ಹಾವೇರಿ: ಐತಿಹಾಸಿಕ ಮದಗ ಮಾಸೂರು ಕೆರೆಯಲ್ಲಿ ಮುಳುಗುತ್ತಿದ್ದ ಬಾಲಕನನ್ನ ಸ್ಥಳೀಯರು ರಕ್ಷಣೆ ಮಾಡಿದ ಘಟನೆ ಜಿಲ್ಲೆಯ ಹಿರೇಕೆರೂರು ತಾಲೂಕಿನಲ್ಲಿ ನಡೆದಿದೆ.
ಶಿವಮೊಗ್ಗ ಜಿಲ್ಲೆ ಶಿಕಾರಿಪುರ ತಾಲೂಕಿನ ಹಾರನಹಳ್ಳಿ ಗ್ರಾಮದ ನಿವಾಸಿ ರವಿ(10) ಮಾಸೂರು ಕೆರೆಗೆ ಈಜಲು ಹೋಗಿದ್ದ ವೇಳೆ ಈ ಘಟನೆ ಸಂಭವಿಸಿದೆ.
Advertisement
ಮದಗದ ಕೆಂಚಮ್ಮ ದೇವಿಯ ದರ್ಶನ ಪಡೆಯಲು ಕುಟುಂಬ ಸಮೇತ ಬಾಲಕ ಬಂದಿದ್ದ. ಪೋಷಕರು ದೇವರ ದರ್ಶನಕ್ಕೆ ತೆರಳಿದ್ದರೆ ರವಿ ಕೆರೆಗೆ ಈಜಲು ತೆರಳಿದ್ದ.
Advertisement
ಈ ಸಂದರ್ಭದಲ್ಲಿ ಹಿರೇಕೆರೂರು ಶಾಸಕ ಯುಬಿ ಬಣಕಾರ ಅವರು ಕೆರೆಗೆ ಬಾಗಿನ ಅರ್ಪಿಸಲು ಆಗಮಿಸಿದ್ದರು. ಈ ವೇಳೆ ಮುಳುಗುತ್ತಿದ್ದ ಬಾಲಕನನ್ನ ನೋಡಿದ ಸ್ಥಳೀಯರಾದ ಶಿವನಾಯಕ್, ಲಕ್ಷ್ಮಣನಾಯಕ್ ಎಂಬವರು ರಕ್ಷಣೆ ಮಾಡಿದ್ದಾರೆ. ರಕ್ಷಣೆಯ ಬಳಿಕ ಪೋಷಕರ ಜೊತೆಯಲ್ಲಿ ರವಿ ಸ್ವ ಗ್ರಾಮಕ್ಕೆ ವಾಪಸ್ ತೆರಳಿದ್ದಾನೆ.
Advertisement
Advertisement