ನಗೋಯ: ಏಷ್ಯನ್ ಗೇಮ್ಸ್‌ನಲ್ಲಿ(Asian Games) ಇಂದು ಭಾರತ(India) ಒಂದೇ ದಿನ 6 ಚಿನ್ನದ ಪದಕವನ್ನು(Gold Medal) ಪಡೆಯುವ ಮೂಲಕ ಪದಕ ಪಟ್ಟಿಯಲ್ಲಿ 5ನೇ ಸ್ಥಾನಕ್ಕೆ ಜಿಗಿದಿದೆ.
ಗುರುವಾರ ಭಾರತ 10 ಚಿನ್ನ, 23 ಬೆಳ್ಳಿ, 33 ಕಂಚಿನ ಪದಕವನ್ನು ಸೇರಿ ಒಟ್ಟು 66 ಪದಕ ಪಡೆಯುವ ಮೂಲಕ 8ನೇ ಸ್ಥಾನದಲ್ಲಿತ್ತು. ಆದರೆ ಇಂದು 6 ಚಿನ್ನ, 2 ಬೆಳ್ಳಿ, 2 ಕಂಚಿನ ಪದಕ ಸೇರಿ ಒಟ್ಟು 10 ಪದಕ ಪಡೆದಿದೆ. ಇಂದು ಬಾಕ್ಸಿಂಗ್‌ನಲ್ಲಿ 3 ಚಿನ್ನದ ಬಂದಿರುವುದು ವಿಶೇಷ. ಭಾರತ ಇಲ್ಲಿಯವರೆಗೆ ಒಟ್ಟು 16 ಚಿನ್ನ, 25 ಬೆಳ್ಳಿ, 35 ಕಂಚು ಸೇರಿ ಒಟ್ಟು 76 ಪದಕ ಪಡೆದಿದೆ.
ಚಿನ್ನದ ಪದಕಗಳು
ಬಾಕ್ಸಿಂಗ್ (ಮಹಿಳೆಯರ 75 ಕೆಜಿ ವಿಭಾಗ): ಲವ್ಲಿನಾ ಬೊರ್ಗೊಹೈನ್ ಅವರು ಚೀನಾದ ಬಾವೊ ಜಿಯಿ ವಿರುದ್ಧ 5-0 ಅಂತರದಲ್ಲಿ ಭರ್ಜರಿ ಜಯ ಸಾಧಿಸಿ ಚಿನ್ನದ ಪದಕ ಗೆದ್ದಿದ್ದಾರೆ.
ಬಾಕ್ಸಿಂಗ್ (ಮಹಿಳೆಯರ 65 ಕೆಜಿ ವಿಭಾಗ): ಪರ್ವೀನ್ ಹೂಡಾ ಅವರು ಚೈನೀಸ್ ತೈಪೆಯ ಚೆನ್ ನಿಯೆನ್-ಚಿನ್ ವಿರುದ್ಧ 3-2 ಅಂತರದಲ್ಲಿ ಜಯಗಳಿಸಿ ಚಿನ್ನದ ಪದಕವನ್ನು ಮುಡಿಗೇರಿಸಿಕೊಂಡರು.
𝗙𝗢𝗨𝗚𝗛𝗧 𝗟𝗜𝗞𝗘 𝗪𝗔𝗥𝗥𝗜𝗢𝗥𝗦, 𝗖𝗘𝗟𝗘𝗕𝗥𝗔𝗧𝗘𝗗 𝗟𝗜𝗞𝗘 𝗖𝗛𝗔𝗠𝗣𝗜𝗢𝗡𝗦! 🫶
Parveen Hooda takes the 3-2 split decision in a closely fought final, but the smiles and mutual respect between both boxers steal the show. 🤩
Watch the 20th Asian Games Aichi-Nagoya… pic.twitter.com/uapjDXkTUn
— Sony Sports Network (@SonySportsNetwk) October 2, 2026
ಬಾಕ್ಸಿಂಗ್ (ಪುರುಷರ 80 ಕೆಜಿ ವಿಭಾಗ): ಅಂಕುಶ್ ಪಂಗಲ್ ಅವರು ದಕ್ಷಿಣ ಕೊರಿಯಾದ ಕಿಮ್ ಮಿನ್ಸಿಯಾಂಗ್ ವಿರುದ್ಧ 4-0 ಇಂದ ಗೆದ್ದು ಚಿನ್ನದ ಪದಕ ಪಡೆದಿದ್ದಾರೆ. ಇದನ್ನೂ ಓದಿ:44 ವರ್ಷಗಳ ಬಳಿಕ ಇತಿಹಾಸ ಸೃಷ್ಟಿ – ಏಷ್ಯನ್ ಗೇಮ್ಸ್‌ನಲ್ಲಿ ಚಿನ್ನ, ಒಲಿಂಪಿಕ್ಸ್‌ಗೆ ನೇರ ಎಂಟ್ರಿ
ಕುಸ್ತಿ (ಪುರುಷರ ಫ್ರೀಸ್ಟೈಲ್ 65 ಕೆಜಿ): ಸುಜೀತ್ ಕಲ್ಕಲ್ ತಜಕಿಸ್ತಾನದ ಅಬ್ದುಲ್ಮಾಜಿದ್ ಕುಡೀವ್ ವಿರುದ್ಧ 10-9 ಅಂತರದ ರೋಮಾಂಚಕ ಜಯದೊಂದಿಗೆ ಚಿನ್ನದ ಪದಕ ಪಡೆದರು.
