Cinema

ಫಸ್ಟ್ ಟೈಂ ಭಾರತೀಯ ಸಿನಿಮಾದಲ್ಲಿ ಅಭಿನಯಿಸಲಿದ್ದಾರೆ ಮೈಕ್ ಟೈಸನ್

Published

on

Share this

ಚೆನ್ನೈ: ಟಾಲಿವುಡ್ ನಟ ವಿಜಯ್ ದೇವರಕೊಂಡ ಅವರ ಸಿನಿಮಾಗೆ ಅಮೆರಿಕನ್ ಮಾಜಿ ಬಾಕ್ಸರ್ ಮೈಕ್ ಟೈಸನ್ ಅಭಿನಯಿಸುವುದರ ಮೂಲಕ ಭಾರತೀಯ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಲಿದ್ದಾರೆ.

ಐರನ್ ಮೈಕ್ ಅಥವಾ ಕಿಡ್ ಡೈನಮೈಟ್ ಎಂದೇ ಪ್ರಸಿದ್ಧಿ ಹೊಂದಿರುವ ಮೈಕ್ ಟೈಸನ್ ಟಾಲಿವುಡ್ ಸಿನಿಮಾದಲ್ಲಿ ನಟಿಸಲಿದ್ದಾರೆ. ಅದರಲ್ಲಿಯೂ ವಿಜಯ್ ದೇವರಕೊಂಡ ಅವರ ‘ಲೈಗರ್’ ಸಿನಿಮಾದಲ್ಲಿ ಎಂಬುದು ವಿಶೇಷವಾಗಿದೆ.

ಈ ಕುರಿತು ವಿಜಯ್ ತಮ್ಮ ಟ್ವಿಟ್ಟರ್ ನಲ್ಲಿ, ನಿಮಗೆ ಭರವಸೆಯನ್ನು ನೀಡಿದ್ದೆವು. ಅದರಂತೆ ಇಂದು ನಾವು ಪ್ರಾರಂಭಿಸಿದ್ದೇವೆ. ಭಾರತೀಯ ಪರದೆಯಲ್ಲಿ ಮೊದಲ ‘ಲೈಗರ್’ ಸಿನಿಮಾದಲ್ಲಿ ಗಾಡ್ ಆಫ್ ಬಾಕ್ಸಿಂಗ್, ದಿ ಲೆಜೆಂಡ್, ದಿ ಬೀಸ್ಟ್, ದಿ ಗ್ರೇಟೆಸ್ಟ್ ಆಲ್ ಟೈಮ್ ಐರನ್ ಮೈಕ್ ಟೈಸನ್’ ಎಂದು ಬರೆದು ಟ್ವೀಟ್ ಮಾಡುವ ಮೂಲಕ ಗಾಡ್ ಆಫ್ ಬಾಕ್ಸಿಂಗ್ ನನ್ನು ಭಾರತೀಯ ಪರದೆಯ ಮೇಲೆ ತರುತ್ತಿದ್ದೇವೆ ಎಂದು ಬರೆದುಕೊಂಡಿದ್ದಾರೆ. ಇದನ್ನೂ ಓದಿ: ಮದುವೆಗೆ ಸ್ಥಳ ಹುಡುಕುತ್ತ ಜೈಪುರಗೆ ಬಂದ್ರು ಲವ್ ಬರ್ಡ್ಸ್

ಈ ಸುದ್ದಿ ತಿಳಿದ ಅವರ ಅಭಿಮಾನಿಗಳು ಸಖತ್ ಥ್ರಿಲ್ ಆಗಿದ್ದಾರೆ. ಅದು ಅಲ್ಲದೇ ವಿಜಯ್ ಈ ಸಿನಿಮಾದಲ್ಲಿ ಎಂಎಂಎ ಫೈಟರ್ ಆಗಿ ಕಾಣಿಸಿಕೊಳ್ಳುತ್ತಿದ್ದು., ಇದರಲ್ಲಿ ಮೈಕ್ ಯಾವ ರೀತಿಯ ಪಾತ್ರದಲ್ಲಿ ನಟಿಸುತ್ತಾರೆ ಎಂಬ ಕುತೂಹಲ ಅಭಿಮಾನಿಗಳಲ್ಲಿ ಮೂಡಿದೆ.

ಪ್ರಸ್ತುತ ‘ಲೈಗರ್’ ಚಿತ್ರೀಕರಣ ಗೋವಾದಲ್ಲಿ ನಡೆಯುತ್ತಿದೆ. ಈ ಸಿನಿಮಾದ 65% ಚಿತ್ರೀಕರಣ ಮುಗಿದಿದೆ ಎಂದು ತಂಡ ತಿಳಿಸಿದೆ. ಈ ಚಿತ್ರವನ್ನು ಓಟಿಟಿಯಲ್ಲಿ ಬಿಡುತ್ತಾರೆ ಎಂದು ಕೆಲವರು ಊಹೆಗಳನ್ನು ಮಾಡಿದ್ದರು. ಅದಕ್ಕೆ ಚಿತ್ರತಂಡ ನಮ್ಮ ಸಿನಿಮಾ ಚಿತ್ರಮಂದಿರದಲ್ಲೇ ಬಿಡುಗಡೆಯಾಗುತ್ತೆ ಎಂದು ಹೇಳುವ ಮೂಲಕ ಎಲ್ಲದಕ್ಕೂ ತೆರೆ ಎಳೆದಿದ್ದರು. ಇದನ್ನೂ ಓದಿ:   ಒಳ ಉಡುಪು ಜಾಹೀರಾತಿನಲ್ಲಿ ಅಭಿನಯ – ಟ್ರೋಲ್ ಕೆಂಗಣ್ಣಿಗೆ ಗುರಿಯಾದ ರಶ್ಮಿಕಾ ಮಂದಣ್ಣ

ಈ ಚಿತ್ರ ಹಿಂದಿ ಮತ್ತು ತೆಲುಗು ಸೇರಿದಂತೆ 5 ಭಾಷೆಗಳಲ್ಲಿ ತೆರೆ ಕಾಣಲಿದೆ. ರಮ್ಯಾ ಕೃಷ್ಣನ್, ಮಕರಂದ್ ದೇಶಪಾಂಡೆ ಮತ್ತು ರೋನಿತ್ ರಾಯ್ ಚಿತ್ರದ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಈ ಚಿತ್ರಕ್ಕೆ ಖ್ಯಾತ ನಿರ್ದೇಶಕ ಪೂರಿ ಜಗನ್ನಾಥ್ ಆಕ್ಷನ್ ಕಟ್ ಹೇಳುತ್ತಿದ್ದು, ತೆಲುಗಿನ ನಟಿ ಚಾರ್ಮಿ, ಕರಣ್ ಜೋಹರ್ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ.

Click to comment

Leave a Reply

Your email address will not be published. Required fields are marked *

Advertisement
Advertisement