ಮಂಡ್ಯ: ಗ್ರಾಮವೊಂದರ 2 ಗುಂಪುಗಳ ಪ್ರತಿಷ್ಠೆಯಿಂದ ದೇವಾಲಯದ ಪ್ರವೇಶ ಸಿಗದೆ ದೇವರ ಬಸವ ದೇವಸ್ಥಾನದ ಗೇಟ್ ಮುಂದೆ ಕಾದು ಕುಳಿತಿರುವ ಘಟನೆ ಮದ್ದೂರಿನ ದೊಡ್ಡರಸಿನಕೆರೆ ಗ್ರಾಮದಲ್ಲಿ ನಡೆದಿದೆ.
Advertisement
ದೊಡ್ಡರಸಿನಕೆರೆ ಗ್ರಾಮದಲ್ಲಿ ಸಣ್ಣಿರಕ್ಕಿರಾಯನ ದೇವಾಲಯವಿದ್ದು, ಕುರುಬ ಸಮುದಾಯದವರು ಹಿಂದಿನಿಂದಲು ದೇವಸ್ಥಾನವನ್ನು ನಡೆಸಿಕೊಂಡು ಬರುತ್ತಿದ್ದರು. ಕಳೆದ ಕೆಲವು ವರ್ಷಗಳ ಹಿಂದೆ ದೇವಸ್ಥಾನ ಊರಿನ ನಿವೃತ್ತ ಪೊಲೀಸ್ ಅಧಿಕಾರಿ ಜಯಪ್ರಕಾಶ್ ಎಂಬುವವರು ದೇವಸ್ಥಾನ ಜೀರ್ಣೋದ್ದಾರ ಮಾಡಿಸೋಣ ಎಂದು ಎಂಟ್ರಿ ಕೊಟ್ಟರು. ಅವರು ದೇವಾಲಯದಲ್ಲಿ ಭಕ್ತಾಧಿಗಳಿಂದ ಸಂಗ್ರಹವಾಗಿದ್ದ ಕಾಣಿಕೆ ಹಣದ ಜೊತೆ ವೈಯಕ್ತಿಕ ಹಣದಿಂದಲೂ ದೇವಾಲಯ ಜೀರ್ಣೋದ್ದಾರ ಮಾಡಿದ್ದಾರೆ. ಇದನ್ನೂ ಓದಿ: ಡೋಣಿ ನದಿ ಸೇತುವೆಯಲ್ಲಿ ಬಿರುಕು – ಆಗಮಿಸಲಿದ್ದಾರೆ ದೆಹಲಿ ಎಂಜಿನಿಯರ್‌ಗಳು
Advertisement
Advertisement
ಬಳಿಕ ದೇವಸ್ಥಾನ ಟ್ರಸ್ಟ್ ರಚಿಸಿಕೊಂಡು ಅವರೇ ಅಧ್ಯಕ್ಷಕರು ಸಹ ಆಗಿದ್ದಾರೆ. ಬಳಿಕ ಅರ್ಚಕರ ವಿಷಯದಲ್ಲಿ ಊರಿನ ಗ್ರಾಮಸ್ಥರೊಂದಿಗೆ ಜಗಳ ಆರಂಭವಾಗಿದ್ದು, ಬೇರೆ ಸಮುದಾಯದ ಅರ್ಚಕರನ್ನು ನೇಮಿಸಲು ಮುಂದಾಗಿದ್ದಾರೆ.
Advertisement
ಗ್ರಾಮಸ್ಥರು ಮಾತ್ರ ಕುರುಬ ಸಮುದಾಯದವರೆ ತಲೆತಲಾಂತರದಿಂದ ಪೂಜೆ ಪುನಸ್ಕಾರ ಮಾಡಿಕೊಂಡು ಬರ್ತಿದ್ದಾರೆ. ಅವರೇ ಮುಂದುವರೆಯಲಿ ಎಂದು ಹೇಳ್ತಿದ್ದಾರೆ. ಆದರೆ ಗ್ರಾಮಸ್ಥರ ಮಾತಿಗೆ ಒಪ್ಪದ ಟ್ರಸ್ಟ್ ನ ಅಧ್ಯಕ್ಷ ಜಯಪ್ರಕಾಶ್ ಮಂತ್ರ ಪಠನೆ ಬರಲ್ಲ ಎಂದು ಸಬೂಬು ಹೇಳಿಕೊಂಡು ದೇವಾಲಯಕ್ಕೆ ಒಂದು ವಾರದಿಂದ ಬೀಗ ಜಡಿದು ದೇವರಿಗೇ ದಿಗ್ಬಂಧನ ಹಾಕಿ ಹೋಗಿದ್ದಾರೆ ಎಂದು ಗ್ರಾಮಸ್ಥರು ಆರೋಪಿಸುತ್ತಿದ್ದಾರೆ. ಇದನ್ನೂ ಓದಿ: ಫಸ್ಟ್ ಟೈಂ ಭಾರತೀಯ ಸಿನಿಮಾದಲ್ಲಿ ಅಭಿನಯಿಸಲಿದ್ದಾರೆ ಮೈಕ್ ಟೈಸನ್
ಇತ್ತ ಪ್ರತಿ ಸೋಮವಾರ ಸಣ್ಣಕ್ಕಿರಾಯನ ದರ್ಶನಕ್ಕೆ ಬರುತ್ತಿದ್ದ ದೇವರ ಬಸವ ನಿನ್ನೆ ಬೆಳಗ್ಗೆಯಿಂದಲು ಕಾದು ಕುಳಿತಿದ್ದಾನೆ. ದೇವಾಲಯಕ್ಕೆ ಬೀಗ ಹಾಕಿರುವುದರಿಂದ ಗೇಟ್ ಮುಂದೆಯೆ ಜಗ್ಗದೆ ಠಿಕಾಣಿ ಹೂಡಿದ್ದು, ಗ್ರಾಮಸ್ಥರ ಮನವೊಲಿಕೆಗೂ ಜಗ್ಗದೆ ಕುಳಿತಿದ್ದಾನೆ.
ಒಟ್ಟಿನಲ್ಲಿ ತಮ್ಮ ತಮ್ಮ ಪ್ರತಿಷ್ಠೆಗಾಗಿ ದೇವರಿಗೆ ದಿಗ್ಬಂಧನ ವಿಧಿಸಿರುವುದು ಎಷ್ಟು ಸರಿ ಎಂಬುದು ಸಾರ್ವಜನಿಕರ ಅಭಿಪ್ರಾಯವಾಗಿದೆ.