– ಪತ್ನಿ ರಾಧಾ ಯಾದವ್‌ಗೂ ಪರಿಹಾರ ಮೊತ್ತ ಪಾವತಿಸಲು ಕೋರ್ಟ್ ಆದೇಶ
ನವದೆಹಲಿ: ಚೆಕ್ ಬೌನ್ಸ್ (Cheque bounce)ಪ್ರಕರಣದಲ್ಲಿ ಬಾಲಿವುಡ್ ನಟ ರಾಜ್‌ಪಾಲ್ ಯಾದವ್‌ಗೆ (Rajpal Yadav) ದೆಹಲಿ ಹೈಕೋರ್ಟ್‌ನಿಂದ ಹಿನ್ನಡೆಯಾಗಿದೆ. ನ್ಯಾಯಾಲಯವು ಅವರ ವಿರುದ್ಧದ ಶಿಕ್ಷೆಯನ್ನು ಎತ್ತಿಹಿಡಿದಿದ್ದು, 6 ತಿಂಗಳ ಜೈಲು ಶಿಕ್ಷೆಯನ್ನು 3 ತಿಂಗಳಿಗೆ ಇಳಿಸಿ ಆದೇಶ ನೀಡಿದೆ.
ರಾಜ್‌ಪಾಲ್ ಯಾದವ್ ತಮ್ಮನ್ನು ಅಪರಾಧಿಗಳ ಪರೀಕ್ಷಾ ಕಾಯ್ದೆ (Probation of Offenders Act) ಅಡಿಯಲ್ಲಿ ಬಿಡುಗಡೆ ಮಾಡುವಂತೆ ಅರ್ಜಿ ಸಲ್ಲಿಸಿದ್ದರು. ಆದರೆ ವಿಚಾರಣೆಯ ವೇಳೆ ಅವರ ನಡೆನುಡಿಯನ್ನು ಪರಿಗಣಿಸಿದ ನ್ಯಾಯಾಲಯ, ಆ ಸೌಲಭ್ಯ ನೀಡಲು ನಿರಾಕರಿಸಿದೆ.
ಪ್ರಕರಣಕ್ಕೆ ಸಂಬಂಧಿಸಿದ ಹಣವನ್ನು ಪಾವತಿಸುವುದಾಗಿ ರಾಜ್‌ಪಾಲ್ ಯಾದವ್ ಹಲವು ಬಾರಿ ಭರವಸೆ ನೀಡಿದ್ದರು. ಆದರೆ ಹಲವು ಅವಕಾಶಗಳನ್ನು ನೀಡಿದರೂ ಅವರು ಮಾತು ಉಳಿಸಿಕೊಳ್ಳಲಿಲ್ಲ ಎಂದು ನ್ಯಾಯಾಲಯ ಹೇಳಿದೆ.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜ್‌ಪಾಲ್ ಯಾದವ್ ಅವರ ಪತ್ನಿ ರಾಧಾ ಯಾದವ್ ಅವರಿಗೂ ಪರಿಹಾರ ಮೊತ್ತ ಪಾವತಿಸಲು ದೆಹಲಿ ಹೈಕೋರ್ಟ್ ಸೂಚಿಸಿದೆ. ಈ ಹಿಂದೆ ರಾಜ್‌ಪಾಲ್ ಯಾದವ್ ಪಾವತಿಸಿದ್ದ ಮೊತ್ತವನ್ನು ಅಂತಿಮ ಲೆಕ್ಕದಲ್ಲಿ ಹೊಂದಾಣಿಕೆ ಮಾಡಲಾಗುವುದು ಎಂದು ನ್ಯಾಯಾಲಯ ಸ್ಪಷ್ಟಪಡಿಸಿದೆ.ಇದನ್ನೂ ಓದಿ: ನನ್ನನ್ನು ಬಂಧಿಸಬಹುದು ಅಥವಾ ಕೊಲ್ಲಬಹುದು, ಡಿಸೆಂಬರ್‌ನಲ್ಲಿ ನಾನು ಬಾಂಗ್ಲಾದೇಶಕ್ಕೆ ತೆರಳುತ್ತೇನೆ: ಶೇಖ್ ಹಸೀನಾ
ಈ ಕಾರಣದಿಂದ ಶಿಕ್ಷೆಯನ್ನು ರದ್ದುಗೊಳಿಸಲು ಹೈಕೋರ್ಟ್ ನಿರಾಕರಿಸಿದೆ. ಆದರೆ ಜೈಲು ಶಿಕ್ಷೆಯನ್ನು 6 ತಿಂಗಳಿಂದ 3 ತಿಂಗಳಿಗೆ ಇಳಿಸಿ ಭಾಗಶಃ ಪರಿಹಾರ ನೀಡಿದೆ. ಇದರ ಜೊತೆಗೆ, ಈ ಆದೇಶದ ವಿರುದ್ಧ ಮೇಲ್ಮನವಿ ಸಲ್ಲಿಸಲು ಅವಕಾಶ ಕಲ್ಪಿಸುವ ಉದ್ದೇಶದಿಂದ, ತೀರ್ಪಿನ ಜಾರಿಯನ್ನು 2 ತಿಂಗಳ ಕಾಲ ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ.ಇದನ್ನೂ ಓದಿ: 10 ರೂ.ಗಾಗಿ ಪೆಟ್ರೋಲ್ ಬಂಕ್‌ನಲ್ಲಿ ಹೊಡೆದಾಟ – ಜಗಳ ಬಿಡಿಸಲು ಬಂದಿದ್ದವನ ಕೊಲೆ, 6 ಜನ ಅರೆಸ್ಟ್
