ಆರವ್ ಕೊಲೆಯಾದ ಮಗು. ಆರೋಪಿಯನ್ನು ಜಿತೇಂದ್ರ ಅಲಿಯಾಸ್ ವಿರಾಜ್ ಎಂದು ಗುರುತಿಸಲಾಗಿದೆ. ಇದನ್ನೂ ಓದಿ: ಬಡ್ಡಿ ದಂಧೆಕೋರರ ಕಿರುಕುಳಕ್ಕೆ ವ್ಯಕ್ತಿ ಆತ್ಮಹತ್ಯೆ; ಸೆಲ್ಫಿ ವಿಡಿಯೋ, ಡೆತ್‌ನೋಟ್ ಪತ್ತೆ
ಫಿರೋಜಾಬಾದ್ ಜಿಲ್ಲಾ ನ್ಯಾಯಾಯಲವು ಆರೋಪಿ ಜಿತೇಂದ್ರಗೆ ಮರಣದಂಡನೆ ವಿಧಿಸಿದೆ. ಕೌಟುಂಬಿಕ ಕಲಹದಿಂದಾಗಿ ಗಂಡನಿಂದ ದೂರವಾಗಿ ಅಪ್ಪನ ಮನೆಗೆ ಬಂದಿದ್ದ ಶಿಕ್ಷಕಿ ರತಿದೇವಿ (24) ಎಂಬ ವಿವಾಹಿತೆಯನ್ನು ಮದುವೆ ಆಗುವಂತೆ ಕಿರಾಣಿ ಶಾಪ್ ನಡೆಸ್ತಿದ್ದ ಜಿತೇಂದ್ರ (25) ಪೀಡಿಸುತ್ತಿದ್ದ. ಆದರೆ, ನನಗೆ ಈಗಾಗಲೇ ಮದುವೆಯಾಗಿದೆ. ಒಂದೂವರೆ ವರ್ಷದ ಮಗನೂ ಇದ್ದಾನೆ ಅಂತ ಆಕೆ ತಿರಿಸ್ಕರಿಸುತ್ತಲೇ ಇದ್ದಳು. ಇದರಿಂದ ಸಿಟ್ಟಿಗೆದ್ದಿದ್ದ ಆತ, ಈ ಮಗುವೇ ಅಡ್ಡಿಯಾಗಿದೆ ಅಂತ ಕೊಲೆ ಸಂಚು ರೂಪಿಸಿದ್ದ. ಮೇ 31ರಂದು ಚಾಕ್ಲೆಟ್ ಕೊಡಿಸುವುದಾಗಿ ಮಗುವನ್ನು ಎತ್ತೊಯ್ದು ನೆಲಕ್ಕೆ ಬಡಿದು ಬಡಿದು ಕೊಂದಿದ್ದ. ನಂತರ ಎಸ್ಕೇಪ್ ಆಗಿದ್ದ. ಆದರೆ, ಪೊಲೀಸರು ಗುಂಡು ಹಾರಿಸಿ ಬಂಧಿಸಿ ಜೈಲಿಗಟ್ಟಿದ್ದರು.
ಮತ್ತೊಂದು ಕಡೆ, ಹರ್ಯಾಣದ ರೊಹ್ಟಕ್‌ನಲ್ಲಿ ಫ್ರೆಂಡ್ ಬರ್ತ್‌ಗೆ ಹೋಗಿದ್ದ 4 ವರ್ಷದ ಹೆಣ್ಣು ಮಗು ಸುರಭಿಯನ್ನು ಪಾನಮತ್ತನಾಗಿ ಬಂದಿದ್ದ ತಂದೆ ಜಿತೇಂದ್ರ ಎಂಬಾತನೇ ಮಾರಣಾಂತಿಕವಾಗಿ ಹಲ್ಲೆ ಮಾಡಿದ್ದಾನೆ. ಇಲ್ಲೂ ಮಗುವನ್ನು ನೆಲಕ್ಕೆ ಬಿಸಾಡಿದ್ದಾನೆ. ವಿಡಿಯೋ ವೈರಲ್ ಆಗಿದ್ದು, ರೈಲ್ವೇ ನಿಲ್ದಾಣದಲ್ಲಿ ಆತನನ್ನು ಬಂಧಿಸಲಾಗಿದೆ. ತನ್ನ ಕೃತ್ಯಕ್ಕೆ ಆತ ಕ್ಷಮೆಯಾಚಿಸಿದ್ದಾನೆ. ಮಗುವಿನ ತಾಯಿ ಕೂಡ ಪತಿಗೆ ಕಠಿಣ ಶಿಕ್ಷೆ ನೀಡದಂತೆ ಮನವಿ ಮಾಡಿದ್ದಾರೆ.ಇದನ್ನೂ ಓದಿ: Gurugram Encounter – ಪೊಲೀಸರು, ದುಷ್ಕರ್ಮಿಗಳ ನಡುವೆ ಭಾರೀ ಗುಂಡಿನ ಚಕಮಕಿ – ನಂದಲ್ ಗ್ಯಾಂಗ್‌ನ ನಾಲ್ವರು ಬಲಿ
