ತಮಿಳು ನಟಿ ತ್ರಿಷಾ (Trisha Krishnan) ಇತ್ತೀಚೆಗೆ ತಮ್ಮ ಹೊಸ ತಮಿಳು ಸಿನಿಮಾ ಕರುಪ್ಪು (Karuppu) ಚಿತ್ರದ ಶೂಟಿಂಗ್ ಸೀನ್ಸ್ ಫೋಟೋ ಹಾಗೂ ವಿಡಿಯೋಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದು, ಪೋಸ್ಟ್ ಜೊತೆ ನೀಡಿದ ಕ್ಯಾಪ್ಷನ್ ಇದೀಗ ಭಾರೀ ಚರ್ಚೆಗೆ ಕಾರಣವಾಗಿದೆ.
ತ್ರಿಷಾ ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡ ಪೋಸ್ಟ್‌ಗೆ, “My magical may said, One More for the Win. Just God Things” (ಮ್ಯಾಜಿಕಲ್ ಮೇ ತಿಂಗಳಲ್ಲಿ ಮತ್ತೊಂದು ಜಯ. ಎಲ್ಲ ದೈವ ಇಚ್ಛೆ) ಎಂದು ಬರೆದುಕೊಂಡಿದ್ದಾರೆ. ಈ ಕ್ಯಾಪ್ಷನ್ ನೋಡಿ ಹಲವರು ಇದು ತಮಿಳುನಾಡು ಸಿಎಂ ವಿಜಯ್ ಅವರ ಇತ್ತೀಚಿನ ರಾಜಕೀಯ ಗೆಲುವಿಗೆ ಸಂಬಂಧಿಸಿದೆ ಎಂದು ಹೇಳುತ್ತಿದ್ದಾರೆ. ವಿಜಯ್ ಅವರು ಮುಖ್ಯಮಂತ್ರಿಯಾಗಿರುವ ಸಂಭ್ರಮವನ್ನು ಪರೋಕ್ಷವಾಗಿ ತ್ರಿಷಾ ಇಂದಿಗೂ ಆಚರಿಸುತ್ತಿದ್ದಾರೆ ಎಂದು ಕಾಮೆಂಟ್ ಮಾಡಿದ್ದಾರೆ. ಇದನ್ನೂ ಓದಿ: ಸಿಎಂ ವಿಜಯ್ ವಿಶೇಷ ಅನುಮತಿ ನಡುವೆಯೂ ಕೊನೆ ಕ್ಷಣದಲ್ಲಿ ತ್ರಿಶಾ ಸಿನೆಮಾ ‘ಕರುಪ್ಪ್’ ಶೋ ರದ್ದು
View this post on Instagram
ಇನ್ನು ಕಳೆದ ಕೆಲವು ದಿನಗಳಿಂದ ಭಾರೀ ಚರ್ಚೆಯಲ್ಲಿರುವ ನಟಿ ತ್ರಿಷಾ, ಸೋಷಿಯಲ್ ಮೀಡಿಯಾದಲ್ಲಿ ಹಾಟ್ ಟಾಪಿಕ್ ಆಗಿದ್ದಾರೆ. ತ್ರಿಷಾ ಮತ್ತು ತಮಿಳುನಾಡು ಸಿಎಂ ವಿಜಯ್ ಅವರ ಕುರಿತಾಗಿ ಹರಿದಾಡುತ್ತಿರುವ ಡೇಟಿಂಗ್ ವದಂತಿಗಳಿಂದ ನಟಿ ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ ಪ್ರತಿಯೊಂದು ವಿಷಯಗಳು ಭಾರೀ ವೈರಲ್ ಆಗುತ್ತಿವೆ. ವಿಜಯ್ ಅವರು ಪ್ರಮಾಣವಚನ ಸ್ವೀಕರಿಸಿದ ಸಂದರ್ಭದಲ್ಲಿ ತ್ರಿಷಾ ಕೂಡ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಅಲ್ಲದೆ ವಿಜಯ್ ಅವರ ಪೋಷಕರನ್ನು ಭೇಟಿ ಮಾಡಿ ಶುಭಾಶಯ ತಿಳಿಸಿದ್ದ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದವು.
ವಿಜಯ್ ಮತ್ತು ತ್ರಿಷಾ ಜೋಡಿ ತಮಿಳು ಚಿತ್ರರಂಗದ ಜನಪ್ರಿಯ ಆನ್‌ಸ್ಕ್ರೀನ್ ಕಪಲ್‌ಗಲ್ಲಿ ಒಂದು. ಈ ಜೋಡಿ ಗಿಲ್ಲಿ, ತಿರುಪಾಚಿ, ಆಟಿ, ಕುರುವಿ ಸೇರಿದಂತೆ ಹಲವು ಸಿನಿಮಾಗಳಲ್ಲಿ ನಟಿಸಿ ಅಭಿಮಾನಿಗಳ ಮನ ಗೆದ್ದಿದ್ದಾರೆ. 15 ವರ್ಷಗಳ ಬಳಿಕ ಲಿಯೋ ಚಿತ್ರದ ಮೂಲಕ ಮತ್ತೆ ಒಟ್ಟಾಗಿ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದರು. ಇದನ್ನೂ ಓದಿ: ಸಿಎಂ ಆದ ಬೆನ್ನಲ್ಲೇ ನಟಿ ತ್ರಿಶಾ ಸಿನೆಮಾಗೆ ವಿಜಯ್ ಬಿಗ್ ಗಿಫ್ಟ್..!

