ಮಂಡ್ಯ: ವಿಜಯೇಂದ್ರ (BY Vijayendra) ಪಾಪ ಇನ್ನೂ ಮಗು. ಆತನಿಗೆ ಇನ್ನೂ ಏನೂ ಗೊತ್ತಿಲ್ಲ ಎನ್ನುವ ಮೂಲಕ ಕಾಂಗ್ರೆಸ್ (Congress) ವಿರುದ್ಧ ವಾಗ್ದಾಳಿ ಮಾಡಿದ್ದ ನೂತನ ಬಿಜೆಪಿ ರಾಜ್ಯಾಧ್ಯಕ್ಷರಿಗೆ ತಮ್ಮ ಮಾತಿನ ಮೂಲಕ ಸಚಿವ ಚಲುವರಾಯಸ್ವಾಮಿ (N Chaluvaraya Swamy) ಕಾಲೆಳೆದಿದ್ದಾರೆ.
ಮಂಡ್ಯ (Mandya) ಜಿಲ್ಲೆಯ ಮಳವಳ್ಳಿಯ ಹಲಗೂರಿನಲ್ಲಿ ಮಾತನಾಡಿದ ಅವರು, ಕುಮಾರಸ್ವಾಮಿ (HD Kumaraswamy) ಸೌಂಡ್ ಜಾಸ್ತಿ ಆಗಿದೆ ಎಂದು ವಿಜಯೇಂದ್ರ ಸೌಂಡ್ ಜಾಸ್ತಿ ಮಾಡುತ್ತಿದ್ದಾರೆ. ಪಾಪ ವಿಜಯೇಂದ್ರಗೆ ಏನು ಗೊತ್ತು ಆತ ಇನ್ನೂ ಮಗು. ಅವರ ತಂದೆ ಸಿಎಂ ಆದಾಗ ತಂದೆ ಜೊತೆಯಲ್ಲಿ ತೊಡಗಿಸಿಕೊಂಡಿದ್ದರಿಂದ ರಾಜ್ಯದ ವಿಚಾರ ತಿಳಿದಿದ್ದೇನೆ ಅಂದರೆ ಏನೂ ಮಾಡಲು ಆಗಲ್ಲ ಎಂದರು. ಇದನ್ನೂ ಓದಿ: ದೇಶದ ವ್ಯವಸ್ಥೆಯಲ್ಲಿ ಕಳ್ಳರು ಒಂದೇ, ಸುಳ್ಳರು ಒಂದೇ.. ಭಗವಂತ ಇದ್ದಾನೆ: ಹೆಚ್‌ಡಿಕೆ
Advertisement
Advertisement
ಪಕ್ಷದ ಅಧ್ಯಕ್ಷನಾಗಿ ಯಾವ ಪದ ಬಳಕೆ ಮಾಡಬೇಕು ಎಂದು ಅವರಿಗೆ ಗೊತ್ತಿಲ್ಲ. ಇವರಿಗೆ ಉತ್ತರ ಕೊಡಲು ನಮಗೆ ಗೊತ್ತಿಲ್ಲ ಅಂತಾ ಅಲ್ಲ. ಅವರಿಗಿಂತ ಹೆಚ್ಚಾಗಿ ಮಾತನಾಡುತ್ತೇವೆ. ನಾವು ಹಳ್ಳಿಯಿಂದಲೇ ಬಂದಿರೋದು. ನಮಗೂ ಭಾಷೆ ಗೊತ್ತಿದೆ. ಯಾವ ಭಾಷೆ ಬಳಸಬೇಕು ಅಂತಾನೂ ಗೊತ್ತಿದೆ. ನಮ್ಮ ನಾಲಿಗೆ ಹಿಡಿತದಲ್ಲಿ ಇರಬೇಕು ಅಂತಾ ಸುಮ್ಮನಿದ್ದೇವೆ ಅಷ್ಟೇ ಎಂದು ಕಿಡಿಕಾರಿದರು. ಇದನ್ನೂ ಓದಿ: ಪುತ್ರನ ಚುನಾವಣೆಗೆ ಸಿಎಂ ಇಬ್ರಾಹಿಂ ನನ್ನಿಂದ ಹಣ ಪಡೆದಿದ್ದಾರೆ: ಟಿಎ ಶರವಣ
Advertisement
Advertisement
ವಿಜಯೇಂದ್ರಗೆ ಪಕ್ಷದಲ್ಲಿ ತುಂಬಾ ವ್ಯತ್ಯಾಸ ಇದೆ. ಅವರನ್ನು ಯಾರೂ ಅಧ್ಯಕ್ಷರನ್ನಾಗಿ ಒಪ್ಪಲು ತಯಾರಿಲ್ಲ. ಈಗ ಅಶೋಕ್ ಮನೆ ಮನೆಗೆ ಹೋಗಿ ಸಮಾಧಾನ ಮಾಡುತ್ತೇವೆ ಎಂದಿದ್ದಾರೆ. ಇಲ್ಲಿಯೇ ಅವರ ಪಕ್ಷ ಅವರನ್ನು ಎಷ್ಟು ಒಪ್ಪಿಕೊಂಡಿದ್ದಾರೆ ಎಂದು ಗೊತ್ತಾಗುತ್ತದೆ ಎಂದು ಹೇಳಿದರು. ಇದನ್ನೂ ಓದಿ: ಸಿಎಂ ಬದಲಾವಣೆ ಬಗ್ಗೆ ಮಾತಾಡೋಕೆ ಯಾರಿಗೂ ಯೋಗ್ಯತೆ ಇಲ್ಲ: ನರೇಂದ್ರಸ್ವಾಮಿ