ಕಲಬುರಗಿ: ಚಿಂಚೋಳಿ (Chincholi) ತಾಲೂಕಿನ ಭಾವನಗುಡಿ ತಾಂಡಾದ ಶಾಲಾ ಮಕ್ಕಳ ಹಲವು ವರ್ಷಗಳ ಸಂಕಷ್ಟಕ್ಕೆ ಕೊನೆಗೂ ಪರಿಹಾರ ಸಿಕ್ಕಿದೆ. ಸರ್ಕಾರಿ ಬಸ್ ಸೌಲಭ್ಯ ಇಲ್ಲದ ಕಾರಣ ಪ್ರತಿದಿನ ಸುಮಾರು 8 ಕಿಲೋಮೀಟರ್ ಕಾಲ್ನಡಿಗೆಯಲ್ಲೇ ಐನಾಪುರ ಗ್ರಾಮದ ಪ್ರೌಢಶಾಲೆಗೆ ತೆರಳಿ ಮರಳುತ್ತಿದ್ದ ಮಕ್ಕಳಿಗೆ ಇದೀಗ ಕೆಕೆಆರ್‌ಟಿಸಿ (KKRTC) ಬಸ್ ಸೇವೆ ಆರಂಭವಾಗಿದೆ.
ರಾಜ್ಯದಲ್ಲಿ ಡಿಕೆ.ಶಿವಕುಮಾರ್ ಸಿಎಂ ಆದ ಬಳಿಕ ಶಾಲಾ ಮಕ್ಕಳಿಗೂ ಸಹ ಫ್ರೀ ಬಸ್ ಎಂದು ಮಹತ್ವದ ಘೋಷಣೆ ಮಾಡಿದ್ದರು. ಆದರೆ ಸಿಎಂ ಡಿಕೆಶಿಯ ಕನಸಿನ ಯೋಜನೆ ಕಲಬುರಗಿ (Kalaburagi) ಜಿಲ್ಲೆಯ ಚಿಂಚೋಳಿ ತಾಲೂಕಿನ ಭಾವನಗುಡಿ ತಾಂಡಾಕ್ಕೆ ಸರ್ಕಾರಿ ಬಸ್ ಇಲ್ಲದ ಹಿನ್ನೆಲೆ ಈ ಯೋಜನೆ ತಲುಪಿರಲ್ಲಿಲ್ಲ. ಇದರ ಪರಿಣಾಮ ಆ ತಾಂಡಾದ ಶಾಲಾ ಮಕ್ಕಳು ನಿತ್ಯ 8 ಕಿಮೀ ಕಾಲನಡಿಗೆಯಲ್ಲಿ ನಡೆದುಕೊಂಡು ಐನಾಪುರ್ ಗ್ರಾಮದ ಪ್ರೌಢ ಶಾಲೆಗೆ ಹೋಗಿ ಬರುತ್ತಿದ್ದರು. ಭಾವನಗುಡಿ ತಾಂಡಾದ ಮಕ್ಕಳ ನಿತ್ಯ ನರಕಯಾತನೆಯ ಸಮಸ್ಯೆ ಬಗ್ಗೆ ಸೋಮವಾರ ಬೆಳಗ್ಗೆ ನಿಮ್ಮ ‘ಪಬ್ಲಿಕ್ ಟಿವಿ’ಯಲ್ಲಿ ವಿಸ್ತೃತ ವರದಿಯನ್ನ ಪ್ರಸಾರ ಮಾಡಲಾಗಿತ್ತು. ಇದನ್ನೂ ಓದಿ: ಹಿಂದೂ ವಿವಾಹಕ್ಕೆ ನೋಂದಣಿ ಸಾಕಾಗಲ್ಲ, ಸಪ್ತಪದಿ ಸೇರಿ ಧಾರ್ಮಿಕ ವಿಧಿವಿಧಾನ ಕಡ್ಡಾಯ: ಗುಜರಾತ್ ಹೈಕೋರ್ಟ್

