ಬೆಂಗಳೂರು: `ನಮ್ಮ ಮೆಟ್ರೋ’ (Namma Metro) ಪ್ರಯಾಣಿಕರಿಗೆ ಗುಡ್‍ನ್ಯೂಸ್ ಸಿಕ್ಕಿದೆ. ಮೊದಲ ಬಾರಿಗೆ ಮಿನಿ ಎಲೆಕ್ಟ್ರಿಕ್ ಬಸ್ (Electric Feeder Bus) ಸೇವೆ ನೀಡಲು ಬಿಎಂಟಿಸಿ (BMTC) ಮುಂದಾಗಿದೆ.
Advertisement
ಇಂಥದ್ದೊಂದು ಯೋಚನೆಯನ್ನು ಬಿಎಂಟಿಸಿ ರೂಪಿಸಿಕೊಂಡಿದ್ದು, ಕೇಂದ್ರ ಸರ್ಕಾರದ 13 ಕೋಟಿ ಅನುದಾನದಿಂದ. ಇದೀಗ ಮಿನಿ ಎಲೆಕ್ಟ್ರಿಕ್ ಕಂಡಕ್ಟರ್ ಲೇಸ್ ಬಸ್ ಸೇವೆ ನೀಡಲು ಬಿಎಂಟಿಸಿ ಮುಂದಾಗಿದೆ. ಮೆಟ್ರೋ ನಿಲ್ದಾಣದಿಂದ ಇತರ ಸ್ಥಳಗಳಿಗೆ ಹೋಗಲು ಅನುಕೂಲವಾಗುವಂತೆ 100 ಮಿನಿ ಬಸ್ ಆರಂಭ ಮಾಡಲು ಬಿಎಂಟಿಸಿ ಯೋಚಿಸಿದೆ. ಇದು ಈಗಿರುವ ಬಸ್ ಗಿಂತ ಚಿಕ್ಕದು, ಇದನ್ನು ವ್ಯಾನ್ ಅಂತಾ ಕೂಡ ಕರೆಯಬಹುದು. ಸುಮಾರು 25 ರಿಂದ 30 ಜನ ಪ್ರಯಾಣಿಕರು ಈ ಎಲೆಕ್ಟ್ರಿಕ್ ಬಸ್‍ನಲ್ಲಿ ಸಂಚಾರ ಮಾಡಬಹುದು. ಇದು ಕಂಡಕ್ಟರ್ ಲೆಸ್ ಬಸ್ ಆಗಿರಲಿದ್ದು, ಸ್ಮಾರ್ಟ್ ಕಾರ್ಡ್ (Smart Card) ಅಥವಾ ಆನ್‍ಲೈನ್ (Online) ಮೂಲಕ ಟಿಕೇಟ್ ಖರೀದಿಸಿ ಸಂಚಾರ ಮಾಡಬಹುದಾಗಿದೆ.
Advertisement
Advertisement
ಕೇಂದ್ರ ಸರ್ಕಾರದಿಂದ 13 ಕೋಟಿ ಅನುದಾನ ಬಂದಿದ್ದು, ಈಗ ಬಿಎಂಟಿಸಿ ಹೊಸ ಮಿನಿಬಸ್ ಸೇವೆ ಓದಗಿಸೋ ನಿಟ್ಟಿನಲ್ಲಿ ಕಾರ್ಯಯೋಜನೆ ಸಿದ್ಧಪಡಿಸಿಕೊಳ್ಳುತ್ತಿದೆ. ಮುಂದಿನ ಆರರಿಂದ ಏಳು ತಿಂಗಳಲ್ಲಿ ಈ ಮಿನಿ ಎಲೆಕ್ಟ್ರಿಕ್ ಬಸ್‌ಗಳು ಬೆಂಗಳೂರಿಗರ ಸೇವೆಗೆ ಸಿಗಲಿದೆ.