ಬೆಂಗಳೂರು: SC-ST ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ಹೆಚ್ಚಳ ಮಾಡುವ ಬಗ್ಗೆ ಸಿಎಂ ಡಿಕೆ ಶಿವಕುಮಾರ್ (DK Shivakumar) ಜೊತೆ ಚರ್ಚೆ ಮಾಡೋದಾಗಿ ಡಿಸಿಎಂ ಪರಮೇಶ್ವರ್ (DCM Parameshwar) ತಿಳಿಸಿದ್ದಾರೆ.
ದಲಿತ ಸಂಘರ್ಷ ಸಮಿತಿ (ಅಂಬೇಡ್ಕರ್ ವಾದ) ಪದಾಧಿಕಾರಿಗಳ ಜೊತೆ ಮಂಗಳವಾರ (ಜು.21) ಸಮಸ್ಯೆಗಳ ಕುರಿತು ವಿಧಾನಸೌಧದಲ್ಲಿ ಡಿಸಿಎಂ ಪರಮೇಶ್ವರ್ ಚರ್ಚೆ ನಡೆಸಿದರು. ಸಭೆ ಬಳಿಕ ಮಾತನಾಡಿದ ಅವರು, ಪಿಟಿಸಿಎಲ್ ಕಾಯ್ದೆಗೆ ತಿದ್ದುಪಡಿಯನ್ನು ತಂದಿದ್ದೇವೆ. ಆದರೂ ಕಾಯ್ದೆ ಅನುಷ್ಠಾನ ಆಗುತ್ತಿಲ್ಲ ಎಂದು ಪ್ರಸ್ತಾಪ ಮಾಡಿದ್ದಾರೆ. ಸರಿಯಾದ ಅನುಷ್ಠಾನ ಮಾಡಲಿದ್ದೇವೆ ಎಂದು ಭರವಸೆ ನೀಡಿದ್ದೇವೆ. ಗ್ಯಾರಂಟಿ ಯೋಜನೆಗಳಲ್ಲಿ ದಲಿತರಿಗೆ ಹೆಚ್ಚು ಅನುಕೂಲ ಆಗುತ್ತಿಲ್ಲ ಎಂದಿದ್ದಾರೆ. ಯಾವ ದಲಿತರಿಗೆ ಗ್ಯಾರಂಟಿ ತಲುಪುತ್ತಿಲ್ಲ ಈ ವಿಚಾರವಾಗಿ ಕ್ರಮ ತೆಗೆದುಕೊಳ್ಳುವುದಾಗಿ ಹೇಳಿದ್ದೇವೆ. ವಿದ್ಯಾರ್ಥಿಗಳಿಗೆ ಸ್ಕಾಲರ್ ಶಿಪ್ ಸಾಕಾಗುತ್ತಿಲ್ಲ ಎಂಬ ಮನವಿ ಮಾಡಿದ್ದಾರೆ. ಸಿಎಂ ಜೊತೆ ಚರ್ಚೆಮಾಡುತ್ತೇನೆ ಎಂದು ಭರವಸೆ ನೀಡಿದ್ದಾರೆ. ಇದನ್ನೂ ಓದಿ: ಪ್ರಧಾನಿ ನಿವಾಸದ ಮುಂದೆ ಭಾರೀ ಹೈಡ್ರಾಮಾ – ಕೈಕಾಲು ಹಿಡಿದು ರಾಹುಲ್ ಗಾಂಧಿ ಹೊತ್ತೊಯ್ದ ಪೊಲೀಸರು
ಅರಣ್ಯ ಇಲಾಖೆಯವರು ಆದಿವಾಸಿಗಳನ್ನು ತೆರವು ಗೊಳಿಸುತ್ತಿದ್ದಾರೆ. ಅದರ ಬಗ್ಗೆಯೂ ಕೂಡ ಅರಣ್ಯ ಇಲಾಖೆ ಜೊತೆ ಚರ್ಚೆ ಮಾಡಲಾಗುತ್ತದೆ. ಬ್ಯಾಕ್ ಲಾಗ್ ಹುದ್ದೆಗಳ ಬಗ್ಗೆ ಪ್ರಸ್ತಾಪ ಮಾಡಿದ್ದಾರೆ. ಬ್ಯಾಕ್ ಲಾಗ್ ಹುದ್ದೆಗಳನ್ನು ತುಂಬುವ ಕ್ರಮ ತೆಗೆದುಕೊಳ್ಳಲಾಗುವುದು ಎಂದು ತಿಳಿಸಿದ್ದಾರೆ.
SCSP-TSP ಹಣವನ್ನು ಏಕಗವಾಕ್ಷಿ ಮೂಲಕ ಯೋಜನೆ ರೂಪಿಸಬೇಕು. ಸಮಾಜ ಕಲ್ಯಾಣ ಇಲಾಖೆಯಿಂದ SCPTSP ಯೋಜನೆ ರೂಪಿಸಬೇಕು ಎಂಬ ಮನವಿ ಇಟ್ಟಿದ್ದಾರೆ. ಸಿಎಂ ಜೊತೆ ಚರ್ಚೆ ನಡೆಸಿ ಕ್ರಮ ತೆಗೆದುಕೊಳ್ಳುವುದಾಗಿ ಹೇಳಿದ್ದೇವೆ. ಕೈಗಾರಿಕಾ ಸೈಟ್‌ಗಳನ್ನು ದಲಿತರಿಗೂ ಸರಿಯಾಗಿ ಹಂಚಬೇಕು ಅಂತ ಮನವಿ ಮಾಡಿದ್ದಾರೆ. ಈ ಬಗ್ಗೆ ಕ್ರಮ ತೆಗೆದುಕೊಳ್ಳುವ ಭರವಸೆ ನೀಡಿದ್ದೇನೆ ಎಂದಿದ್ದಾರೆ.ಇದನ್ನೂ ಓದಿ: ಬರ್ಗರ್ ತಿನ್ನೋ ವಿಡಿಯೋ ವೈರಲ್ – ಕಾಕ್ರೋಚ್ ಜನತಾ ಪಕ್ಷದ ವಕ್ತಾರ ವಜಾ
