– ವಿದ್ಯಾಸಂಸ್ಥೆ, ಹಾಸ್ಟೆಲ್‍ಗಳಲ್ಲಿ ನಿಗಾ ವಹಿಸಬೇಕು
ಹಾವೇರಿ: ದೇಶ ದ್ರೋಹದ ಹೇಳಿಕೆ ನೀಡುವ ಪ್ರಕರಣಗಳ ಕುರಿತು ಸರ್ಕಾರ ನಿಗಾ ವಹಿಸಲಿದೆ. ಇಂತಹ ಪ್ರಕರಣಗಳನ್ನು ರಾಜ್ಯದಿಂದ ಬೇರು ಸಮೇತ ಕಿತ್ತು ಹಾಕುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಲಾಗುವುದು ಎಂದು ಗೃಹ ಸಚಿವ ಬಸವರಾಜ್ ಬೊಮ್ಮಾಯಿ ಹೇಳಿದ್ದಾರೆ.
ಈ ಕುರಿತು ಹಾವೇರಿಯಲ್ಲಿ ಮಾತನಾಡಿದ ಅವರು, ಇಂತಹ ಪ್ರಕರಣಗಳನ್ನು ಕರ್ನಾಟಕದಿಂದ ಬೇರು ಸಮೇತ ಕಿತ್ತು ಹಾಕಲು ಕ್ರಮ ಕೈಗೊಳ್ಳುತ್ತೆವೆ. ಬೆಂಗಳೂರಲ್ಲಿ ಉನ್ನತ ಮಟ್ಟದ ಅಧಿಕಾರಿಗಳ ಸಭೆ ಕರೆಯಲಾಗಿದೆ. ಈ ಕುರಿತು ಚರ್ಚಿಸಿ ಕ್ರಮ ಕೈಗೊಳ್ಳುತ್ತೇವೆ. ಮಾತ್ರವಲ್ಲದೆ ವಿದ್ಯಾಸಂಸ್ಥೆ, ಹಾಸ್ಟೆಲ್ ಮ್ಯಾನೇಜ್ಮೆಂಟ್ ಇಂತಹ ಘಟನೆಗಳ ಬಗ್ಗೆ ನಿಗಾ ವಹಿಸಬೇಕು. ಗೊತ್ತಿದ್ದೂ ಸುಮ್ಮನಿದ್ದರೆ ಅಂತಹ ಸಂಸ್ಥೆಗಳ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದರು.
Advertisement
Advertisement
ವಾಟ್ಸಪ್, ಫೇಸ್ಬುಕ್ ನಲ್ಲಿ ಪೋಸ್ಟ್ ಮಾಡುವ ಕುರಿತು ಸಹ ಪರಿಶೀಲಿಸಬೇಕಿದೆ. ಇಂತಹ ಪೋಸ್ಟ್‍ಗಳಿಗೆ ನಿರ್ಬಂಧ ಹಾಕಬೇಕಿದೆ. ಈ ಬಗ್ಗೆ ಕೇಂದ್ರ ಸರ್ಕಾರದ ಗಮನಕ್ಕೆ ತರಲಾಗುವುದು. ಕೆಲ ಸಂಘಟನೆಗಳಿಗೆ ವಿದೇಶದಿಂದ ಹಣ ಬರುತ್ತಿರುವ ಬಗ್ಗೆ ಈಗಾಗಲೇ ತನಿಖೆ ನಡೆಯುತ್ತಿದೆ ಎಂದು ಮಾಹಿತಿ ನೀಡಿದರು.
Advertisement
ಹುಬ್ಬಳ್ಳಿಯಲ್ಲಿ ಕಾಶ್ಮೀರಿ ವಿದ್ಯಾರ್ಥಿಗಳ ದೇಶದ್ರೋಹ ಹೇಳಿಕೆ ಪ್ರಕರಣವನ್ನು ಬೆಳಗಾವಿಗೆ ವರ್ಗಾಯಿಸಲಾಗಿದೆ. ಐಜಿಪಿಯವರು ಇದನ್ನು ನೋಡಿಕೊಳ್ಳುತ್ತಿದ್ದಾರೆ. ಬೆಂಗಳೂರಲ್ಲಿ 20 ಜನ ವಕೀಲರು ಅವರ ಪರ ವಾದ ಮಾಡಲು ಮುಂದೆ ಬಂದಿದ್ದಾರೆ, ರಕ್ಷಣೆ ಕೇಳಿದ್ದಾರೆ. ಈ ಪ್ರಕರಣದಲ್ಲಿ ಪೊಲೀಸರ ನೈತಿಕತೆ ಕುಗ್ಗುವ ರೀತಿ ಮಾತನಾಡುವುದಿಲ್ಲ. ಮೊದಲ ಹಂತದಲ್ಲಿ ಪೊಲೀಸರ ಕ್ರಮ ಊರ್ಜಿತವಾಗಿದೆ ಎಂದು ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.
Advertisement
ಅಫ್ಜಲ್ ಗುರುಗೆ ಗಲ್ಲು ಹಾಕುವ ಸಂದರ್ಭದಲ್ಲಿ ಕೆಲವು ಸಂಘಟನೆಗಳು ಅವನ ಪರ ನಿಂತವು. ಅದರಿಂದ ಕುಮ್ಮಕ್ಕು ಸಿಕ್ಕಿತು. ನಂತರ ಜೆಎನ್‍ಯುನಲ್ಲಿ ಗಲಭೆ ಏಳಲು ಪ್ರಾರಂಭವಾಯಿತು. ನಂತರ ಮುಸ್ಲಿಂ ವಿವಿಯಲ್ಲಿ ಗಲಭೆ ಇದೀಗ ಎಲ್ಲ ರಾಜ್ಯದಲ್ಲೂ ಇದು ಪ್ರಾರಂಭವಾಗಿದೆ. ವಿಶೇಷವಾಗಿ ಸಿಎಎ ವಿಚಾರದಲ್ಲಿ ವಿವಾದ ಸೃಷ್ಟಿಸುತ್ತಿದ್ದಾರೆ. ಸಿಎಎ ಪೌರತ್ವ ಕಿತ್ತುಕೊಳ್ಳುವುದಲ್ಲ. ಪೌರತ್ವ ಕೊಡುವುದು. ಇದರ ವಿರುದ್ಧ ಪ್ರತಿಭಟಿಸಲು ವಿರೋಧ ಪಕ್ಷಗಳು ಕುಮ್ಮಕ್ಕು ನೀಡುತ್ತಿವೆ. ಎಲ್ಲೆಲ್ಲಿ ಸಿಎಎ ವಿರುದ್ಧ ಪ್ರತಿಭಟನೆ ನಡೆಯುತ್ತಿದೆಯೋ ಅಲ್ಲಿ ಕುಮ್ಮಕ್ಕು ನೀಡುವಂಥ ಪ್ರಕರಣಗಳು ನಡಿಯುತ್ತಿವೆ. ಇದೆಲ್ಲದರ ಬಗ್ಗೆ ತನಿಖೆ ನಡೆಸಲಾಗುತ್ತಿದೆ ಎಂದರು.