ಚಿಕ್ಕಬಳ್ಳಾಪುರ: ಅಯೋಧ್ಯೆ ರಾಮ ಮಂದಿರ ದೇವಾಲಯದಲ್ಲಿ ಆರ್‌ಎಸ್‌ಎಸ್ ಹಾಗೂ ಬಿಜೆಪಿಗೆ ಸೇರಿದವರು ಹಣ ಕಳವು ಮಾಡುತ್ತಿದ್ದರೆ, ಇತ್ತ ಬಿಜೆಪಿ ರಾಜಕೀಯ ನಾಯಕರು ನರೇಂದ್ರ ಮೋದಿ (PM Modi) ಪ್ರೋತ್ಸಾಹದಿಂದ ಮತಕಳವು ಮಾಡುತ್ತಿದ್ದಾರೆ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ (Mallikarjun Kharge) ಆರೋಪಿಸಿದರು.
ಬೆಂಗಳೂರು ಗ್ರಾಮಾಂತರ (Bengaluru Rural) ಜಿಲ್ಲೆ ದೇವನಹಳ್ಳಿ ಬಳಿ ಅಂಬೇಡ್ಕರ್ ಪ್ರತಿಮೆ ಅನಾವರಣ ಕಾರ್ಯಕ್ರಮದಲ್ಲಿ ಭಾಗಿಯಾಗಿ ಅವರು ಮಾತನಾಡಿದರು. ಇದನ್ನೂ ಓದಿ: ರಾಮನ ಹೆಸರಿನಲ್ಲಿ 20 ಸಾವಿರ ಕೋಟಿ ಲೂಟಿ ಆಗಿದೆ ಅನ್ನೋ ಮಾಹಿತಿ ಇದೆ: ಮಲ್ಲಿಕಾರ್ಜುನ ಖರ್ಗೆ ಆತಂಕ

ಧಾರ್ಮಿಕ ಸಂಸ್ಥೆಗಳಲ್ಲಿ ಹಣ ಕಳ್ಳತನ ನಡೆಯುತ್ತಿರುವಂತೆ, ಬಿಜೆಪಿ ನಾಯಕರು ಮತ ಕಳ್ಳತನ (Vote Chori) ಮಾಡುತ್ತಿದ್ದಾರೆ. ಎಸ್‌ಐಆರ್ ಮೂಲಕ ಹೊಸ ನಿಯಮಗಳನ್ನ ತಂದು ಮತ ಕಳವಿಗೆ ಪ್ರೋತ್ಸಾಹ ನೀಡಲಾಗುತ್ತಿದೆ. ಪ್ರಧಾನಿ ನರೇಂದ್ರ ಮೋದಿ ಅವರಿಂದಲೇ ರಾಜಕೀಯ ನಾಯಕರಿಗೆ ಮತ ಕಳವು ಮಾಡಲು ಪ್ರೋತ್ಸಾಹ ಸಿಗುತ್ತಿದೆ ಎಂದು ವಾಗ್ದಾಳಿ ನಡೆಸಿದರು.
ಪಶ್ಚಿಮ ಬಂಗಾಳ, ಮಹಾರಾಷ್ಟ್ರ, ಹರಿಯಾಣ ಹಾಗೂ ಅಸ್ಸಾಂ ರಾಜ್ಯಗಳಲ್ಲಿ ಮತ ಕಳವು ನಡೆದಿದೆ ಎಂದು ಆರೋಪಿಸಿದ ಖರ್ಗೆ, ಅಧಿಕಾರದ ದುರುಪಯೋಗದಿಂದ ಯಾರನ್ನಾದರೂ ಬಗ್ಗಿಸಬಹುದು ಎಂಬ ಸಂದೇಶವನ್ನ ಕೇಂದ್ರ ಸರ್ಕಾರ ನೀಡುತ್ತಿದೆ ಎಂದು ಹೇಳಿದರು. ಇದನ್ನೂ ಓದಿ: ಕರ್ನಾಟಕದಲ್ಲಿ ಬೇರೆ ರಾಜ್ಯದ ಅಧಿಕಾರಿಗಳಿಂದ ಎಸ್‌ಐಆರ್ ಮಾಡಿಸಲಿ: ಆರ್.ಅಶೋಕ್ ಆಗ್ರಹ
ಇ.ಡಿ. ಮತ್ತು ಸಿಬಿಐ ಸಂಸ್ಥೆಗಳನ್ನ ರಾಜಕೀಯ ಉದ್ದೇಶಗಳಿಗೆ ಬಳಸಿಕೊಳ್ಳಲಾಗುತ್ತಿದೆ. ಇದಕ್ಕೋಸ್ಕರ ಅಂಬೇಡ್ಕರ್ ಅವರು ಸಂವಿಧಾನ ರಚಿಸಿದ್ರಾ? ಎಂದು ಪ್ರಶ್ನಿಸಿದರು. ಸಂವಿಧಾನವನ್ನು ಗೌರವಿಸದಿದ್ದರೆ ದೇಶದಲ್ಲಿ ನ್ಯಾಯ ದೊರೆಯುವುದಿಲ್ಲ. ಪ್ರಜಾಪ್ರಭುತ್ವ ಮತ್ತು ಸಂವಿಧಾನವನ್ನು ಉಳಿಸಲು ಎಲ್ಲರೂ ಎಚ್ಚೆತ್ತುಕೊಳ್ಳಬೇಕು ಎಂದು ಕರೆ ನೀಡಿದರು.
