– ಸದ್ದಿಲ್ಲದೇ ವರ್ಷದಲ್ಲಿ 2ನೇ ಬಾರಿಗೆ ಟೋಲ್ ದರ ಹೆಚ್ಚಳ
ರಾಮನಗರ: ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್ ಹೈವೆ (Bengaluru-Mysuru Expressway) ಸಂಚಾರ ಇದೀಗ ಮತ್ತಷ್ಟು ದುಬಾರಿಯಾಗಿದ್ದು, ಹೆದ್ದಾರಿ ಪ್ರಾಧಿಕಾರ ಸದ್ದಿಲ್ಲದೇ ಟೋಲ್ ದರ ಹೆಚ್ಚಿಸುವ ಮೂಲಕ ವಾಹನ ಸವಾರರಿಗೆ ಮತ್ತೆ ಶಾಕ್ ನೀಡಿದೆ.
ವರ್ಷದಲ್ಲಿ ಎರಡನೇ ಬಾರಿ ಟೋಲ್ ದರ ಹೆಚ್ಚಾಗಿದ್ದು, ಜನರ ಆಕ್ರೋಶಕ್ಕೆ ಕಾರಣವಾಗಿದೆ. ಕಳೆದ ಏ.1 ರಂದು ದರ ಹೆಚ್ಚಳ ಮಾಡಿದ್ದ ಪ್ರಾಧಿಕಾರ ಇದೀಗ ಮತ್ತೆ ಬೆಂಗಳೂರು-ನಿಡಘಟ್ಟ ಮಾರ್ಗ ಮಧ್ಯೆ ಕಣಿಮಿಣಿಕಿ ಹಾಗೂ ಶೇಷಗಿರಿಹಳ್ಳಿ ಟೋಲ್‌ನಲ್ಲಿ 5 ರೂ. ನಿಂದ 35 ರೂ. ವರೆಗೆ ದರ ಹೆಚ್ಚಳ ಮಾಡಿ ಪ್ರಕಟಣೆ ಹೊರಡಿಸಿದೆ. ಕಾರಿಗೆ ಹಿಂದಿನ ದರ 180 ರೂ. ಇದ್ದು, ಹೊಸ ದರ 185 ರೂ.ಗೆ ಏರಿಕೆ ಆಗಿದೆ. ಇದನ್ನೂ ಓದಿ: ಏ.10 ರಿಂದ ಟೋಲ್‌ಗಳಲ್ಲಿ ನಗದು ಸ್ವೀಕಾರ ಸಂಪೂರ್ಣ ಬಂದ್!
ಲಘು ವಾಹನಕ್ಕೆ ಹಿಂದಿನ ದರ 285 ರೂ. ಹೊಸ ದರ 295 ರೂ.ಗೆ ಏರಿಕೆ, ಟ್ರಕ್/ಬಸ್‌ಗೆ ಹಿಂದಿನ ದರ 600 ರೂ., ಹೊಸ ದರ 620 ರೂ., ವಾಣಿಜ್ಯ ವಾಹನ ಹಿಂದಿನ ದರ 655 ರೂ. ಹೊಸ ದರ 675 ರೂ., ಭಾರಿ ವಾಹನಗಳಿಗೆ ಹಿಂದಿನ ದರ 940 ರೂ. ಇದ್ದು, ಹೊಸ ದರ 970 ರೂ., ಹೆಚ್ಚಿನ ಆಕ್ಸಲ್ ವಾಹನಗಳಿಗೆ ಹಿಂದಿನ ದರ 1145 ರೂ. ಹೊಸ ದರ 1180 ರೂ.ಗೆ ಏರಿಕೆ ಆಗಿದೆ.
ಟೋಲ್ ಸಂಗ್ರಹ ಹೆಚ್ಚಳದಿಂದ ಸವಾರರಿಗೆ ಮತ್ತಷ್ಟು ಹೊರೆಯಾಗಿದ್ದು, ವರ್ಷದಲ್ಲಿ ಎರಡು ಬಾರಿ ಟೋಲ್ ದರ ಹೆಚ್ಚಿಸಿರೋ ಹೆದ್ದಾರಿ ಪ್ರಾಧಿಕಾರದ ವಿರುದ್ಧ ಅಸಮಾಧಾನ ಹೊರಹಾಕಿದ್ದಾರೆ. ಇದನ್ನೂ ಓದಿ: ಬೆಂಗಳೂರು – ಮೈಸೂರು ಎಕ್ಸ್‌ಪ್ರೆಸ್‌ವೇ ನಲ್ಲಿ ಇಂದಿನಿಂದ ಟೋಲ್ ದರ ಏರಿಕೆ; ಯಾವ ವಾಹನಕ್ಕೆ ಎಷ್ಟು?
