ಬೆಂಗಳೂರು: ಖಾತೆ ಹಂಚಿಕೆಗೂ ಮೊದಲೇ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರು 100ಕ್ಕೂ ಹೆಚ್ಚು ಅಧಿಕಾರಿಗಳನ್ನು ವರ್ಗಾವಣೆ ಮಾಡಿದ್ದು, ಈ ಮೂಲಕ ಅವರು ಸೆಂಚುರಿ ಸ್ಟಾರ್ ಎನಿಸಿಕೊಂಡಿದ್ದಾರೆ.
ಕೊನೆಗೂ ಬಿ.ಎಸ್ ಯಡಿಯೂರಪ್ಪ ನೇತೃತ್ವದ ರಾಜ್ಯ ಸರ್ಕಾರದಲ್ಲಿ ಖಾತೆ ಹಂಚಿಕೆ ಆಗಿದೆ. ಈ ಬೆನ್ನಲ್ಲೇ ಪಕ್ಷದ ನಾಯಕರಲ್ಲೇ ಅಸಮಾಧಾನದ ಹೊಗೆಯಾಡಿದ್ದು, ಇದೀಗ ಖಾತೆ ಪಡೆದುಕೊಂಡ ಸಚಿವರಿಗೆ ಹೊಸ ಪೀಕಲಾಟ ಶುರುವಾಗಿದೆ. ಯಡಿಯೂರಪ್ಪ ವರ್ಗಾವಣೆ ಮಾಡಿರುವುದೇ ನೂತನ ಸಚಿವರಿಗೆ ತಲೆನೋವಾಗಿದೆ. ಈಗಾಗಲೇ ಐಎಎಸ್, ಐಪಿಎಸ್ ಅಧಿಕಾರಿಗಳ ವರ್ಗಾವಣೆ 100 ರ ಗಡಿ ದಾಟಿದೆ. ವಿವಿಧ ಇಲಾಖೆಗಳ ಅಧಿಕಾರಿಗಳನ್ನ ವರ್ಗಾವಣೆ ಮಾಡಿ ಆದೇಶ ಹೊರಡಿಸಿದ್ದಾರೆ.
Advertisement
Advertisement
ಖಾತೆ ಹಂಚಿಕೆ ಹಾಗೂ ಕ್ಯಾಬಿನೆಟ್ ರಚನೆಗೂ ಮುನ್ನವೇ ಮೆಗಾ ವರ್ಗಾವಣೆ ನಡೆದಿದೆ. ಈಗ ಖಾತೆ ವಹಿಸಿಕೊಂಡಿರುವ ಸಚಿವರಿಗೆ ಬೇಕಾದ ಅಧಿಕಾರಿಗಳ ವರ್ಗಾವಣೆಗೆ ಬ್ರೇಕ್ ನೀಡಲಾಗಿದೆ. ಈ ಮೂಲಕ ಬಿಎಸ್‍ವೈ ಅವರು ಸಿಎಂ ನೇತೃತ್ವದ ಏಕ ಕ್ಯಾಬಿನೆಟ್ ಇದ್ದಾಗಲೇ ಸೆಂಚುರಿ ಸ್ಟಾರ್ ಆಗಿದ್ದಾರೆ.
Advertisement
ಗೃಹ ಸಚಿವ ಬಸವರಾಜ ಬೊಮ್ಮಾಯಿ ಕೂಡ ಯಡಿಯೂರಪ್ಪ ಆಪ್ತರಾಗಿದ್ದು, ಹೀಗಾಗಿ ಸಿಎಂ ಅವರ ಆದೇಶವನ್ನ ದಿಕ್ಕರಿಸುವ ಧೈರ್ಯ ತೋರಿಸಲು ಹಿಂದೇಟು ಹಾಕಿದ್ದಾರೆ. ಯಡಿಯೂರಪ್ಪ ಅವರ ಆದೇಶದಿಂದ ಬಹಳಷ್ಟು ಹಿರಿಯ ಸಚಿವರಿಗೂ ಭಯ ಉಂಟಾಗಿದೆ ಎಂದು ಹೇಳಲಾಗುತ್ತಿದೆ.