ನವದೆಹಲಿ: ಭಾನುವಾರ ಇಂಗ್ಲೆಂಡ್ (England) ವಿರುದ್ಧದ ಪಂದ್ಯದಲ್ಲಿ ಭಾರತ (India) ತಂಡದ ಆಟಗಾರ ವಿರಾಟ್ ಕೊಹ್ಲಿ (Virat Kohli) ಡಕೌಟ್ ಆಗಿದ್ದನ್ನು ಲೇವಡಿ ಮಾಡಲು ಹೋಗಿ ಇಂಗ್ಲೆಂಡ್ ಅಭಿಮಾನಿಗಳು ಪೇಚಿಗೆ ಸಿಲುಕಿದ್ದಾರೆ. ಇಂಗ್ಲೆಂಡ್ ಅಭಿಮಾನಿಗಳಿಗೆ ಎರಡು ಡಕ್ (ಬಾತುಕೋಳಿ)ಗಳನ್ನ ಗಿಫ್ಟ್ ನೀಡಿ ಭಾರತದ ಅಭಿಮಾನಿಗಳು ಕಾಲೆಳೆದಿದ್ದಾರೆ. ಅಷ್ಟಕ್ಕೂ ನಡೆದಿದ್ದೇನು?
Just out for a morning walk pic.twitter.com/Mv425ddQvU
— England’s Barmy Army ???????????????????????????????? (@TheBarmyArmy) October 29, 2023
Advertisement
ಭಾನುವಾರ ಲಕ್ನೋದಲ್ಲಿ ನಡೆದ ಭಾರತ ಮತ್ತು ಇಂಗ್ಲೆಂಡ್ ನಡುವಿನ ಹೈವೋಲ್ಟೇಜ್ ಪಂದ್ಯ ನಡೆಯಿತು. ಪಂದ್ಯದಲ್ಲಿ ಟಾಸ್ ಸೋತು ಭಾರತ ಮೊದಲು ಬ್ಯಾಟಿಂಗ್ ಮಾಡಿತು. ಭರವಸೆ ಆಟಗಾರನಾದ ವಿರಾಟ್ ಕೊಹ್ಲಿ ಈ ಪಂದ್ಯದಲ್ಲಿ ಅಭಿಮಾನಿಗಳಿಗೆ ನಿರಾಸೆ ಮೂಡಿಸಿದರು. 9 ಬಾಲ್ಗಳನ್ನು ಆಡಿದ ಕೊಹ್ಲಿ ಒಂದು ರನ್ ಕೂಡ ಕಲೆಹಾಕಲಾಗದೇ ಶೂನ್ಯಕ್ಕೆ ಔಟ್ ಆಗಿ ನಿರ್ಗಮಿಸಿದರು. ಕೊಹ್ಲಿ ಡಕೌಟ್ ಅನ್ನು ಇಂಗ್ಲೆಂಡ್ ಅಭಿಮಾನಿಗಳು ಲೇವಡಿ ಮಾಡಿದ್ದಾರೆ. ಇದನ್ನೂ ಓದಿ: ಇಂಗ್ಲೆಂಡ್ ವಿರುದ್ಧ 100 ರನ್ಗಳ ಭರ್ಜರಿ ಜಯ – 20 ವರ್ಷಗಳ ಬಳಿಕ ಗೆದ್ದು ಇತಿಹಾಸ ಸೃಷ್ಟಿಸಿದ ಭಾರತ
Advertisement
Just out for an evening walk ???? https://t.co/G0P54UrpRB pic.twitter.com/SugpLAQPbB
— The Bharat Army (@thebharatarmy) October 29, 2023
Advertisement
ಇಂಗ್ಲೆಂಡ್ಸ್ ಬರ್ಮಿ ಆರ್ಮಿ ತನ್ನ ಎಕ್ಸ್ ಖಾತೆಯಲ್ಲಿ, ನೀರಿನಲ್ಲಿ ಈಜುತ್ತಿದ್ದ ಎರಡು ಬಾತುಕೋಳಿಗಳ ಪೈಕಿ ಒಂದರ ತಲೆಗೆ ವಿರಾಟ್ ಕೊಹ್ಲಿ ಚಿತ್ರವನ್ನು ಹಾಕಿದ್ದ ಎಡಿಟ್ ಫೋಟೊ ಹಾಕಿ ಪೋಸ್ಟ್ ಮಾಡಿತ್ತು. ಆ ಫೋಟೊಗೆ ‘ಬೆಳಗ್ಗೆ ವಾಕ್ಗೆ ಹೊರಟಾಗ’ ಎಂದು ಶೀರ್ಷಿಕೆ ನೀಡಿತ್ತು. ಇದಕ್ಕೆ ಭಾರತದ ಕ್ರಿಕೆಟ್ ಅಭಿಮಾನಿಗಳು ಕೆಂಡಾಮಂಡಲರಾಗಿದ್ದಾರೆ. ಅಲ್ಲದೇ ಭಾರತದ ಫ್ಯಾನ್ಸ್, ಇಂಗ್ಲೆಂಡ್ ಫ್ಯಾನ್ಸ್ಗೆ ಬಿಸಿ ಮುಟ್ಟಿಸಿದ್ದಾರೆ.
