ಬೆಂಗಳೂರು: ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ 2ನೇ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ (International Airport) ನಿರ್ಮಾಣ ಮಾಡಲು ರಾಜ್ಯ ಸರ್ಕಾರ ಯೋಜನೆ ರೂಪಿಸಿದೆ. ಈಗಾಗಲೇ ಇರುವ ಕೆಂಪೇಗೌಡ ವಿಮಾನ ನಿಲ್ದಾಣದ (Kempegowda Airport) ಮೇಲಿನ ಹೊರೆ ಕಡಿಮೆ ಮಾಡಲು ಈ ಕ್ರಮ ಕೈಗೊಳ್ಳಲಾಗಿತ್ತು. ಈ ಸಂಬಂಧ ಇಂದು ಸಿಎಂ ಡಿಕೆ ಶಿವಕುಮಾರ್ ಅವರು ಅಧಿಕಾರಿಗಳ ಜೊತೆ ಮಹತ್ವದ ಸಭೆ ನಡೆಸಿದ್ರು.
ಸಭೆಯ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಮುಖ್ಯಮಂತ್ರಿಗಳು, 2ನೇ ಏರ್‌ಪೋರ್ಟ್ ಬೆಂಗಳೂರು ದಕ್ಷಿಣಕ್ಕೆ ಹೋಗಲಿದೆ ಎಂದು ಹೇಳಿದ್ರು. ಇದನ್ನೂ ಓದಿ: ಕೇಂದ್ರ ಆಹಾರ ಸಚಿವಾಲಯದಿಂದ 4,422 ಕೋಟಿ ಬಿಡುಗಡೆಗೆ ಮನವಿ ಮಾಡಿದ್ದೇನೆ – ಸಚಿವ ಕೆ.ಹೆಚ್ ಮುನಿಯಪ್ಪ

ಅಧಿಕಾರಿಗಳಿ ಈ ಹಿಂದೆ ಏನಾಗಿತ್ತು ಅನ್ನೋದ್ರ ವರದಿಯನ್ನ ಸಭೆಯಲ್ಲಿ ಕೊಟ್ಟಿದ್ದಾರೆ. ಆದಷ್ಟು ಊರುಗಳನ್ನ ಸ್ಥಳಾಂತರ ಮಾಡುವಂತಹ ಕೆಲಸ ಆಗಬಾರದು, ಗುಡ್ಡಗಳು ಇರಬಾರದು ಅಂತಹ ಕಡೆ ಜಾಗಗಳನ್ನ ನೋಡಿ ಅಂತ ಹೇಳಿದ್ದೇನೆಂದು ತಿಳಿಸಿದ್ರು. ಇದನ್ನೂ ಓದಿ: ಮಡಿಕೇರಿಯಲ್ಲಿ ಮಳೆ ಅಬ್ಬರ; ಜು.12ರವರೆಗೆ ರಾಜಾಸೀಟ್ ಉದ್ಯಾನವನಕ್ಕೆ ಪ್ರವಾಸಿಗರಿಗಿಲ್ಲ ಎಂಟ್ರಿ
ಸದ್ಯಕ್ಕೆ ಇಂತಹದ್ದೇ ಜಾಗ ಅನ್ನೋದೇನಿಲ್ಲ. ಆದ್ರೆ 2ನೇ ಏರ್‌ಪೋರ್ಟ್ ದಕ್ಷಿಣಕ್ಕೆ ಹೋಗಲಿದೆ. ದಕ್ಷಿಣಕ್ಕೆ ಅಂತಲೇ ಅವರು ಪ್ರಸ್ತಾವನೆ ಸಲ್ಲಿಸಿದ್ದರು. ಆದ್ರೆ ಜಾಗದ ಬೆಲೆ ಕಡಿಮೆ ಇರಬೇಕು, ಸರ್ಕಾರಕ್ಕೆ ಹೊರೆ ಆಗಬಾರದು. ಜೊತೆಗೆ ಊರುಗಳನ್ನ ಸ್ಥಳಾಂತರ ಮಾಡುವ ಕೆಲಸ ಆಗಬಾರದು. ಕಾರ್ಯ ಸಾಧ್ಯತೆ ಇರುವಲ್ಲಿ ಏರ್‌ಪೋರ್ಟ್ ಮಾಡುವಂತೆ ಜಾಗ ನೋಡಲು ಹೇಳಿದ್ದೇನೆ ಎಂದು ತಿಳಿಸಿದರು.
