ಮುಂಬೈ: ರಾಜಕೀಯವಾಗಿ ಭಿನ್ನಾಭಿಪ್ರಾಯ ಇದ್ದರೂ ಪ್ರಧಾನಿ ನರೇಂದ್ರ ಮೋದಿ (Narendra Modi) ದೇಶದ ಗೌರವವನ್ನು ಅಂತರರಾಷ್ಟ್ರೀಯ ಮಟ್ಟದಲ್ಲಿ ಕಾಪಾಡಲು ಕೆಲಸ ಮಾಡುತ್ತಿದ್ದಾರೆ ಎಂದು ಎನ್‌ಸಿಪಿ (NCP) ಮುಖ್ಯಸ್ಥ ಶರದ್ ಪವಾರ್ (Sharad Pawar) ಮೆಚ್ಚುಗೆ ವ್ಯಕ್ತಡಿಸಿದ್ದಾರೆ.
ಮುಂಬೈನಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಶರದ್ ಪವಾರ್, ರಾಜಕೀಯ ಭಿನ್ನಾಭಿಪ್ರಾಯಗಳು ಇರಬಹುದು. ಆದರೆ ದೇಶದ ಗೌರವದ ವಿಚಾರದಲ್ಲಿ ರಾಜಕೀಯವನ್ನು ತರಬಾರದು ಎಂದು ಹೇಳಿದರು.
प्रत्येक गोष्टीत राजकीय अर्थ शोधणाऱ्या स्वपक्षीय आणि इतरपक्षीय नेत्यानं शरद पवार साहेबांचा मोलाचा सल्ला.
पंतप्रधान मोदीजी देशाची प्रतिष्ठा जपण्याचं काम करत आहेत, त्यात विरोध अथवा मतभेद नकोत : मा.शरद पवार साहेब #Modiji #SharadPawar #Politics pic.twitter.com/gx9pFzKJ7O
— RisingStar MediaTech (@RSMediaTech) May 20, 2026
ಪ್ರಧಾನಿ ಮೋದಿ ವಿದೇಶಗಳಲ್ಲಿ ಭಾರತದ (India) ಪ್ರತಿಷ್ಠೆಯನ್ನು ಉಳಿಸಲು ಕೆಲಸ ಮಾಡುತ್ತಿದ್ದಾರೆ. ಮಾಜಿ ಪ್ರಧಾನಿಗಳಾದ ಇಂದಿರಾ ಗಾಂಧಿ, ಪಿ.ವಿ. ನರಸಿಂಹರಾವ್ ಮತ್ತು ಮನಮೋಹನ್ ಸಿಂಗ್ ದೇಶದ ಭವಿಷ್ಯ ಮತ್ತು ಗೌರವಕ್ಕೆ ಆದ್ಯತೆ ನೀಡಿದ್ದರು. ದೇಶದ ಹಿತಕ್ಕಾಗಿ ಒಟ್ಟಾಗಿ ಕೆಲಸ ಮಾಡುವ ಅವಕಾಶ ಬಂದಾಗ ಎಲ್ಲರೂ ಒಂದೇ ಉದ್ದೇಶದಿಂದ ಸೇರಬೇಕು ಎಂದು ಅವರು ತಿಳಿಸಿದರು. ಇದನ್ನೂ ಓದಿ: ಪ್ರಧಾನಿ ಮೋದಿ ‘ಹಾವಾಡಿಗ’ನಾಗಿ ಚಿತ್ರಿಸಿದ ನಾರ್ವೆ ಪತ್ರಿಕೆ – ಭಾರತೀಯರ ತೀವ್ರ ಆಕ್ರೋಶ