Ankita Bhakat, Kirti and Kumkum become the first Indian women to win Asian Games Gold in the Recurve Team event! A landmark moment for Indian archery. 🥇
Watch the 20th Asian Games Aichi-Nagoya 2026 LIVE on Sony Sports Network TV channels & Sony LIV. #SonySportsNetwork… pic.twitter.com/AMfAscedPW
— Sony Sports Network (@SonySportsNetwk) October 2, 2026
ಬಿಲ್ಲುಗಾರಿಕೆ (ಮಹಿಳೆಯರ ರಿಕರ್ವ್ ತಂಡ): ಅಂಕಿತಾ ಭಕತ್, ಕೀರ್ತಿ ಶರ್ಮಾ ಮತ್ತು ಕುಮ್ಕುಮ್ ಮೊಹೊಡ್ ಅವರ ತಂಡವು ಬಲಿಷ್ಠ ದಕ್ಷಿಣ ಕೊರಿಯಾವನ್ನು 5-3 ರಿಂದ ಸೋಲಿಸಿ ಐತಿಹಾಸಿಕ ಚಿನ್ನದ ಪದಕವನ್ನು ಮುಡಿಗೇರಿಸಿಕೊಂಡಿದೆ.
ಹಾಕಿ: ಮಹಿಳೆಯರ ತಂಡ ಬಲಿಷ್ಠ ಚೀನಾವನ್ನು 1-0 ಗೋಲುಗಳಿಂದ ಸೋಲಿಸಿ ಚಿನ್ನಕ್ಕೆ ಮುತ್ತಿಟ್ಟಿದೆ. ಇದರೊಂದಿಗೆ ಲಾಸ್ ಎಂಜಲೀಸ್ ಒಲಿಂಪಿಕ್ಸ್‌ಗೆ ನೇರ ಅರ್ಹತೆ ಪಡೆದಿದೆ.
44 years was the wait.
Asian Games Gold? DONE. LA 2028? BOOKED. 🎟️Watch the 20th Asian Games Aichi-Nagoya 2026, LIVE on Sony Sports Network TV channels & Sony LIV.#SonySportsNetwork #SonyLIV #AsianGames #AichiNagoya2026 #BaarBaarBharatHarBaarBharat pic.twitter.com/N3ADZbY1DY
— Sony Sports Network (@SonySportsNetwk) October 2, 2026
ಬೆಳ್ಳಿ ಪದಕಗಳು
ಬಿಲ್ಲುಗಾರಿಕೆ (ಮಿಶ್ರ ರಿಕರ್ವ್ ತಂಡ): ಕುಮ್ಕುಮ್ ಮೊಹೊಡ್ ಮತ್ತು [ಧೀರಜ್ ಬೊಮ್ಮದೇವರ ಜೋಡಿಯು ಚೀನಾ ವಿರುದ್ಧದ ಫೈನಲ್‌ನಲ್ಲಿ ಹೋರಾಡಿ ಬೆಳ್ಳಿ ಪದಕಕ್ಕೆ ತೃಪ್ತಿಪಟ್ಟಿದೆ.
ಬಿಲ್ಲುಗಾರಿಕೆ (ಪುರುಷರ ರಿಕರ್ವ್ ತಂಡ): ಧೀರಜ್ ಬೊಮ್ಮದೇವರ, ನೀರಜ್ ಚೌಹಾಣ್ ಮತ್ತು ಯಶ್‌ದೀಪ್ ಭೋಗೆಅವರ ತಂಡವು ದಕ್ಷಿಣ ಕೊರಿಯಾ ವಿರುದ್ಧದ ಫೈನಲ್ ಪಂದ್ಯದಲ್ಲಿ ಸೋತು ಬೆಳ್ಳಿ ಪದಕ ಪಡೆಯಿತು.
ಕಂಚಿನ ಪದಕ
ಸೇಯಿಲಿಂಗ್ ( ಮಹಿಳೆಯರ ಡಿಂಗಿ ವಿಭಾಗ): ನೇತ್ರಾ ಕುಮನನ್ ಅವರು ಅದ್ಭುತ ಪ್ರದರ್ಶನ ನೀಡಿ ಭಾರತಕ್ಕೆ ಕಂಚಿನ ಪದಕ ತಂದುಕೊಟ್ಟಿದ್ದಾರೆ.
ಸೆಪಕ್ ತಕ್ರಾ (Sepaktakraw – ಪುರುಷರ ಕ್ವಾಡ್ರಂಟ್): ಭಾರತದ ಪುರುಷರ ತಂಡವು ಸೆಮಿಫೈನಲ್‌ನಲ್ಲಿ ಜಪಾನ್ ವಿರುದ್ಧ ಹೋರಾಡಿ ಕಂಚಿನ ಪದಕವನ್ನು ತನ್ನದಾಗಿಸಿಕೊಂಡಿದೆ.

