ಬಾಗಲಕೋಟೆ: ಮಹಾರಾಷ್ಟ್ರದ ಪಶ್ಚಿಮ ಘಟ್ಟ(Western Ghats) ಪ್ರದೇಶದಲ್ಲಿ ಭಾರಿ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ, ಕೃಷ್ಣಾ ನದಿಗೆ(Krishna River) ಅಪಾರ ಪ್ರಮಾಣದ ನೀರು ಹರಿದು ಬರುತ್ತಿದೆ. ತೀವ್ರ ಬೇಸಿಗೆಯಿಂದಾಗಿ ಸಂಪೂರ್ಣ ಬರಿದಾಗಿದ್ದ ಕೃಷ್ಣಾ ನದಿಗೆ ಈಗ ದಿಢೀರ್ ಜೀವಕಳೆ ಬಂದಂತಾಗಿದ್ದು, ನದಿ ತೀರದ ರೈತರ ಮೊಗದಲ್ಲಿ ಮಂದಹಾಸ ಮೂಡಿಸಿದೆ.
ಜಮಖಂಡಿ(Jamkhandi) ತಾಲ್ಲೂಕಿನ ಪ್ರಮುಖ ಜಲಮೂಲವಾದ ಹಿಪ್ಪರಗಿ ಬ್ಯಾರೇಜ್‌ಗೆ(Hipparagi Barrage) ನೀರಿನ ಒಳಹರಿವು ಗಂಟೆಯಿಂದ ಗಂಟೆಗೆ ಹೆಚ್ಚುತ್ತಿದೆ. ಪ್ರಸ್ತುತ ಒಳಹರಿವು 30,000 ಕ್ಯೂಸೆಕ್ ಇದ್ದರೆ 22,000 ಕ್ಯೂಸೆಕ್ ಹೊರ ಹರಿವಿದೆ. ನದಿಗೆ ಬರುತ್ತಿರುವ ನೀರಿನ ಪ್ರಮಾಣವನ್ನು ನಿಯಂತ್ರಿಸಲು ಬ್ಯಾರೇಜ್‌ನ ಒಟ್ಟು 22 ಗೇಟ್‌ಗಳ ಪೈಕಿ ಈಗಾಗಲೇ 16 ಗೇಟ್‌ಗಳನ್ನು ತೆರೆದು ನೀರನ್ನು ಹೊರಗೆ ಬಿಡಲಾಗುತ್ತಿದೆ. ಇದನ್ನೂ ಓದಿ: ದೂದಗಂಗಾ, ವೇದಗಂಗಾ ನದಿಗಳು ಉಕ್ಕಿ ಹರಿದು 4ಕ್ಕೂ ಹೆಚ್ಚು ಸೇತುವೆಗಳು ಜಲಾವೃತ
ಪ್ರವಾಹದ ಭೀತಿಯಿರುವುದರಿಂದ ರೈತರು ನದಿ ತೀರದಲ್ಲಿ ಅಳವಡಿಸಿರುವ ತಮ್ಮ ಎಲೆಕ್ಟ್ರಿಕ್ ಮೋಟರ್ ಪಂಪ್‌ಸೆಟ್‌ಗಳನ್ನು ತಕ್ಷಣವೇ ತೆರವುಗೊಳಿಸುವಂತೆ ಆದೇಶಿಸಲಾಗಿದೆ. ಇದನ್ನೂ ಓದಿ: ಬೆಳಗಾವಿಯಲ್ಲಿ ಧಾರಾಕಾರ ಮಳೆ: ಉರುಳಿ ಬಿದ್ದ ಬೃಹತ್ ಹುಣಸೆ ಮರ, 4 ಮನೆಗಳಿಗೆ ಹಾನಿ
