ಬೆಳಗಾವಿ: ನಿರಂತರ ಮಳೆಗೆ ಬೆಳಗಾವಿ-ಗೋವಾ(Belagavi-Goa) ಹೆದ್ದಾರಿ ಸಂಪೂರ್ಣವಾಗಿ ಕೆಸರು ಗದ್ದೆಯಾಗಿ ಮಾರ್ಪಟ್ಟಿದ್ದು, ನಡುರಸ್ತೆಯಲ್ಲೇ ಕೆಎಸ್‌ಆರ್‌ಟಿಸಿ (KSRTC) ಬಸ್ ಸಿಲುಕಿಕೊಂಡಿದ್ದರಿಂದ ಪ್ರಯಾಣಿಕರು ಗಂಟೆಗಳ ಕಾಲ ಪರದಾಡಿದ ಘಟನೆ ಬೆಳಗಾವಿ ಜಿಲ್ಲೆಯ ಖಾನಾಪುರ(Khanapura) ತಾಲೂಕಿನ ವರಕಡ ಗ್ರಾಮದ ಬಳಿ ನಡೆದಿದೆ.
ವರಕಡ ಗ್ರಾಮದ ಬಳಿ ಹೆದ್ದಾರಿ ತುಂಬಾ ಕೆಸರು ತುಂಬಿದ್ದರಿಂದ ಸಂಚರಿಸುತ್ತಿದ್ದ ಕೆಎಸ್‌ಆರ್‌ಟಿಸಿ ಬಸ್ (KSRTC) ರಸ್ತೆಯ ಮಧ್ಯದಲ್ಲೇ ಹೂತುಹೋಗಿದೆ. ಬಸ್ ಚಕ್ರಗಳು ಕೆಸರಿನಲ್ಲಿ ಸಿಲುಕಿದ್ದರಿಂದ ಮುಂದೆ ಚಲಿಸಲಾಗದೆ ಚಾಲಕ ಹರಸಾಹಸ ಪಟ್ಟಿದ್ದಾನೆ.
ತಕ್ಷಣವೇ ಬಸ್‌ನಲ್ಲಿದ್ದ ಎಲ್ಲ ಪ್ರಯಾಣಿಕರನ್ನು ಕೆಳಗಿಳಿಸಿದ ಚಾಲಕ ಮತ್ತು ನಿರ್ವಾಹಕರು, ಸ್ಥಳೀಯರ ನೆರವಿನೊಂದಿಗೆ ಬಸ್ ಹೊರತೆಗೆಯಲು ಯತ್ನಿಸಿದ್ದಾರೆ. ಸತತ ಎರಡು ಗಂಟೆಗಳ ಕಾಲ ನಡೆಸಿದ ಸುದೀರ್ಘ ಕಾರ್ಯಾಚರಣೆಯ ನಂತರ ಬಸ್ ಕೆಸರಿನಿಂದ ಹೊರಬಂದಿದೆ. ಅಲ್ಲಿಯವರೆಗೂ ವಯೋವೃದ್ಧರು, ಮಹಿಳೆಯರು ಸೇರಿದಂತೆ ನೂರಾರು ಪ್ರಯಾಣಿಕರು ರಸ್ತೆಯಲ್ಲೇ ನಿಂತು ಪರದಾಡುವಂತಾಯಿತು.
ಬೆಳಗಾವಿ ಹಾಗೂ ಗೋವಾ ರಾಜ್ಯಗಳನ್ನು ಸಂಪರ್ಕಿಸುವ ಅತ್ಯಂತ ಪ್ರಮುಖ ಹೆದ್ದಾರಿ ಇದಾಗಿದ್ದರಿಂದ, ನಿತ್ಯ ನೂರಾರು ಲಾರಿ, ಕಾರು ಹಾಗೂ ಬಸ್‌ಗಳು ಈ ಮಾರ್ಗದಲ್ಲೇ ಸಂಚರಿಸುತ್ತವೆ. ರಸ್ತೆ ತುಂಬಾ ಕೆಸರು ತುಂಬಿಕೊಂಡಿರುವುದರಿಂದ ವಾಹನ ಸವಾರರು ಜೀವ ಕೈಯಲ್ಲಿ ಹಿಡಿದು ಸಂಚರಿಸುವಂತಾಗಿದೆ. ಬಸ್ ಸಿಲುಕಿಕೊಂಡಿದ್ದರಿಂದ ಹೆದ್ದಾರಿಯ ಇಕ್ಕೆಲಗಳಲ್ಲೂ ಕಿಲೋಮೀಟರ್‌ಗಟ್ಟಲೆ ಟ್ರಾಫಿಕ್ ಜಾಮ್ (Traffic Jam) ಉಂಟಾಗಿ, ವಾಹನ ಸಂಚಾರ ಸಂಪೂರ್ಣ ಅಸ್ತವ್ಯಸ್ತಗೊಂಡಿತ್ತು. ಇದನ್ನೂ ಓದಿ: PUBLiC TV Impact | ಸರ್ಕಾರಿ ಬಸ್ ಇಲ್ಲದೆ 8 ಕಿ.ಮೀ ನಡೆದು ಶಾಲೆಗೆ ತೆರಳುತ್ತಿದ್ದ ಮಕ್ಕಳಿಗೆ ಬಸ್ ಭಾಗ್ಯ ಕಲ್ಪಿಸಿದ ಪ್ರಿಯಾಂಕ್ ಖರ್ಗೆ
ಅಧಿಕಾರಿಗಳ ಈ ಬೇಜವಾಬ್ದಾರಿತನವೇ ಇಂದಿನ ಅನಾಹುತಕ್ಕೆ ಕಾರಣ ಎಂದು ಕಿಡಿಕಾರಿದ್ದಾರೆ. ತಕ್ಷಣವೇ ಯುದ್ಧೋಪಾದಿಯಲ್ಲಿ ರಸ್ತೆ ದುರಸ್ತಿ ಕಾರ್ಯ ಕೈಗೊಳ್ಳದಿದ್ದರೆ, ಹೆದ್ದಾರಿ ತಡೆದು ಉಗ್ರ ಹೋರಾಟ ಮಾಡುವುದಾಗಿ ಸ್ಥಳೀಯರು ಮತ್ತು ವಾಹನ ಸವಾರರು ಎಚ್ಚರಿಕೆ ನೀಡಿದ್ದಾರೆ.
