ನವದೆಹಲಿ: ಭಾರತದ ಪ್ರಧಾನಿ ನರೇಂದ್ರ ಮೋದಿ (PM Narendra Modi) ಅವರನ್ನು ‘ಸ್ನೇಕ್ ಚಾರ್ಮರ್’ (ಹಾವಾಡಿಗ) ರೂಪದಲ್ಲಿ ಬಿಂಬಿಸಿ ನಾರ್ವೆಯ (Norway) ಪ್ರಮುಖ ಪತ್ರಿಕೆಯೊಂದು ಪ್ರಕಟಿಸಿರುವ ಕಾರ್ಟೂನ್ ಈಗ ಜಾಗತಿಕ ಮಟ್ಟದಲ್ಲಿ ಭಾರೀ ವಿವಾದಕ್ಕೆ ಕಾರಣವಾಗಿದೆ. ಸಾಮಾಜಿಕ ಜಾಲತಾಣಗಳಲ್ಲಿ ಈ ಚಿತ್ರ ವೈರಲ್ ಆಗುತ್ತಿರುದ್ದಂತೆ, ವಿದೇಶಿ ಮಾಧ್ಯಮದ ವಿರುದ್ಧ ಭಾರತೀಯರು (Indians) ತೀವ್ರ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ವಿವಾದಾತ್ಮಕ ಕಾರ್ಟೂನ್‌ನಲ್ಲೇನಿದೆ?
ನಾರ್ವೆಯ ಅತ್ಯಂತ ಜನಪ್ರಿಯ ದಿನಪತ್ರಿಕೆಯಾದ ‘ಆಫ್ಟೆನ್‌ಪೋಸ್ಟನ್’ (Aftenposten) ಈ ಕಾರ್ಟೂನ್ ಅನ್ನು ಪ್ರಕಟಿಸಿದೆ. ಅದರಲ್ಲಿ ಪ್ರಧಾನಿ ಮೋದಿ ಅವರು ಹಾವಾಡಿಗನಂತೆ ಕುಳಿತು ‘ಪುಂಗಿ’ ಊದುತ್ತಿರುವಂತೆ ಚಿತ್ರಿಸಲಾಗಿದೆ. ಪುಂಗಿಯ ನಾದಕ್ಕೆ ತಕ್ಕಂತೆ ಬುಟ್ಟಿಯಿಂದ ಮೇಲೇಳುವ ಹಾವಿನ ಜಾಗದಲ್ಲಿ ‘ಪೆಟ್ರೋಲ್ ಬಂಕ್‌ನ ನೋಜಲ್’ ಅನ್ನು ತೋರಿಸಲಾಗಿದೆ.
ಭಾರತದಲ್ಲಿ ಇತ್ತೀಚೆಗೆ ಹೆಚ್ಚಾಗುತ್ತಿರುವ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಏರಿಕೆಯನ್ನು ವ್ಯಂಗ್ಯ ಮಾಡಲು ಈ ಕಾರ್ಟೂನ್ ಬಳಸಿದೆ.
ಕೇವಲ ಕಾರ್ಟೂನ್ ಮಾತ್ರವಲ್ಲದೆ, ಅದರ ಜೊತೆ ಪ್ರಕಟವಾದ ಲೇಖನಕ್ಕೆ A clever yet annoying man (ಬುದ್ಧಿವಂತ ಮತ್ತು ಸ್ವಲ್ಪ ಕಿರಿಕಿರಿ ಉಂಟುಮಾಡುವ ವ್ಯಕ್ತಿ) ಎಂಬ ವಿವಾದಾತ್ಮಕ ಶೀರ್ಷಿಕೆಯನ್ನು ನೀಡಲಾಗಿದೆ. ಇದು ಭಾರತೀಯರ ಕೆರಳಿಕೆಗೆ ಪ್ರಮುಖ ಕಾರಣವಾಗಿದೆ.
ಭಾರತೀಯರ ಆಕ್ರೋಶಕ್ಕೆ ಯಾಕೆ?
ಬ್ರಿಟಿಷರ ಕಾಲದಲ್ಲಿ ಭಾರತವನ್ನು ‘ಹಾವಾಡಿಗರ ಮತ್ತು ಮಾಟಮಂತ್ರಗಳ ದೇಶ’ ಎಂದು ಹೀಗಳೆಯಲಾಗುತ್ತಿತ್ತು. ಜಾಗತಿಕವಾಗಿ ಭಾರತ ಇಷ್ಟೊಂದು ಬೆಳೆದಿದ್ದರೂ, ವಿದೇಶಿ ಮಾಧ್ಯಮಗಳು ಇನ್ನೂ ಅದೇ ಹಳೇ ಮನಸ್ಥಿತಿಯಲ್ಲಿ ಭಾರತವನ್ನು ನೋಡುತ್ತಿವೆ ಎಂದು ನೆಟ್ಟಿಗರು ಕಿಡಿಕಾರಿದ್ದಾರೆ. ಇದನ್ನೂ ಓದಿ: ಸಂಬಂಧಗಳನ್ನು ಸಿಹಿಗೊಳಿಸುತ್ತಿದ್ದೇವೆ – ಮೋದಿ ಕೊಟ್ಟ ‘ಮೆಲೋಡಿ’ ಟಾಫಿಗೆ ಪಾರ್ಲೆ ಫನ್ನಿ ರಿಯಾಕ್ಷನ್
So this is what the so-called “world’s freest press” looks like?
