ಪ್ರಧಾನಿ ಮೋದಿ (Narendra Modi) ಇಟಲಿ ಪ್ರಧಾನಿ ಮೆಲೋನಿಗೆ (Giorgia Meloni) ‘ಮೆಲೋಡಿ’ (Melody) ಟಾಫಿ ಉಡುಗೊರೆಯಾಗಿ ನೀಡಿದ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಇದಕ್ಕೆ ಟಾಫಿ ಚಾಕ್ಲೆಟ್ ತಯಾರಕ ಪಾರ್ಲೆ (Parle) ಕಂಪನಿಯ ಪ್ರತಿಕ್ರಿಯೆಯೂ ಈಗ ಭಾರೀ ಸದ್ದು ಮಾಡುತ್ತಿದೆ.
ವೈರಲ್ ಆಗಿರುವ ವಿಡಿಯೋದಲ್ಲಿ ಪ್ರಧಾನಿ ಮೋದಿ ಅವರು ಮೆಲೋನಿ ಅವರಿಗೆ ‘ಮೆಲೋಡಿ’ ಟಾಫಿ ಉಡುಗೊರೆಯಾಗಿ ನೀಡಿದ್ದಾರೆ. ಈ ವಿಡಿಯೋಗೆ ನೆಟ್ಟಿಗರು ಭಾರೀ ಖುಷಿಪಟ್ಟಿದ್ದು #ಮೆಲೋಡಿ ಮತ್ತೆ ಫುಲ್ ಟ್ರೆಂಡ್ ಆಗಿದೆ.
ಮೋದಿ ಮತ್ತು ಮೆಲೋನಿ ಸ್ನೇಹದ ಬಗ್ಗೆ ಈಗಾಗಲೇ ಸೋಷಿಯಲ್ ಮೀಡಿಯಾದಲ್ಲಿ ಸಾಕಷ್ಟು ಮೀಮ್ಸ್ ಹಾಗೂ ಪೋಸ್ಟ್‌ಗಳು ಹರಿದಾಡುತ್ತಿವೆ. ಇದೀಗ ‘ಮೆಲೋಡಿ’ ಟಾಫಿ ಗಿಫ್ಟ್ ಮಾಡಿದ ವಿಡಿಯೋ ಈ ಚರ್ಚೆಗೆ ಮತ್ತಷ್ಟು ರಂಗು ತುಂಬಿದೆ.
View this post on Instagram
ಈ ವಿಡಿಯೋ ವೈರಲ್ ಆದ ಬೆನ್ನಲ್ಲೇ ಮೆಲೋಡಿ ಟಾಫಿ ತಯಾರಿಸುವ ಪಾರ್ಲೆ ಪ್ರಾಡಕ್ಟ್ಸ್ ಕೂಡ ಪ್ರತಿಕ್ರಿಯೆ ನೀಡಿದೆ. ಕಂಪನಿ ತನ್ನ ಇನ್‌ಸ್ಟಾಗ್ರಾಂ ಖಾತೆಯಲ್ಲಿ ವಿಡಿಯೋವನ್ನು ರಿಪೋಸ್ಟ್ ಮಾಡಿ, 1983ರಿಂದ ಸಂಬಂಧಗಳನ್ನು ಸಿಹಿಗೊಳಿಸುತ್ತಿದ್ದೇವೆ ಎಂದು ಬರೆದುಕೊಂಡಿದೆ.
ಈ ಪೋಸ್ಟ್ ಕೂಡ ಸೋಷಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ ಆಗಿದ್ದು, ಹಲವರು ಫನ್ನಿ ಕಾಮೆಂಟ್‌ಗಳನ್ನು ಮಾಡಿದ್ದಾರೆ. ಇನ್ನು ಕೆಲವೇ ದಿನಗಳಲ್ಲಿ ಮೆಲೋಡಿ ಟಾಫಿ ಅಂಗಡಿಗಳಲ್ಲಿ ಸಿಗದೇ ಹೋಗಬಹುದು ಎಂದು ಕೆಲವರು ಕಾಮೆಂಟ್ ಮಾಡಿದ್ದರೆ, ಇನ್ನೂ ಕೆಲವರು ಈಗ ಮೆಲೋಡಿ ಮಾರಾಟ ಗಗನಕ್ಕೇರುತ್ತದೆ ಎಂದು ಬರೆದುಕೊಂಡಿದ್ದಾರೆ.
ಮೋದಿ ಮತ್ತು ಮೆಲೋನಿ ಒಟ್ಟಿಗೆ ಕಾಣಿಸಿಕೊಂಡಾಗಲೆಲ್ಲ ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆ ನಡೆಯುವುದು ಹೊಸದೇನಲ್ಲ. ಇದೀಗ ‘ಮೆಲೋಡಿ’ ಟಾಫಿ ವಿಡಿಯೋ ಮತ್ತೊಮ್ಮೆ ಇಂಟರ್ನೆಟ್‌ನಲ್ಲಿ ಭಾರೀ ಸದ್ದು ಮಾಡುತ್ತಿದೆ.