Advertisement
Just give us some time to make the edits. @TheBarmyArmy https://t.co/G0P54UrpRB pic.twitter.com/qBZDz1E04Z
— The Bharat Army (@thebharatarmy) October 29, 2023
ಅದೇ ಬಾತುಕೋಳಿಗಳ ಫೋಟೊಗೆ ಇಂಗ್ಲೆಂಡ್ ಆಟಗಾರರಾದ ಜೋ ರೂಟ್ (Joe Root) ಮತ್ತು ಬೆನ್ ಸ್ಟೋಕ್ಸ್ (Ben Stokes) ತಲೆ ಸೇರಿಸಿ ಇಂಗ್ಲೆಂಡ್ ಫ್ಯಾನ್ಸ್ಗೆ ದಿ ಭಾರತ್ ಆರ್ಮಿ ಕೌಂಟರ್ ಕೊಟ್ಟಿದೆ. ಜೋ ರೂಟ್ ಇರುವ ಫೋಟೊಗೆ ‘ಸಂಜೆ ವೇಳೆ ವಾಕ್ಗೆ ಹೊರಟಾಗ’ ಎಂದು ಶೀರ್ಷಿಕೆ ಕೊಟ್ಟಿದೆ. ಅಲ್ಲದೇ ಬೆನ್ ಸ್ಟೋಕ್ಸ್ ಇರುವ ಫೋಟೊಗೆ ‘ಎಡಿಟ್ ಮಾಡಲು ನಮಗೆ ಸ್ವಲ್ಪ ಸಮಯ ಕೊಡಿ’ ಎಂದು ಶೀರ್ಷಿಕೆ ಕೊಟ್ಟು ಠಕ್ಕರ್ ಕೊಟ್ಟಿದೆ.
ಇಂಗ್ಲೆಂಡ್ ಬ್ಯಾಟಿಂಗ್ ವೇಳೆ ಜೋ ರೂಟ್ ಮತ್ತು ಬೆನ್ ಸ್ಟೋಕ್ಸ್ ಕೂಡ ಶೂನ್ಯಕ್ಕೆ ಔಟ್ ಆಗಿ ನಿರ್ಗಮಿಸಿದ್ದರು. ಹೀಗಾಗಿ ಇಂಗ್ಲೆಂಡ್ನ ಒಂದು ಕೌಂಟರ್ಗೆ ಭಾರತದ ಫ್ಯಾನ್ಸ್ ಎರಡು ಠಕ್ಕರ್ ಕೊಟ್ಟಿದ್ದಾರೆ. ಇದನ್ನೂ ಓದಿ: World Cup 2023: ಮಾರಕ ಬೌಲಿಂಗ್ ದಾಳಿಗೆ ತಿಣುಕಾಡಿದ ಭಾರತ – ಇಂಗ್ಲೆಂಡ್ಗೆ 230 ರನ್ ಗುರಿ
ಹಾಲಿ ಚಾಂಪಿಯನ್ ಇಂಗ್ಲೆಂಡ್ ವಿರುದ್ಧ ಭಾನುವಾರ ನಡೆದ ಕ್ರಿಕೆಟ್ ವಿಶ್ವಕಪ್ 2023 ರ ಪಂದ್ಯದಲ್ಲಿ ಭಾರತ 9 ವಿಕೆಟ್ ನಷ್ಟಕ್ಕೆ 229 ರನ್ ಗಳಿಸಿತ್ತು. ನಾಯಕ ರೋಹಿತ್ ಶರ್ಮಾ ಅವರು ತಂಡದ ಪರ 87 ರನ್ ಗಳಿಸಿದ್ದರು. 230 ರನ್ಗಳ ಗುರಿ ಬೆನ್ನತ್ತಿದ್ದ ಆಂಗ್ಲರ ಪಡೆ 129 ರನ್ಗಳಿಗೆ ಸರ್ವಪತನ ಕಂಡಿತು. ಭಾರತ 100 ರನ್ಗಳ ಭರ್ಜರಿ ಗೆಲುವು ಸಾಧಿಸಿತು.
Web Stories