ಮಂಡ್ಯ: ಪಕ್ಷದಲ್ಲಿ ಸಚಿವರನ್ನು ಸೇರಿಸಿಕೊಂಡು ಸಿಎಂ (CM) ಬದಲಾವಣೆ ಹಾಗೂ ಆಯ್ಕೆಯ ಬಗ್ಗೆ ಮಾತಾಡೋಕೆ ಯಾರಿಗೂ ಯೋಗ್ಯತೆ ಇಲ್ಲ ಎನ್ನುವ ಮೂಲಕ ಸ್ವಪಕ್ಷೀಯರ ವಿರುದ್ಧವೇ ಶಾಸಕ ನರೇಂದ್ರಸ್ವಾಮಿ (Narendraswamy) ವಾಗ್ದಾಳಿ ನಡೆಸಿದ್ದಾರೆ.
ಮಂಡ್ಯದ (Mandya) ಮಳವಳ್ಳಿಯಲ್ಲಿ ಮಾತನಾಡಿದ ಶಾಸಕ ನರೇಂದ್ರಸ್ವಾಮಿ, ಸಹಜವಾಗಿ ಕೆಲವರಿಗೆ ರಾಜಕೀಯ ಅನುಭವ ಇಲ್ಲ. ಆಡಳಿತದ ಅನುಭವವೇ ಬೇರೆ, ಪಕ್ಷದ ರಾಜಕೀಯ ಅನುಭವವೇ ಬೇರೆ. ಈ ವಿಚಾರದಲ್ಲಿ ಕೆಲವರಿಗೆ ಅನುಭವ ಇಲ್ಲ. ಅದಕ್ಕಾಗಿ ಕೆಲವರು ಸಿಎಂ ವಿಚಾರ ಮಾತಾಡುತ್ತಾ ಇದ್ದಾರೆ. ಅವರಿಂದ ಆಗಿಂದಾಗ್ಗೆ ಈ ರೀತಿ ಮಾತು ಕೇಳಿ ಬರ್ತಾ ಇದೆ. ಅವರು ಅವರ ಜಿಲ್ಲೆಯ ಲೀಡರ್‌ಗಾಗಿ ಸಿಎಂ ಅವರು ಆಗಬೇಕು ಇವರು ಆಗಬೇಕು ಎಂದು ಹೇಳುತ್ತಾ ಇದ್ದಾರೆ. ಅದರಲ್ಲಿ ಏನು ತಪ್ಪಿಲ್ಲ ಎಂದರು. ಇದನ್ನೂ ಓದಿ: ಬಿಜೆಪಿಯವ್ರು ಹೇಳಿದ್ರೆ ಕುಮಾರಸ್ವಾಮಿ ಚಡ್ಡಿನೂ ಹಾಕ್ತಾರೆ, ದತ್ತ ಮಾಲೆನೂ ಹಾಕ್ತಾರೆ: ಚಲುವರಾಯಸ್ವಾಮಿ
Advertisement
Advertisement
ಪಕ್ಷದಲ್ಲಿ ಸಚಿವರನ್ನು ಸೇರಿಸಿಕೊಂಡು ಸಿಎಂ ಬದಲಾವಣೆ ಬಗ್ಗೆ ಮಾತಾಡೋಕೆ ಯಾರಿಗೂ ಯೋಗ್ಯತೆ ಇಲ್ಲ. ಸಿಎಂ ಆಯ್ಕೆ ಬದಲಾವಣೆ ಬಗ್ಗೆ ಮಾತಾಡೋಕೆ ಯಾರಿಗೂ ಯೋಗ್ಯತೆ ಇಲ್ಲ. ಈ ಬಗ್ಗೆ ಮಾತಾಡೋಕೆ ಯಾರಿಗೂ ಹಕ್ಕು ಕೊಟ್ಟಿಲ್ಲ. ಸಿಎಂ ವಿಚಾರ ಹೈಕಮಾಂಡ್‌ಗೆ ಬಿಟ್ಟಿದ್ದು. ನನ್ನ ಹೇಳಿಕೆಯನ್ನು ಖಾರವಾಗಿಯೇ ಹಾಕಿ. ಎಐಸಿಸಿ ಅಧ್ಯಕ್ಷರು, ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಅವರಿಗೆ ಬಿಟ್ಟ ವಿಚಾರ ಇದು. ಬಹಿರಂಗವಾಗಿ ಸಿಎಂ ವಿಚಾರ ಮಾತಾಡೋ ಯೋಗ್ಯತೆ ನಮಗೆ ಯಾರಿಗೂ ಇಲ್ಲ, ಮಾತಾಡಬಾರದು. ಅದು ಅಕ್ಷಮ್ಯ ಎಂದು ನರೇಂದ್ರಸ್ವಾಮಿ ವಾಗ್ದಾಳಿ ನಡೆಸಿದ್ದಾರೆ. ಇದನ್ನೂ ಓದಿ: ಸೂರ್ಯ ಹುಟ್ಟುವುದು ಎಷ್ಟು ಸತ್ಯವೋ ಸತೀಶ್ ಜಾರಕಿಹೊಳಿ ಸಿಎಂ ಆಗುವುದು ಅಷ್ಟೇ ಸತ್ಯ: ಸವದತ್ತಿ ಶಾಸಕ