಲ್ಲಿ ಸಾರ್ವಜನಿಕ ವಲಯವನ್ನು ಹೊರತುಪಡಿಸಿ, ಭಾರತದ ಖಾಸಗಿ ರಂಗದಲ್ಲಿ ಇಂತಹ ಸೌಲಭ್ಯ ನಿರ್ಮಾಣವಾಗುತ್ತಿರುವುದು ಇದೇ ಮೊದಲು. ಈ ಯೋಜನೆಯಿಂದ ಸುಮಾರು 5,000 ನೇರ ಮತ್ತು ಪರೋಕ್ಷ ಉದ್ಯೋಗಗಳು ಸೃಷ್ಟಿಯಾಗಲಿವೆ. ಈ ರಕ್ಷಣಾ ಪೂರೈಕೆ ಜಾಲದ ಮೂಲಕ 50ಕ್ಕೂ ಹೆಚ್ಚು ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಉದ್ಯಮಗಳಿಗೆ (MSMEs) ವ್ಯವಹಾರದ ಅವಕಾಶಗಳು ಸಿಗಲಿವೆ. ಇದನ್ನೂ ಓದಿ: 13 ವರ್ಷದ ಬಾಲಕಿ ಮೇಲೆ 30 ಪುರುಷರಿಂದ ನಿರಂತರ ಗ್ಯಾಂಗ್‌ರೇಪ್; ಆರೋಪಿಗಳಿಗೆ ಸೇರಿದ 4 ಹೋಟೆಲ್‌ಗಳು ಧ್ವಂಸ
#WATCH | Shivpuri, Madhya Pradesh: Adani Airport Holdings Limited (AAHL) Director Jeet Adani, Union Minister Jyotiraditya Scindia, CM Mohan Yadav attend the groundbreaking ceremony for the Missile and Propellant Manufacturing Facility by Adani Defence at Shivpuri, Madhya Pradesh.… pic.twitter.com/sfmRdOKUzN
— ANI (@ANI) July 5, 2026
ಏನೇನು ಉತ್ಪಾದನೆ?
ಶಿವಪುರಿಯ ಈ ಕಾಂಪ್ಲೆಕ್ಸ್‌ನಲ್ಲಿ ಮಧ್ಯಮ ಮತ್ತು ದೀರ್ಘ ವ್ಯಾಪ್ತಿಯ ಕ್ಷಿಪಣಿ ವ್ಯವಸ್ಥೆಗಳನ್ನು (Medium and Long-Range Missile Systems) ತಯಾರಿಸಲಾಗುತ್ತದೆ. ಜೊತೆಗೆ ಕಾಂಪೋಸಿಟ್ ಪ್ರೊಪೆಲ್ಲೆಂಟ್ ಮತ್ತು ಟಿಎನ್‌ಟಿ (TNT) ನಂತಹ ಸ್ಫೋಟಕ ದರ್ಜೆಯ ವಸ್ತುಗಳ ಉತ್ಪಾದನಾ ಘಟಕಗಳೂ ಇಲ್ಲಿರಲಿವೆ.
ವಿದೇಶಿ ರಕ್ಷಣಾ ಆಮದುಗಳ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡಿ, ದೇಶೀಯ ಶಕ್ತಿಯನ್ನು ವೃದ್ಧಿಸುವ ನಿಟ್ಟಿನಲ್ಲಿ ಶಿವಪುರಿ ಘಟಕವು ನಮ್ಮ ರಕ್ಷಣಾ ಪ್ರಯಾಣದ ಮುಂದಿನ ದೂಡ್ಡ ಹೆಜ್ಜೆಯಾಗಿದೆ.
आज शिवपुरी में यशस्वी मुख्यमंत्री श्री @DrMohanYadav51 जी की गरिमामयी उपस्थिति में @AdaniDefence द्वारा ₹2500 करोड़ की लागत से स्थापित होने वाले दक्षिण एशिया के निजी क्षेत्र का सबसे बड़ा मिसाइल ईकोसिस्टम – अत्याधुनिक डिफेंस मैन्युफैक्चरिंग प्लांट के शिलान्यास का सौभाग्य प्राप्त… pic.twitter.com/qkYkdxexWw
— Jyotiraditya M. Scindia (@JM_Scindia) July 5, 2026
ಮಧ್ಯಪ್ರದೇಶದಲ್ಲಿ ರಕ್ಷಣಾ ಹಬ್
ಈಗಾಗಲೇ ಮಧ್ಯಪ್ರದೇಶದ ಗ್ವಾಲಿಯರ್‌ನಲ್ಲಿ ಅದಾನಿ ಸಂಸ್ಥೆಯು ಲೈಟ್ ಮೆಷಿನ್ ಗನ್ (LMG), ಅಸಾಲ್ಟ್ ರೈಫಲ್ ಮತ್ತು ಕಾರ್ಬೈನ್‌ಗಳನ್ನು ಉತ್ಪಾದಿಸುತ್ತಿದೆ. ಗ್ವಾಲಿಯರ್ ಘಟಕವು ನಿಗದಿತ ಸಮಯಕ್ಕಿಂತ 11 ತಿಂಗಳು ಮುಂಚಿತವಾಗಿಯೇ 2,000 ಎಲ್‌ಎಂಜಿಗಳನ್ನು ಭಾರತೀಯ ಸಶಸ್ತ್ರ ಪಡೆಗಳಿಗೆ ಯಶಸ್ವಿಯಾಗಿ ತಲುಪಿಸಿದೆ. ಈಗ ಶಿವಪುರಿ ಘಟಕವೂ ಸೇರಿಕೊಳ್ಳುವುದರಿಂದ ಈ ಇಡೀ ವಲಯವು ಮಧ್ಯಪ್ರದೇಶದ ಪ್ರಮುಖ ರಕ್ಷಣಾ ಆವಿಷ್ಕಾರದ ಹಬ್ ಆಗಿ ಹೊರಹೊಮ್ಮಲಿದೆ.
ಅದಾನಿ ಸಮೂಹವು ಮಧ್ಯಪ್ರದೇಶದಲ್ಲಿ ಸಿಮೆಂಟ್, ಗಣಿಗಾರಿಕೆ, ಹೈಡ್ರೋ ಪಂಪ್ಡ್ ಸ್ಟೋರೇಜ್ ಮತ್ತು ಥರ್ಮಲ್ ಪವರ್ ಸೇರಿದಂತೆ ಒಟ್ಟು 1.10 ಲಕ್ಷ ಕೋಟಿ ರೂ. ಹೂಡಿಕೆಯ ಗುರಿಯನ್ನು ಹೊಂದಿದ್ದು, 2030ರ ವೇಳೆಗೆ ರಾಜ್ಯದಲ್ಲಿ 1.2 ಲಕ್ಷ ಉದ್ಯೋಗಗಳನ್ನು ಸೃಷ್ಟಿಸುವ ಯೋಜನೆ ಹಾಕಿಕೊಂಡಿದೆ.
