ಮುಂಬೈ: ಬಾಲಿವುಡ್ ನಟ ಸಲ್ಮಾನ್ ಖಾನ್ (Salman Khan) ಇತ್ತೀಚೆಗೆ ತಮ್ಮ ಎಕ್ಸ್ ಕಾತೆಯಲ್ಲಿ ಹಂಚಿಕೊಂಡಿದ್ದ ʼಅಲೋನ್ ಅಂಡ್ ಲೋನ್ಲಿʼ (Alone And Lonely’ ಪೋಸ್ಟ್ ವೈರಲ್ ಆಗಿದ್ದ ಬೆನ್ನಲ್ಲೇ ಅಭಿಮಾನಿಗಳು ಆತಂಕ ವ್ಯಕ್ತಪಡಿಸಿದ್ದರು. ಇದೀಗ ಈ ಬಗ್ಗೆ ಸ್ವತಃ ನಟ ಸ್ಪಷ್ಟನೆ ನೀಡಿದ್ದಾರೆ.
ಇತ್ತೀಚೆಗೆ ಸಲ್ಮಾನ್ ಖಾನ್ ಸೋಷಿಯಲ್ ಮೀಡಿಯಾದಲ್ಲಿ ‘ನಾನು ನಾನಾಗಿರಲು ಇರೋದು ಎರಡೇ ಮಾರ್ಗ ಅದುವೇ ಒಂಟಿತನ ಮತ್ತು ಒಂಟಿ ಜೀವನ’ ಎಂದು ಪೋಸ್ಟ್ ಮಾಡಿದ್ದರು. ಈ ಪೋಸ್ಟ್ ವೈರಲ್ ಆಗಿ, ನಟ ಏಕಾಂಗಿ ಜೀವನದ ಬಗ್ಗೆ ಮಾತನಾಡುತ್ತಿದ್ದಾರೆ ಎನ್ನುವ ಚರ್ಚೆ ಶುರುವಾಯಿತು. ಅಭಿಮಾನಿಗಳು ಕೂಡ ಸಲ್ಮಾನ್ ಖಾನ್ ಬಗ್ಗೆ ಕಳವಳ ವ್ಯಕ್ತಪಡಿಸಿದ್ದರು.
ಈ ಕುರಿತು ಇದೀಗ ಪ್ರತಿಕ್ರಿಯಿಸಿರುವ ಸಲ್ಮಾನ್ ಖಾನ್, ನಾನು ನನ್ನ ಬಗ್ಗೆ ಮಾತನಾಡುತ್ತಿರಲಿಲ್ಲ. ಇಷ್ಟು ದೊಡ್ಡ ಕುಟುಂಬ, ಸ್ನೇಹಿತರು ಇದ್ದಾಗ ನಾನು ಹೇಗೆ ಒಬ್ಬಂಟಿಯಾಗಿರಲು ಸಾಧ್ಯ? ನಿಮ್ಮೆಲ್ಲರ ಪ್ರೀತಿ, ಆಶೀರ್ವಾದ ಇದ್ದಾಗ ನಾನು ಒಂಟಿಯಾಗಲು ಹೇಗೆ ಸಾಧ್ಯ? ಎಂದು ಹೇಳಿದ್ದಾರೆ.
ಕೆಲವೊಮ್ಮೆ ಜನರ ಜೊತೆ ನಿರಂತರವಾಗಿ ಇದ್ದು ಸುಸ್ತಾಗುತ್ತದೆ. ಅದಕ್ಕಾಗಿಯೇ ಸ್ವಲ್ಪ ಕಾಲ ನನಗಾಗಿ ಸಮಯ ತೆಗೆದುಕೊಳ್ಳುತ್ತೇನೆ ಅಷ್ಟೇ. ಈ ಬಾರಿ ಯಾವುದೇ ಫೋಟೋ ಹಾಕಿರಲಿಲ್ಲ, ಅದನ್ನೇ ಬ್ರೇಕಿಂಗ್ ನ್ಯೂಸ್ ಮಾಡಿಬಿಟ್ಟಿದ್ದಾರೆ. ನಮ್ಮ ಮನೆಯವರೆಲ್ಲ ಏನಾಯ್ತು ಎಂದು ನನ್ನನ್ನು ಪ್ರಶ್ನಿಸುತ್ತಿದ್ದಾರೆ ಎಂದು ಹಾಸ್ಯಭರಿತವಾಗಿ ಬರೆದುಕೊಂಡಿದ್ದಾರೆ. ಸಲ್ಮಾನ್ ಪ್ರತಿಕ್ರಿಯೆಗೆ ಅಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದು, ಚಿಲ್ ಮಾಡಿ ಎನ್ನುವ ಸಲ್ಮಾನ್ ಆಡ್‌ನ ಮೀಮ್‌ಗಳಿಂದ ಕಾಮೆಂಟ್ ಮಾಡಿದ್ದಾರೆ
ಇನ್ನು ಸಿನಿಮಾ ವಿಚಾರಕ್ಕೆ ಬಂದರೆ, ಸಲ್ಮಾನ್ ಖಾನ್ ಮುಂದಿನ ದಿನಗಳಲ್ಲಿ ಮಾತೃಭೂಮಿ ಸಿನಿಮಾದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಈ ಚಿತ್ರವನ್ನು ಅಪೂರ್ವ ಲಖಿಯಾ ನಿರ್ದೇಶಿಸುತ್ತಿದ್ದು, ಗಲ್ವಾನ್ ಕಣಿವೆಯ ಭಾರತ-ಚೀನಾ ಸಂಘರ್ಷದ ಕಥೆ ಆಧಾರಿತವಾಗಿದೆ.

