ಬೆಂಗಳೂರು: ಶಾಶ್ವತ ನಿವಾಸ ಪ್ರಮಾಣ ಪತ್ರ (Permanent Residence Certificate) ಪಡೆಯಲು ರಾಜ್ಯ ಸರ್ಕಾರ (Karnataka Govt) ಇದೀಗ ಅರ್ಜಿ ಸಲ್ಲಿಕೆಗೆ ಅವಕಾಶ ನೀಡಿದೆ.
ಈ ಕುರಿತು `ಪಬ್ಲಿಕ್ ಟಿವಿ’ಗೆ ಕಂದಾಯ ಇಲಾಖೆ ಪ್ರಧಾನ ಕಾರ್ಯದರ್ಶಿ ರಾಜೇಂದ್ರ ಕಠಾರಿಯಾ ಅವರು ಮಾಹಿತಿ ಹಂಚಿಕೊಂಡಿದ್ದಾರೆ. 16ನೇ ತಾರೀಖಿನಿಂದ ಆನ್‌ಲೈನ್ ಮತ್ತು ಅಫ್‌ಲೈನ್ ಎರಡರಲ್ಲೂ ಅರ್ಜಿ ಸಲ್ಲಿಕೆಗೆ ಸರ್ಕಾರ ಅವಕಾಶ ಕಲ್ಪಿಸುತ್ತಿದೆ. ಇದನ್ನೂ ಓದಿ: ಎಸ್‌ಐಆರ್ ಆಯ್ತು, ಈಗ ಬೀದಿಯಲ್ಲಿ ಗೃಹ ಜ್ಯೋತಿ
ಈ ಸಂಬಂಧ ಹೊಸದಾಗಿ ಆಪ್ ಕೂಡ ಸಿದ್ಧವಾಗಿದ್ದು, ಸೇವಾ ಸಿಂಧು ಪೋರ್ಟಲ್‌ನಲ್ಲಿಯೂ ಕೂಡ ಅಪ್ಲೈ ಮಾಡಬಹುದು. ಇನ್ನೂ ಎರಡು ದಿನದಲ್ಲಿ ಅರ್ಜಿ ಸಲ್ಲಿಕೆ ಆರಂಭಕ್ಕೆ ಸರ್ಕಾರ ಚಾಲನೆ ಕೊಡಲಿದ್ದು, ಈಗಾಗಲೇ ಶಾಶ್ವತ ನಿವಾಸ ಪ್ರಮಾಣ ವಿತರಣೆಗೆ ರೋಲ್ ಔಟ್ ಆಗಿದೆ. ಎಲ್ಲಾ ರೀತಿಯ ಸಿದ್ಧತೆಯೂ ಆಗಿದೆ. ಸಾರ್ವಜನಿಕರು ಅರ್ಜಿ ಸಲ್ಲಿಕೆಗೆ ಯಾವುದೇ ಶುಲ್ಕ ಕಟ್ಟುವ ಅಗತ್ಯವಿಲ್ಲ ಎಂದು ತಿಳಿಸಿದ್ದಾರೆ.
ಅರ್ಜಿ ಸಲ್ಲಿಕೆ ಸರಿಯಾದ ರೀತಿಯಲ್ಲಿ ಆಗಿದೆಯಾ? ದಾಖಲಾತಿಗಳ ಸಲ್ಲಿಕೆ ಸರಿಯಿದೆಯಾ? ಅಂತಾ ಅಧಿಕಾರಿಗಳು ಪರಿಶೀಲನೆ ಮಾಡಬೇಕು. ಅದಾದ ಬಳಿಕ ಅಧಿಕಾರಿಗಳು 21 ದಿನಗಳ ಒಳಗಡೆ ಪ್ರಮಾಣ ಪತ್ರ ನೀಡಬೇಕು ಎಂದಿದ್ದಾರೆ.ಇದನ್ನೂ ಓದಿ: ಕೆಪಿಎಸ್‌ಸಿ ಮಾಜಿ ಅಧ್ಯಕ್ಷ ಶಿವಶಂಕರಪ್ಪ ಸಾಹುಕಾರ್ ಪುತ್ರಿಗೆ ನೋಟಿಸ್
