90ರ ದಶಕದಲ್ಲಿ ಬಾಲಿವುಡ್‌ನಲ್ಲಿ ಫೇಮಸ್ ಆಗಿದ್ದ ನಟಿ ಸಾಕ್ಷಿ ಶಿವಾನಂದ್ (Sakshi Shivanand), ವೃತ್ತಿಜೀವನದ ಉತ್ತುಂಗದಲ್ಲಿದ್ದಾಗಲೇ ಬಾಲಿವುಡ್‌ನಿಂದ ದೂರವಾಗಿದ್ದರು. ಇದೀಗ ವರ್ಷಗಳ ಬಳಿಕ ಅವರ ಆ ನಿರ್ಧಾರದ ಹಿಂದಿನ ಕಾರಣ ಹೊರಬಿದ್ದಿದ್ದು, ಬಾಲಿವುಡ್‌ನ ಅಂಡರ್‌ವರ್ಲ್ಡ್ ಸಂಪರ್ಕದ ಭಯಾನಕ ಸತ್ಯವನ್ನು ಅವರು ಬಹಿರಂಗಪಡಿಸಿದ್ದಾರೆ.
ನಟಿ ಸಾಕ್ಷಿ ಶಿವಾನಂದ್ ಬಾಲಿವುಡ್ ನಿರ್ಮಾಪಕರೊಬ್ಬರ ಮಾಫಿಯಾ ಸಂಪರ್ಕ ತಿಳಿದ ಬಳಿಕ ಭಯಗೊಂಡು ಬಾಲಿವುಡ್ ಬಿಟ್ಟು ಸೌತ್ ಸಿನಿಮಾಗಳತ್ತ ಮುಖ ಮಾಡಿದೆ ಎಂದು ಹೇಳಿಕೊಂಡಿದ್ದಾರೆ. ಇದನ್ನೂ ಓದಿ: ʼAlone And Lonelyʼ ಪೋಸ್ಟ್‌ಗೆ ಫ್ಯಾನ್ಸ್ ಶಾಕ್ – ಕೊನೆಗೂ ಮೌನ ಮುರಿದ ಸಲ್ಮಾನ್ ಖಾನ್
ಸಾಕ್ಷಿ ಶಿವಾನಂದ್ 1993ರಲ್ಲಿ ತೆಲುಗು ಚಿತ್ರದ ಮೂಲಕ ಸಿನಿರಂಗಕ್ಕೆ ಕಾಲಿಟ್ಟರು. ಬಳಿಕ ಹಿಂದಿ ಸಿನಿಮಾಗಳಲ್ಲೂ ನಟಿಸಿ ವಿನೋದ್ ಖನ್ನಾ, ಧರ್ಮೇಂದ್ರ ಸೇರಿದಂತೆ ಹಲವು ನಟರ ಜೊತೆ ಅಭಿನಯಿಸಿದರು. ಆದರೆ ಬಾಲಿವುಡ್‌ನಲ್ಲಿ ದೊಡ್ಡ ಯಶಸ್ಸು ಸಿಗದ ಕಾರಣ ಮತ್ತೆ ದಕ್ಷಿಣ ಭಾರತದ ಸಿನಿಮಾಗಳತ್ತ ಮುಖ ಮಾಡಿದರು. ಹ್ಯಾಟ್ರಿಕ್ ಹೀರೋ ಶಿವರಾಜಕುಮಾರ್ ಅಭಿನಯದ ‘ಗಲಾಟೆ ಅಳಿಯಂದಿರು’ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ ಸಾಕ್ಷಿ, ‘ನಾನು ನಾನೇ’, ‘ಸೈನಿಕ’, ‘ಕೋದಂಡರಾಮ’, ‘ಸೌಂದರ್ಯ’, ಮತ್ತು ‘ತಂದೆಗೆ ತಕ್ಕ ಮಗ’ ಮುಂತಾದ ಚಿತ್ರಗಳಲ್ಲಿ ನಟಿಸಿದ್ದಾರೆ.
