ಬಿಗ್ ಬಾಸ್ ಒಟಿಟಿ (Bigg Boss Kannada) ಮೂಲಕ ಸದ್ದು ಮಾಡಿದ್ದ ಸ್ಪರ್ಧಿಗಳು ಮತ್ತೆ ಜೊತೆಯಾಗಿದ್ದಾರೆ. ದೊಡ್ಮನೆ ಕಿಲಾಡಿಗಳು ಮೋಜು- ಮಸ್ತಿ ಮಾಡಿರುವ ವೀಡಿಯೋ ಇದೀಗ ಸೋಷಿಯಲ್ ಮೀಡಿಯಾದಲ್ಲಿ ಸದ್ದು ಮಾಡ್ತಿದೆ. ಇದನ್ನೂ ಓದಿ: ದೀಪಿಕಾ ಪಡುಕೋಣೆ ಜೊತೆ ನಟಿಸಿದ್ದಕ್ಕೆ ಲಕ್ಕಿ ಎಂದ ಉಪೇಂದ್ರ
View this post on Instagram
ಒಟಿಟಿ ಮೂಲಕ ಬಿಗ್ ಬಾಸ್ ಶೋ ಸಂಚಲನ ಸೃಷ್ಟಿಸಿತ್ತು. ಸಾನ್ಯ ಅಯ್ಯರ್, ರೂಪೇಶ್ ಶೆಟ್ಟಿ, ಚೈತ್ರಾ ಹಳ್ಳಿಕೇರಿ, ಅಕ್ಷತಾ ಕುಕ್ಕಿ, ಲೋಕೇಶ್, ಸೋನು ಗೌಡ ಹೀಗೆ ಹಲವರು ಶೋನಲ್ಲಿ ಭಾಗಿಯಾಗುವ ಮೂಲಕ ರಂಗೇರಿತ್ತು. ಇದೀಗ ಸಾಕಷ್ಟು ಸಮಯದ ನಂತರ ಮತ್ತೆ ಬಿಗ್ ಬಾಸ್ ಸ್ಪರ್ಧಿಗಳು ಒಟ್ಟಾಗಿದ್ದಾರೆ. ಸಿಕ್ಕಾಪಟ್ಟೆ ಫನ್ ಮಾಡಿದ್ದಾರೆ.
ನಟಿ ಚೈತ್ರಾ ಹಳ್ಳಿಕೇರಿ (Chythrra Hallikeri) ಮನೆಯಲ್ಲಿ ಅಕ್ಷತಾ ಕುಕ್ಕಿ, ಆರ್ಯವರ್ಧನ್ ಗುರೂಜಿ, ಜಯಶ್ರೀ ಆರಾಧ್ಯ, ಲೋಕೇಶ್ ಎಲ್ಲರೂ ಜೊತೆಗೂಡಿದ್ದಾರೆ. ಒಟ್ಟಿಗೆ ಒಂದೊಳ್ಳೆ ಸಮಯ ಕಳೆದಿದ್ದಾರೆ. ಬಳಿಕ ಮಸ್ತ್ ರೀಲ್ಸ್ ಹಾಗೂ ಫೋಟೋಶೂಟ್ ಮಾಡಿದ್ದಾರೆ.
ನಟಿ ಅಕ್ಷತಾ ಕುಕ್ಕಿ ಅವರ ಮದುವೆಗೆ ಆಹ್ವಾನ ನೀಡಲು ಎಲ್ಲರೂ ಜೊತೆಯಾಗಿದ್ದಾರೆ. ಮಾರ್ಚ್ 27ಕ್ಕೆ ಅವಿನಾಶ್ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಡಲು ನಟಿ ರೆಡಿಯಾಗಿದ್ದಾರೆ.