Norway’s largest newspaper Aftenposten publishes a cartoon portraying PM Modi as a snake charmer during his Oslo visit, alongside the line “a clever and slightly annoying man.” 🇮🇳
Imagine the outrage if an Asian… pic.twitter.com/OIfOYz8VAf
— India First Post (@ifpost47) May 19, 2026
ತಂತ್ರ ಅಭಿವ್ಯಕ್ತಿ ಅಥವಾ ವ್ಯಂಗ್ಯದ ಹೆಸರಿನಲ್ಲಿ ವಿಶ್ವದ ಅತಿ ದೊಡ್ಡ ಪ್ರಜಾಪ್ರಭುತ್ವ ದೇಶದ ಪ್ರಧಾನಿಯನ್ನು ಈ ರೀತಿ ಅವಮಾನಿಸುವುದು ಸರಿಯಲ್ಲ” ಎಂದು ಹಲವರು ಎಕ್ಸ್ (ಟ್ವಿಟರ್) ನಲ್ಲಿ ಆಕ್ಷೇಪ ಎತ್ತಿದ್ದಾರೆ.
ಭಾರತವು ಆರ್ಥಿಕ ಮತ್ತು ತಂತ್ರಜ್ಞಾನ ರಂಗದಲ್ಲಿ ಮುನ್ನುಗ್ಗುತ್ತಿರುವುದನ್ನು ಜೀರ್ಣಿಸಿಕೊಳ್ಳಲು ಸಾಧ್ಯವಾಗದ ಕೆಲವು ಪಾಶ್ಚಿಮಾತ್ಯ ಮಾಧ್ಯಮಗಳು ಉದ್ದೇಶಪೂರ್ವಕವಾಗಿಯೇ ಇಂತಹ ನಿರೂಪಣೆಗಳನ್ನು ಸೃಷ್ಟಿಸುತ್ತಿವೆ ಎಂಬ ಟೀಕೆಗಳು ಕೇಳಿಬರುತ್ತಿವೆ.
This cartoon by @Aftenposten is not just satire—it clearly reflects a racist mindset.
Portraying India as a “snake charmer” is a dated colonial stereotype.
Hope @norwayinindia takes cognisance of this.
Even as India rises, there are attempts to belittle it—the only difference now… pic.twitter.com/rrHHwllqjf— AmbivertHoney (@TripathiHoney1) May 19, 2026
ವಿದೇಶಿ ಮಾಧ್ಯಮಗಳು ಭಾರತವನ್ನು ಈ ರೀತಿ ಲೇವಡಿ ಮಾಡುತ್ತಿರುವುದು ಇದೇ ಮೊದಲಲ್ಲ. 2014 ರಲ್ಲಿ ಭಾರತದ ‘ಮಂಗಳಯಾನ’ ಯಶಸ್ಸನ್ನು ಜೀರ್ಣಿಸಿಕೊಳ್ಳಲಾಗದ ನ್ಯೂಯಾರ್ಕ್ ಟೈಮ್ಸ್ ಪತ್ರಿಕೆಯು, ಹಸುವಿನೊಂದಿಗೆ ಭಾರತೀಯ ರೈತನೊಬ್ಬ ‘ಎಲೈಟ್ ಸ್ಪೇಸ್ ಕ್ಲಬ್’ ಬಾಗಿಲು ತಟ್ಟುತ್ತಿರುವಂತೆ ಕಾರ್ಟೂನ್ ಬಿಡಿಸಿ ನಂತರ ಕ್ಷಮೆ ಕೇಳಿತ್ತು.
ಸ್ಪೇನ್‌ನ ಪ್ರಮುಖ ಪತ್ರಿಕೆಯೊಂದು 2022 ರಲ್ಲಿ ಭಾರತದ ಆರ್ಥಿಕ ಬೆಳವಣಿಗೆಯನ್ನು ಇದೇ ರೀತಿಯ ‘ಹಾವಾಡಿಗ’ನ ಸಂಕೇತ ಬಳಸಿ ಚಿತ್ರಿಸಿ ಭಾರತೀಯರ ಕೆಂಗಣ್ಣಿಗೆ ಗುರಿಯಾಗಿತ್ತು.
ಪ್ರಸ್ತುತ ನಾರ್ವೆ ಪತ್ರಿಕೆಯ ಈ ನಡೆಗೆ ಜಾಗತಿಕ ಮಟ್ಟದಲ್ಲಿ ಭಾರತೀಯ ಮೂಲದ ರಾಜತಾಂತ್ರಿಕರು ಹಾಗೂ ನೆಟ್ಟಿಗರು ‘ಬಾಯ್ಕಾಟ್ ನಾರ್ವೆ ಮೀಡಿಯಾ’ ಹ್ಯಾಶ್‌ಟ್ಯಾಗ್‌ಗಳ ಮೂಲಕ ತಮ್ಮ ಪ್ರತಿರೋಧ ದಾಖಲಿಸುತ್ತಿದ್ದಾರೆ.

