Connect with us

Bengaluru City

ಬೆಲೆ ಏರಿಕೆ ಖಂಡಿಸಿ ಭಾರತ ಬಂದ್‍ಗೆ ಕರೆ

Published

on

ಬೆಂಗಳೂರು: ದೇಶದಲ್ಲಿ ಹೆಚ್ಚುತ್ತಿರುವ ಇಂಧನ ಬೆಲೆ, ಸರಕು ಮತ್ತು ಸೇವಾ ತೆರಿಗೆ, ಇ-ಬಿಲ್ ಇತ್ಯಾದಿಗಳನ್ನು ವಿರೋಧಿಸಿ ಶುಕ್ರವಾರ ಅಖಿಲ ಭಾರತ ವ್ಯಾಪಾರಿಗಳ ಒಕ್ಕೂಟ ಭಾರತ್ ಬಂದ್‍ಗೆ ಕರೆ ನೀಡಿದೆ. ಭಾರತ ಬಂದ್‍ಗೆ ಅಖಿಲ ಭಾರತ ಸಾರಿಗೆ ಕಲ್ಯಾಣ ಸಂಘ(ಎಐಟಿಡಬ್ಲೂಎ) ಕೂಡ ಬೆಂಬಲ ನೀಡುತ್ತಿದ್ದು, ಫೆಬ್ರವರಿ 26ರಂದು ಚಕ್ಕಾ ಜಾಮ್ ನಡೆಸಲಿದ್ದಾರೆ.

ಹೇಗಿರಲಿದೆ ಬಂದ್?:
* ಸುಮಾರು 40,000ಕ್ಕೂ ಹೆಚ್ಚು ವ್ಯಾಪಾರಿಗಳ ಸಂಘ ಬಂದ್‍ನಲ್ಲಿ ಪಾಲ್ಗೊಳ್ಳುತ್ತಿರುವ ಹಿನ್ನೆಲೆ ದೇಶಾದ್ಯಂತ ಎಲ್ಲಾ ವಾಣಿಜ್ಯ ಮಾರುಕಟ್ಟೆಗಳು ಮುಚ್ಚಲಾಗುತ್ತದೆ.
* ಸಾಂಕೇತಿಕವಾಗಿ ಪ್ರತಿಭಟನೆ ನಡೆಸುತ್ತಿರುವುದರಿಂದ ಬೆಳಗ್ಗೆ 6ರಿಂದ ರಾತ್ರಿ 8ರವರೆಗೂ ಸಾರಿಗೆ ಸಂಸ್ಥೆಗಳ ಸಂಘ(ಎಐಟಿಡಬ್ಲೂಎ) ಹಾಗೂ ಎಲ್ಲಾ ಸಾರಿಗೆ ಸಂಸ್ಥೆಗಳಿಗೆ ಸಂಚಾರ ಸ್ಥಗಿತಗೊಳಿಸುವುದಾಗಿ ಸೂಚಿಸಲಾಗಿದೆ.
* ಬುಕಿಂಗ್ ಹಾಗೂ ಬಿಲ್ ಆಧಾರಿತ ಸರಕುಗಳ ಸಾಗಣೆಗೆ ತಡೆ.
* ರಾಷ್ಟ್ರವ್ಯಾಪ್ತಿ 1,500 ಸ್ಥಳಗಳಲ್ಲಿ ಧರಣಿ ನಡೆಸಲಾಗುತ್ತದೆ.
* 40 ಲಕ್ಷ ರಸ್ತೆಗಳು ಶುಕ್ರವಾರ ಬಂದ್
* ಆಲ್ ಇಂಡಿಯಾ ಮೋಟರ್ ಟ್ರಾನ್ಸ್‍ಪೋರ್ಟ್ ಕಾಂಗ್ರೆಸ್(ಎಐಎಂಟಿಸಿ) ಮತ್ತು ಭೈಚರಾ ಆಲ್ ಇಂಡಿಯಾ ಟ್ರಕ್ ಆಪರೇಟರ್ ವೆಲ್‍ಫೆರ್ ಅಸೋಸಿಯೆಟ್(ಬಿಎಐಟಿಓಡಬ್ಲೂಎ) ಬಂದ್‍ನಲ್ಲಿ ಭಾಗವಹಿಸುತ್ತಿಲ್ಲ.

ಜಿಎಸ್‍ಟಿ ವ್ಯವಸ್ಥೆಯಲ್ಲಿನ ತೆರಿಗೆಗಳನ್ನು ಕಡಿತಗೊಳಿಸಲು ಮತ್ತು ಅನೇಕ ಬೇಡಿಕೆಗಳಿಗಾಗಿ ಪ್ರತಿಭಟನೆ ನಡೆಸಲಾಗುತ್ತದೆ. ಇ-ವೇ ಬಿಲ್ ಕಾನೂನುಗಳನ್ನು ರದ್ದುಗೊಳಿಸುವಂತೆ ಮತ್ತು ಇಂಧನ ಬೆಲೆಯನ್ನು ಖಂಡಿಸಿ ಸಾರಿಗೆ ಚಾಲಕರು ಪ್ರತಿಭಟನೆಯಲ್ಲಿ ಪಾಲ್ಗೊಳ್ಳಲಿದ್ದಾರೆ. ಇತ್ತೀಚೆಗೆ ಜಿಎಸ್‍ಟಿ ಕಾನೂನಿಂದ 100 ಕಿ.ಮೀನಿಂದ 200ಕಿ.ಮೀ ವರೆಗೂ ಅಂತರವನ್ನು ಹೆಚ್ಚಿಸಿರುವ ಇ-ಬಿಲ್‍ನನ್ನು ಕಡಿತಗೊಳಿಸುವಂತೆ ಪ್ರತಿಭಟನೆ ನಡೆಸಲಾಗುತ್ತದೆ.

Click to comment

Leave a Reply

Your email address will not be published. Required fields are marked *