- 25 ವರ್ಷದ ಆರೋಪಿ ಮೇಲೆ 19 ಕ್ರಿಮಿನಲ್ ಕೇಸ್!
ಮುಂಬೈ: ವ್ಯಕ್ತಿಯೊಬ್ಬ ತನ್ನ ಪತ್ನಿಯನ್ನು (Wife) 4 ಗಂಟೆ ಕಾಲ ಅಮಾನವೀಯ ಭಂಗಿಯಲ್ಲಿ ನಿಲ್ಲಿಸಿ ಚಿತ್ರಹಿಂಸೆ ನೀಡಿದ ಘಟನೆ ಮುಂಬೈನಲ್ಲಿ (Mumbai) ನಡೆದಿದೆ. ಹಲ್ಲೆ ಬಳಿಕ ಮಹಿಳೆಯನ್ನು ಮನೆಯಲ್ಲಿ ಕೂಡಿಹಾಕಿದ್ದ. ಪತಿಯ ಚಿತ್ರಹಿಂಸೆ ತಾಳದೆ ಮಹಿಳೆ ತವರು ಮನೆಗೆ ತೆರಳಿದ್ದು, ಈ ವೇಳೆ ಆಕೆಯನ್ನು ಹಿಂಬಾಲಿಸಿ ಪತಿ ಚಾಕು ಇರಿದಿದ್ದಾನೆ.
ಪತ್ನಿಗೆ ಚಿತ್ರಹಿಂಸೆ ನೀಡಿದ ಅರ್ಬಾಜ್ ಸೈಯದ್‌ನನ್ನು (25) ಪೊಲೀಸರು ಬಂಧಿಸಿದ್ದಾರೆ. ಈತ ಪತ್ನಿಯ ಮೇಲೆ ಹಲ್ಲೆ ಮಾಡಿ, 4 ಗಂಟೆ ಕಾಲ ಕಿವಿ ಹಿಡಿಸಿ ಬಗ್ಗಿಸಿ ನಿಲ್ಲಿಸಿದ್ದ. ಈ ವೇಳೆ ಸಹ ಆಕೆಯ ಮೇಲೆ ಮನಬಂದಂತೆ ಹಲ್ಲೆ ಮಾಡಿದ್ದ. ಅಲ್ಲದೇ ಆಕೆಯನ್ನು ಕೊಲ್ಲುವುದಾಗಿ ಬೆದರಿಕೆ ಹಾಕಿದ್ದಾನೆ. ಮುಖದ ಮೇಲೆ ಆಸಿಡ್ ಎರಚುವುದಾಗಿ ಬೆದರಿಸಿದ್ದಾನೆ ಎಂದು ಆರೋಪಿಸಲಾಗಿದೆ. ಇದನ್ನೂ ಓದಿ: ಸತ್ತ ಮಹಿಳೆಯರ ಬೆತ್ತಲೆ ಫೋಟೋ ತೆಗೆದು ವಿಕೃತಿ – ವರದಿ ಕೇಳಿದ ರಾಜ್ಯ ಮಹಿಳಾ ಆಯೋಗ
ಮಹಿಳೆ ಆತನಿಂದ ತಪ್ಪಿಸಿಕೊಂಡು ತವರು ಮನೆಗೆ ಬಂದಿದ್ದಳು. ಆದರೂ ಅವಳನ್ನು ಹಿಂಬಾಲಿಸಿ, ಆಕೆಗೆ ಚಾಕು ಇರಿದಿದ್ದಾನೆ. ಪೊಲೀಸರು ಸ್ಥಳಕ್ಕಾಗಮಿಸಿ ಆತನನ್ನು ಬಂಧಿಸಿದ್ದಾರೆ.
19 ಕ್ರಿಮಿನಲ್ ಪ್ರಕರಣಗಳು
ತನಿಖೆಯ ಸಮಯದಲ್ಲಿ, ಅರ್ಬಾಜ್ ವಿರುದ್ಧ ವಿವಿಧ ಪೊಲೀಸ್ ಠಾಣೆಗಳಲ್ಲಿ 19 ಗಂಭೀರ ಕ್ರಿಮಿನಲ್ ಪ್ರಕರಣಗಳು ದಾಖಲಾಗಿರುವುದು ತಿಳಿದು ಬಂದಿದೆ.
ಗಾಯಗೊಂಡ ಪತ್ನಿ ನೀಡಿದ ದೂರಿನ ಆಧಾರದ ಮೇಲೆ ಪೊಲೀಸರು ಆರೋಪಿಯ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ. ಇದನ್ನೂ ಓದಿ: ಹಣಕ್ಕಾಗಿ ಮಕ್ಕಳ ಮಾರಾಟ, ವರದಕ್ಷಿಣೆಗಾಗಿ ಪತ್ನಿಯ ಕೊಲೆ – ತಲೆಮರೆಸಿಕೊಂಡ ಪತಿಗಾಗಿ ಪೊಲೀಸರಿಂದ ತಲಾಶ್
