– ಗೋಸುಂಬೆ ರಾಜಕಾರಣ ಮಾಡೋದು ಅಂತ ಟಕ್ಕರ್
ಬೆಂಗಳೂರು: ಬಿಡದಿ ಟೌನ್‌ಶಿಪ್ (Bidadi Township) ವಿಚಾರದಲ್ಲಿ ರಾಜಕೀಯ ಜಟಾಪಟಿ ಮುಂದುವರಿದಿದೆ. ಕೇಂದ್ರ ಸಚಿವ ಹೆಚ್.ಡಿ ಕುಮಾರಸ್ವಾಮಿಗೆ ಶಾಸಕ ಬಾಲಕೃಷ್ಣ (HC Balakrishna) ಸವಾಲು ಹಾಕಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಡದಿ ಟೌನ್‌ಶಿಪ್ ಯೋಜನೆಯನ್ನ ನಾನು ರೈತರ ಪರವಾಗಿ ಕೈಬಿಡಲು ಒಪ್ಪಿದ್ದೆ ಅಂತಪ್ರಮಾಣ ಮಾಡಲಿ, ಕುಮಾರಸ್ವಾಮಿ (HD Kumaraswamy) ಚಾಮುಂಡೇಶ್ವರಿ ಮೇಲೆ ಪ್ರಮಾಣ ಮಾಡಲಿ ಅಂತಾ ಸವಾಲು ಹಾಕಿದ್ದಾರೆ. 2018 ರಲ್ಲಿ ಬಿಡದಿ ಟೌನ್‌ಶಿಪ್ ಕೈಬಿಡಲು ಒಪ್ಪಿದ್ದ ಬಗ್ಗೆ ಪ್ರಮಾಣ ಮಾಡಲಿ. ನಾವು ಅಜ್ಜಯ್ಯ ಅವರ ಮೇಲೆ ಪ್ರಮಾಣ ಮಾಡ್ತೀವಿ ಅಂದ್ರು ಕೇಂದ್ರ ಸಚಿವರಾದ ಮೇಲೆ ವಿರೋಧ ಮಾಡುತ್ತಿದ್ದಾರೆ. ಸಮಸ್ಯೆ ಹುಟ್ಟು ಹಾಕಿದವರೇ ಹೋರಾಟ ಮಾಡುತ್ತಿದ್ದಾರೆ. ಈ ರೀತಿ ಗೋಸುಂಬೆ ರಾಜಕಾರಣ ಮಾಡೋದು ಬೇಡ, ಯಾವುದಾದ್ರೂ ಒಂದು ನಿಲುವು ಇರಬೇಕು ಅಂತಾ ಕಿಡಿಕಾರಿದ್ದಾರೆ.

ಕುಮಾರಸ್ವಾಮಿ ವಿಡಿಯೋ ಕಾಲ್‌ನಲ್ಲಿ (Video Call) ಅಭಿವೃದ್ಧಿ ಹೊಂದಿದ ಟೌನ್‌ಶಿಪ್‌ನಲ್ಲಿ ರೈತರಿಗೆ 40% ಶೇರ್ ಕೊಡಬೇಕು ಅಂತ ತೀರ್ಮಾನ ಮಾಡಿದ್ದೆ ಅಂದಿದ್ದಾರೆ. ನಾವು ರೆಸಿಡೆನ್ಸಿಯಲ್ ಅಂದ್ರೆ 50% , ಕಮರ್ಷಿಯಲ್ 45% ಶೇರ್ ಕೊಡ್ತೀವಿ ಅಂದಿದ್ದೇವೆ. ಆದ್ರೆ ಕುಮಾರಸ್ವಾಮಿ 40% ಮಾತ್ರ ಕೊಡಲು ಒಪ್ಪಿದ್ರು ಅಂತಾ ವಿಡಿಯೋ ಬಿಡುಗಡೆ ಮಾಡಿ ಟಕ್ಕರ್ ಕೊಟ್ಟಿದ್ದಾರೆ.
ನಾವು ಅವರು ಒಂದೇ ಜಾತಿ, ಆದರೆ ನಮಗೆ ಕ್ರೆಡಿಟ್ ಸಿಗುತ್ತೆ ಅಂತ ಪ್ರಶ್ನೆ ಮಾಡುತ್ತಿದ್ದಾರೆ. ಡಿ.ಕೆ ಶಿವಕುಮಾರ್‌ಗೆ ಇನ್ನೂ ವಯಸ್ಸಿದೆ. ರಾಜ್ಯದಲ್ಲಿ ರಾಜಕೀಯ ಮಾಡಬಾರದು ಅಂತ ಡಿಕೆಶಿಗೆ ಮಸಿ ಬಳಿಯುತ್ತಿದ್ದಾರೆ. ಮೆಜಾರಿಟಿ ಆಫ್ ಜನರು ಭೂಮಿ ಕೊಡಲು ಒಪ್ಪಿದ್ದಾರೆ. ನೊಟಿಫಿಕೆಶನ್ ಆಗಿದೆ, ಹಿಂದೆ ಪಡೆಯುವ ಪ್ರಶ್ನೆ ಇಲ್ಲ. ಇವತ್ತಲ್ಲ ನಾಳೆ ಭೂಮಿ ಡೆವಲಪ್ಮೆಂಟ್ ಆಗಲೇಬೇಕು. ಡಿ.ಕೆ ಶಿವಕುಮಾರ್ ನೇತೃತ್ವದಲ್ಲಿ ಟೌನ್ ಶಿಪ್ ಆಗಬಾರದು ಎಂದು ವಿರೋಧ ಮಾಡುತ್ತಿದ್ದಾರೆ ಅಂತಾ ಆಕ್ರೋಶ ಹೊರಹಾಕಿದ್ದಾರೆ.
