DistrictsKarnatakaLatestMain PostUttara Kannada

ಅಡಿಕೆ ಕದ್ದು ಸಿಕ್ಕಿಬಿದ್ದ ನಿವೃತ್ತ ASI

ಕಾರವಾರ: ಅಡಿಕೆ ತೋಟದಲ್ಲಿ ಹಸಿ ಅಡಿಕೆ ಕದ್ದು ಮಾರಲು ಪ್ರಯತ್ನಿಸಿದ್ದ ನಿವೃತ್ತ ಎಎಸ್‍ಐಯನ್ನು ಶಿರಸಿ ಗ್ರಾಮೀಣ ಠಾಣೆ ಪೊಲೀಸರು ಬಂಧಿಸಿರುವ ಘಟನೆ ಇಂದು ನಡೆದಿದೆ.

ರಾಮಚಂದ್ರ ದೇವು ನಾಯ್ಕ ಎಂಬಾತನೇ ಬಂಧಿತ ಆರೋಪಿ. ಈತ ಕಳೆದ ಒಂದು ವಾರಗಳ ಹಿಂದೆ ಚಿಪಗಿಯ ತನ್ನ ಜಮೀನಿನ ಪಕ್ಕದಲ್ಲಿದ ಮಹಾಬಲೇಶ್ವರ ಭಟ್ ಎಂಬುವವರ ತೋಟದಲ್ಲಿರುವ ಅಡಿಕೆಯನ್ನು ರಾತ್ರಿ ವೇಳೆಯಲ್ಲಿ ಕದ್ದು ನಾಪತ್ತೆಯಾಗಿದ್ದ. ಈ ಕುರಿತು ಮಹಾಬಲೇಶ್ವರ ಭಟ್ ಶಿರಸಿ ಗ್ರಾಮೀಣ ಠಾಣೆಯಲ್ಲಿ ದೂರೊಂದನ್ನು ದಾಖಲಿಸಿದ್ದರು. ಇದನ್ನೂ ಓದಿ: ಖಾಸಗಿ ಬಸ್ ಹರಿದು ವ್ಯಕ್ತಿ ಸಾವು

ಡಿವೈಎಸ್‍ಪಿ ರವಿ ನಾಯ್ಕ ಹಾಗೂ ಸಿಪಿಐ ರಾಮಚಂದ್ರ ನಾಯ್ಕ ಮಾರ್ಗದರ್ಶನದಲ್ಲಿ ಪಿಎಸ್‍ಐ ಶ್ಯಾಮ ಪಾವಸ್ಕರ ತನಿಖೆ ಕೈಗೊಂಡಿದ್ದು, ಆರೋಪಿ ದೇವು ನಾಯ್ಕ ಹಸಿ ಅಡಿಕೆಯನ್ನು ಕಳ್ಳತನ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿಸಿ, ಶಿರಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ. ಸುಮಾರು 30 ಸಾವಿರರ ರೂ.ಗಳ ಹಸಿ ಅಡಿಕೆ ಕಳ್ಳತನದ ಆರೋಪ ದೇವು ನಾಯ್ಕ ಮೇಲಿದ್ದು, ಆರೋಪಿಗೆ ನ್ಯಾಯಾಲಯವು 15 ದಿನಗಳ ನ್ಯಾಯಾಂಗ ಬಂಧನ ವಿಧಿಸಿದೆ. ಇದನ್ನೂ ಓದಿ: ಪತಿಯನ್ನು ಜೈಲಿನಿಂದ ಹೊರತರಲು ಸಹಾಯ ಮಾಡೋದಾಗಿ ಹೇಳಿ ಮಹಿಳೆಯ ರೇಪ್ ಮಾಡಿದ್ರು!

Leave a Reply

Your email address will not be published.

Back to top button