‘ಪಬ್ಲಿಕ್ ಟಿವಿ’ ವರದಿಗೆ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ (Priyank Kharge) ಸ್ಪಂದಿಸಿ ಕೆಕೆಆರ್‌ಟಿಸಿ ಅಧಿಕಾರಿಗಳಿಗೆ ಬಸ್ ಸೌಕರ್ಯ ಕಲ್ಪಿಸುವಂತೆ ಸೂಚನೆ ನೀಡಿದ್ದರು. ಸಚಿವ ಪ್ರಿಯಾಂಕ್ ಖರ್ಗೆ ಆದೇಶದ ಬೆನ್ನಲ್ಲೇ ಇದೀಗ ಭಾವನಗುಡಿ ತಾಂಡಾಕ್ಕೆ ಬಸ್ ಸೌಕರ್ಯ ಕಲ್ಪಿಸಿದ್ದಾರೆ. ಬಸ್ ಸೌಕರ್ಯ ದೊರೆತ ಹಿನ್ನೆಲೆ ‘ಪಬ್ಲಿಕ್ ಟಿವಿ’ಗೆ ತಾಂಡಾದ ಜನ ಕೃತಜ್ಞತೆ ಸಲ್ಲಿಸಿದ್ದಾರೆ. ಇದನ್ನೂ ಓದಿ: ಕಾಶ್ಮೀರದಲ್ಲಿ ಮೇಘಸ್ಫೋಟ – ಹಠಾತ್ ಪ್ರವಾಹದಿಂದ ಅಪಾರ ಪ್ರಮಾಣದ ಆಸ್ತಿ ಹಾನಿ
ಸದ್ಯ ಪಬ್ಲಿಕ್ ಟಿವಿ ವರದಿಯಿಂದ ಇಂದಿನಿಂದ ಭಾವನಗುಡಿ ತಾಂಡಾಕ್ಕೆ ಕೆಕೆಆರ್‌ಟಿಸಿ ಬಸ್ ಸಂಚಾರ ಆರಂಭವಾಗಿದೆ. ಇಂದಿನಿಂದ ಭಾವನಗುಡಿ ತಾಂಡಾದಿಂದ ಪ್ರತಿದಿನ ಬೆಳಗ್ಗೆ 9 ಗಂಟೆಗೆ ಐನಾಪುರದತ್ತ ಸರ್ಕಾರಿ ಬಸ್ ಸಂಚರಿಸಲಿದೆ. ಶಾಲಾ ಸಮಯ ಮುಗಿದ ಬಳಿಕ ಸಂಜೆ 5 ಗಂಟೆಗೆ ಐನಾಪುರದಿಂದ ಭಾವನಗುಡಿ ತಾಂಡಾಕ್ಕೆ ಮರಳಿ ಬಸ್ ಸೇವೆ ಲಭ್ಯವಾಗಲಿದೆ. ಇದರಿಂದ ಇಷ್ಟು ದಿನ 8 ಕಿಲೋಮೀಟರ್ ದೂರವನ್ನು ಕಾಲ್ನಡಿಗೆಯಲ್ಲೇ ಕ್ರಮಿಸುತ್ತಿದ್ದ ವಿದ್ಯಾರ್ಥಿಗಳ ಸಂಕಷ್ಟಕ್ಕೆ ಮುಕ್ತಿ ದೊರೆತಿದೆ. ಈ ತಾಂಡಾದ ಮಕ್ಕಳ ಕಾಲ್ನಡಿಗೆ ಜೊತೆ ಜೊತೆಗೆ ತಾಂಡಾದ ಜನರ ಕಾಲ್ನಡಿಗೆಯ ನಿತ್ಯ ನರಕಯಾತನೆಗೂ ಸಹ ಇದೀಗ ಮುಕ್ತಿ ಸಿಕ್ಕಿದೆ. ಇದನ್ನೂ ಓದಿ: ನಕಲಿ ಖಾತೆ, ವಂಚನೆ ಆತಂಕ – ವಾಟ್ಸಪ್ ಹೊಸ ವೈಶಿಷ್ಟ್ಯದ ಮೇಲೆ ಕೇಂದ್ರ ಹದ್ದಿನ ಕಣ್ಣು