ಬಳಿಕ ಮತ್ತೆ ಹಿಂದಿ ಚಿತ್ರರಂಗಕ್ಕೆ ಮರಳಿದ್ದ ಸಾಕ್ಷಿಗೆ ಸೈಫ್ ಅಲಿ ಖಾನ್ ಜೊತೆ ‘ತುಮ್’ ಸಿನಿಮಾದಲ್ಲಿ ನಟಿಸುವ ಅವಕಾಶ ಸಿಕ್ಕಿತ್ತು. ಆದರೆ ಆ ಚಿತ್ರದ ನಿರ್ಮಾಪಕರಿಗೆ ಅಂಡರ್‌ವರ್ಲ್ಡ್ ಸಂಪರ್ಕ ಇದೆ ಎಂಬ ಮಾಹಿತಿ ತಿಳಿದ ಬಳಿಕ ತೀವ್ರವಾಗಿ ಭಯಗೊಂಡಿದ್ದಾಗಿ ಸಾಕ್ಷಿ ಹಳೆಯ ಸಂದರ್ಶನದಲ್ಲಿ ಹೇಳಿಕೊಂಡಿದ್ದಾರೆ.ಇದನ್ನೂ ಓದಿ:ನಿವೃತ್ತ ನ್ಯಾಯಾಧೀಶೆ ಸೊಸೆ ಆತ್ಮಹತ್ಯೆ ಕೇಸ್ – ತ್ವಿಶಾ ಜೊತೆ ನಟಿಸಿದ್ದ ದೀಕ್ಷಿತ್ ಶೆಟ್ಟಿ ಹೇಳಿದ್ದೇನು?
ಬಾಲಿವುಡ್‌ನಲ್ಲಿ ಅಂಡರ್‌ವಲ್ಡ್ ಸಂಪರ್ಕ ತುಂಬಾ ಬಲವಾಗಿದೆ ಎಂದು ಎಲ್ಲರೂ ಹೇಳುತ್ತಿದ್ದರು. ಆದ್ದರಿಂದ ನಾನು ಭಯಗೊಂಡು ಹಿಂದಿ ಇಂಡಸ್ಟ್ರಿಯಿಂದ ಹೊರಬಂದು ತೆಲುಗು ಮತ್ತು ಕನ್ನಡ ಸಿನಿಮಾಗಳಲ್ಲಿ ನಟಿಸಲು ಶುರು ಮಾಡಿದೆ ಎಂದು ಅವರು ಹೇಳಿದ್ದಾರೆ.
ಈ ಘಟನೆಯ ನಂತರ ಸಾಕ್ಷಿ ಆ ಸಿನಿಮಾ ಬಿಟ್ಟು ನಿರ್ಮಾಪಕರ ಜೊತೆ ಸಂಪರ್ಕ ಕಡಿತಗೊಳಿಸಿದ್ದರಂತೆ. “ಅವರು ಕರೆ ಮಾಡುತ್ತಿದ್ದರು. ನಾನು ಮೊಬೈಲ್ ನಂಬರ್ ಕೂಡ ಬದಲಾಯಿಸಿಕೊಂಡೆ. ನಾನು ಎಲ್ಲಿದ್ದೇನೆ ಎಂಬುದು ಯಾರಿಗೂ ಗೊತ್ತಿರಲಿಲ್ಲ. ಆ ಘಟನೆ ನನ್ನ ಹಿಂದಿ ಸಿನಿಮಾ ಕರಿಯರ್‌ಗೆ ದೊಡ್ಡ ಹೊಡೆತ ಕೊಟ್ಟಿತು” ಎಂದು ಸಾಕ್ಷಿ ಹೇಳಿದ್ದಾರೆ.
ಇತ್ತೀಚೆಗೆ ನಟ ವರುಣ್ ಧವನ್ ಕೂಡ ತಮ್ಮ ತಂದೆ, ನಿರ್ದೇಶಕ ಡೇವಿಡ್ ಧವನ್ ಅವರಿಗೆ ಅಂಡರ್‌ವರ್ಲ್ಡ್‌ನಿಂದ ಬೆದರಿಕೆ ಬಂದಿತ್ತು ಎಂದು ಹೇಳಿಕೊಂಡಿದ್ದರು. ಅದೇ ರೀತಿ ನಿರ್ದೇಶಕ ಕರಣ್ ಜೋಹರ್ ಅವರಿಗೂ ‘ಕುಚ್ ಕುಚ್ ಹೋತಾ ಹೈ’ ಚಿತ್ರದ ಸಮಯದಲ್ಲಿ ಅಂಡರ್‌ವರ್ಲ್ಡ್ ಬೆದರಿಕೆ ಎದುರಿಸಬೇಕಾಯಿತು ಎಂದು ಫರಾ ಖಾನ್ ಬಹಿರಂಗಪಡಿಸಿದ್ದರು. ಇದನ್ನೂ ಓದಿ: ಹೀರೋ ರಕ್ಕಿ ಹೆಸರನ್ನೇ ಚಿತ್ರಕ್ಕೆ ಹೆಸರಿಟ್ಟ ನಿರ್ದೇಶಕ ವೆಂಕಟ್

