ಅಹಮದಾಬಾದ್: ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಬಾರ್ಡರ್ ಗಾವಾಸ್ಕರ್ ಟ್ರೋಫಿ (Border Gavaskar Trophy) ಟೆಸ್ಟ್ ಸರಣಿಯ 4ನೇ ಪಂದ್ಯದಲ್ಲಿ ಶತಕದ ಆಟವಾಡಿದ ಆಸ್ಟ್ರೇಲಿಯಾ (Australia) ಕ್ರಿಕೆಟಿಗ ಉಸ್ಮಾನ್ ಖವಾಜ (Usman Khawaja) ಭಾರತ ನೆಲದಲ್ಲಿ ವಿಶೇಷ ಸಾಧನೆ ನಿರ್ಮಿಸಿದ್ದಾರೆ.
Advertisement
ಇಲ್ಲಿನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆರಂಭಿಸಿದ ಆಸ್ಟ್ರೇಲಿಯಾ ತಂಡ ಉತ್ತಮ ಇನ್ನಿಂಗ್ಸ್ ಕಟ್ಟುವಲ್ಲಿ ಯಶಸ್ವಿಯಾಗಿದೆ. ಮೊದಲ ದಿನದಾಟದ ಅಂತ್ಯಕ್ಕೆ ಉಸ್ಮಾನ್ ಶತಕದೊಂದಿಗೆ 90 ಓವರ್‌ಗಳಲ್ಲಿ 4 ವಿಕೆಟ್ ಕಳೆದುಕೊಂಡು 255 ರನ್ ಗಳಿಸಿತ್ತು. ಖವಾಜ ಮೊದಲ ದಿನ 251 ಎಸೆತಗಳಲ್ಲಿ 104 ರನ್ ಗಳಿಸಿ ಶತಕ ಪೂರ್ಣಗೊಳಿಸಿದ್ದರು. ಅಲ್ಲದೇ 2ನೇ ದಿನ ಕೆಮರೊನ್ ಗ್ರೀನ್ ಜೊತೆಗೂಡಿದ ಖವಾಜ 358 ಎಸೆತಗಳಲ್ಲಿ ದ್ವಿಶತಕದ (208 ರನ್) ಜೊತೆಯಾಟವಾಡಿ ತಂಡದ ಮೊತ್ತ 400ರ ಗಡಿ ದಾಟಿಸುವಲ್ಲಿ ಯಶಸ್ವಿಯಾದರು.
Advertisement
Advertisement
ಭಾರತದ ಸ್ಪಿನ್ ಹಾಗೂ ಫಾಸ್ಟ್ ಬೌಲಿಂಗ್ ಅನ್ನು ಸಮರ್ಥವಾಗಿ ಎದುರಿಸಿದ ಉಸ್ಮಾನ್ ಖವಾಜ 2ನೇ ದಿನದಾಟದಲ್ಲಿ ಒಟ್ಟು 422 ಎಸೆತಗಳಲ್ಲಿ 180 ರನ್ ಹೊಡೆದು ಔಟಾದರು. ತಮ್ಮ 346ನೇ ಎಸೆತದಲ್ಲಿ 150 ರನ್ ಗಳಿಸುತ್ತಿದ್ದಂತೆ, 2001ರ ಬಳಿಕ ಭಾರತದ ನೆಲದಲ್ಲಿ 150 ರನ್ ಗಳಿಸಿದ ಮೊದಲನೇ ಆಸ್ಟ್ರೇಲಿಯನ್ ಓಪನರ್ ಎಂಬ ಸಾಧನೆಗೆ ಭಾಜನರಾದರು. ಇದನ್ನೂ ಓದಿ: Ind Vs Aus: ಆಸ್ಟ್ರೇಲಿಯಾದ ಪ್ರಧಾನಿ ಜೊತೆ ಮೋದಿ ಮ್ಯಾಚ್ ವೀಕ್ಷಣೆ
Advertisement
ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲಿ ಭಾರತದಲ್ಲಿ 150ಕ್ಕೂ ಹೆಚ್ಚು ರನ್ ಗಳಿಸಿದ ಆಸ್ಟ್ರೇಲಿಯಾದ 4ನೇ ಆರಂಭಿಕ ಬ್ಯಾಟ್ಸ್ಮ್ಯಾನ್ ಎನಿಸಿಕೊಂಡರು. 2001ರಲ್ಲಿ ಚೆನ್ನೈನ ಎಂ.ಚಿದಂಬರಂ ಕ್ರೀಡಾಂಗಣದಲ್ಲಿ ಮ್ಯಾಥ್ಯೂ ಹೇಡನ್ (Matthew Hayden) ಭಾರತದ ವಿರುದ್ಧ 203 ರನ್ ಗಳಿಸಿದ್ದರು. ಇದನ್ನೂ ಓದಿ: ಉಸ್ಮಾನ್ ಖವಾಜ ಶತಕದಾಟ – ಮೊದಲ ದಿನ ಆಸ್ಟ್ರೇಲಿಯಾಗೆ ಮೇಲುಗೈ
1956ರಲ್ಲಿ ಜಿಮ್ ಬರ್ಕ್ 161 ರನ್ ಗಳಿಸಿದ್ದರು, 1679ರಲ್ಲಿ ಗ್ರಹಾಮ್ ಯಲಾಪ್ 167 ರನ್ ಗಳಿಸಿದ್ದರು, ಮ್ಯಾಥ್ಯೂ ಹೇಡನ್ 2001ರಲ್ಲಿ 203 ರನ್ ಗಳಿಸಿದ್ದರು. ಇದೀಗ 2023ರಲ್ಲಿ ಉಸ್ಮಾನ್ ಖವಾಜ 180 ರನ್ ಗಳಿಸಿ ಭಾರತ ನೆಲದಲ್ಲಿ 150ಕ್ಕೂ ಹೆಚ್ಚು ರನ್ ಗಳಿಸಿದ ನಾಲ್ಕನೇ ಬ್ಯಾಟರ್ ಎನಿಸಿಕೊಂಡಿದ್ದಾರೆ.