ಬೆಂಗಳೂರು: ಬಾಂಗ್ಲಾದೇಶ ಮೂಲದ ದಂಪತಿಗಳ ಮೇಲೆ ಹಲ್ಲೆ ಮತ್ತು ನಿಂದನೆ ಆರೋಪದಲ್ಲಿ ಪುನೀತ್ ಕೆರೆಹಳ್ಳಿ ಆಪ್ತ ಹಾಗೂ ವೈದ್ಯ ಡಾ.ನಾಗೇಂದ್ರ ಎಂಬಾತನನ್ನು ಬಂಧಿಸಲಾಗಿದೆ.
ನಗರದ ಬೆಳ್ಳಂದೂರು ಪೊಲೀಸರು ಆರೋಪಿಯನ್ನು ಅರೆಸ್ಟ್ ಮಾಡಿದ್ದಾರೆ. ಇಲ್ಲಿನ ಸರ್ಜಾಪುರ ರಸ್ತೆಯಲ್ಲಿ ಬಾಂಗ್ಲಾ ಮೂಲದ ನಸ್ರಿನಾ ಬಿಲಾಲ್, ಮಹಮ್ಮದ್ ಬಿಲಾಲ್ ಎಂಬ ದಂಪತಿ ನಡೆದುಕೊಂಡು ಹೋಗುತ್ತಿದ್ದರು. ಈ ವೇಳೆ, ದಂಪತಿಯನ್ನ ವೈದ್ಯ ನಾಗೇಂದ್ರ ನಿಂದಿಸಿ ಹಲ್ಲೆ ಮಾಡಿದ್ದಾರೆ. ಇದನ್ನೂ ಓದಿ: ಫಸ್ಟ್ ಟೈಮ್ ದೆಹಲಿಯಲ್ಲಿ ಭಾರೀ ಭದ್ರತೆಯೊಂದಿಗೆ ಸಿಎಂ ಡಿಕೆಶಿ ಓಡಾಟ
ಪೌರತ್ವದ ಬಗ್ಗೆ ಪ್ರಶ್ನೆ ಮಾಡಿ ಇಬ್ಬರನ್ನು ಕೆಟ್ಟದಾಗಿ ನಿಂದಿಸಿದ್ದಾರೆ. ಈ ಕುರಿತು ದಂಪತಿ ಬೆಳ್ಳಂದೂರು ಪೊಲೀಸ್ ಠಾಣೆಗೆ ದೂರು ನೀಡಿದ್ದು, ಬೆಳ್ಳಂದೂರು ಪೊಲೀಸರಿಂದ ವೈದ್ಯ ನಾಗೇಂದ್ರನ ಬಂಧನವಾಗಿದೆ.
