ಗಾಂಧಿನಗರ: ಬಾರ್ಡರ್ -ಗವಾಸ್ಕರ್ ಸರಣಿಯ ಭಾರತ – ಆಸ್ಟ್ರೇಲಿಯಾ (India- Australia) ನಡುವಿನ ಕೊನೆಯ ಹಾಗೂ 4ನೇ ಟೆಸ್ಟ್ ಪಂದ್ಯವನ್ನು ವೀಕ್ಷಿಸಲು ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು ಗುರುವಾರ ಗುಜರಾತ್‍ನ ನರೇಂದ್ರ ಮೋದಿ ಕ್ರೀಡಾಂಗಣಕ್ಕೆ ಆಗಮಿಸಿದ್ದಾರೆ.
ಮೂರು ದಿನಗಳ ಭಾರತ ಪ್ರವಾಸದಲ್ಲಿರುವ ಆಸ್ಟ್ರೇಲಿಯಾ ಪ್ರಧಾನಿ ಆಂಥೋನಿ ಅಲ್ಬನೀಸ್ (Anthony Albanese) ಅವರೊಂದಿಗೆ ಪ್ರಧಾನಿ ಮೋದಿ ಪಂದ್ಯ ವೀಕ್ಷಿಸುತ್ತಿದ್ದಾರೆ. ಈಗಾಗಲೇ ಟಾಸ್ ಗೆದ್ದು ಆಸ್ಟ್ರೇಲಿಯಾ ತಂಡ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿದೆ. ಈ ವೇಳೆ ಮೋದಿ ಹಾಗೂ ಆಂಥೋನಿ ಅಲ್ಬನೀಸ್ 2 ತಂಡದ ಆಟಗಾರರೊಗೆ ಶುಭ ಕೋರಿದರು.
Advertisement
Advertisement
ಆಸ್ಟ್ರೇಲಿಯಾದ ಹೈಕಮಿಷನರ್ ಬ್ಯಾರಿಓ ಫಾರೆಲ್ ಮಾತನಾಡಿ, 2 ದೇಶಗಳನ್ನು ಒಗ್ಗೂಡಿಸುವ ವಿಷಯವೆಂದರೆ ಕ್ರಿಕೇಟ್ ಆಗಿದೆ. ಅಹಮದಾಬಾದ್‍ನಲ್ಲಿ ನಡೆಯುತ್ತಿರುವ 4ನೇ ಟೆಸ್ಟ್ ಕ್ರಿಕೆಟ್‍ನ ಮೊದಲ ದಿನದಂತೆ ಭಾರತ ಹಾಗೂ ಆಸ್ಟ್ರೇಲಿಯಾದ ನಾಯಕರನ್ನು ನೋಡುತ್ತಿರುವುದು ಸಂತಸ ತಂದಿದೆ ಎಂದು ಹೇಳಿದರು.
Advertisement
A special welcome & special handshakes! ????
The Honourable Prime Minister of India, Shri Narendra Modiji and the Honourable Prime Minister of Australia, Mr Anthony Albanese meet #TeamIndia & Australia respectively. @narendramodi | @PMOIndia | #TeamIndia | #INDvAUS pic.twitter.com/kFZsEO1H12
— BCCI (@BCCI) March 9, 2023
Advertisement
ಪ್ರಸ್ತುತ ಬಾರ್ಡರ್-ಗವಾಸ್ಕರ್ ಸರಣಿಯಲ್ಲಿ ಭಾರತ 2-1 ರಿಂದ ಮುನ್ನಡೆ ಸಾಧಿಸಿದೆ. ಇಂದಿನಿಂದ ನಡೆಯುತ್ತಿರುವ ಟೆಸ್ಟ್ ಪಂದ್ಯದಲ್ಲಿ ಗೆಲುವು ಸಾಧಿಸಿದರೆ ಭಾರತ ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್‍ಶಿಪ್‍ನ ಪೈನಲ್‍ಗೆ ಅರ್ಹತೆ ಪಡೆಯುವುದು ಖಚಿತವಾಗುತ್ತದೆ. ಇದನ್ನೂ ಓದಿ: ಮಾ.12ರಿಂದ ಕಿರುತೆರೆ ತಾರೆಯರ ಕ್ರಿಕೆಟ್: ಯಾರ ತಂಡದಲ್ಲಿ ಯಾರಿದ್ದಾರೆ?
ನಾಗ್ಪುರದಲ್ಲಿ ನಡೆದ ಮೊದಲ ಟೆಸ್ಟ್‌ನಲ್ಲಿ ಭಾರತ 132 ರನ್‍ಗಳಿಂದ ಗೆಲುವು ಸಾಧಿಸಿತ್ತು. ಎರಡನೇ ಟೆಸ್ಟ್‌ನಲ್ಲಿ ದೆಹಲಿಯಲ್ಲಿ 6 ವಿಕೆಟ್‍ಗಳ ಜಯದೊಂದಿಗೆ ಮತ್ತೊಮ್ಮೆ ಗೆಲುವು ಸಾಧಿಸಿತ್ತು. ಇಂದೋರ್‌ನಲ್ಲಿ ನಡೆದ 3ನೇ ಟೆಸ್ಟ್ ಪಂದ್ಯವನ್ನು 3 ದಿನಗಳಲ್ಲಿ 9 ವಿಕೆಟ್‍ಗಳಿಂದ ಗೆಲ್ಲುವ ಮೂಲಕ ಆಸ್ಟ್ರೇಲಿಯಾ ವೈಟ್‍ವಾಶ್ ಎದುರಿಸುವ ಸಾಧ್ಯತೆಯಿಂದ ತಪ್ಪಿಸಿಕೊಂಡಿದೆ. ಇದನ್ನೂ ಓದಿ:
ಹೋಳಿ ಸಂಭ್ರಮ – ಬಣ್ಣದಲ್ಲಿ ತೇಲಾಡಿದ ಟೀಂ ಇಂಡಿಯಾ ಸ್ಟಾರ್ಸ್