ಬೆಂಗಳೂರು: ಜಂತರ್ ಮಂತರ್‌ನಲ್ಲಿ (Jantar Mantar) ಹೋರಾಟ ಮಾಡಿದವರು ಎಲ್ಲಿ ಮಾಯವಾಗಿದ್ದಾರೆ ಎಂದು ವಿಧಾನ ಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ (Chalavadi Narayanaswamy) ಪ್ರಶ್ನಿಸಿದ್ದಾರೆ.
ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಇಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ, ವಿಧಾನಸಭೆಯ ವಿಪಕ್ಷ ನಾಯಕ ಆರ್. ಅಶೋಕ್ ಅವರ ಉಪಸ್ಥಿತಿಯಲ್ಲಿ ಅವರು ಮಾಧ್ಯಮಗಳ ಜೊತೆ ಮಾತನಾಡಿದರು. ನಾಗೇಂದ್ರ ಅವರ ವಿಚಾರ ಮಾತ್ರವಲ್ಲ, ನೀವ್ಯಾಕೆ ಹಣ ಮಾಡಿಲ್ಲ ಎಂದು ಕಾಂಗ್ರೆಸ್ಸಿನ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಗಳು ಹೇಳಿದರೆಂದು ಕಾಂಗ್ರೆಸ್ ಮುಖಂಡರು ಮಾತನಾಡಿದ್ದನ್ನು ನಾವು ನೋಡಿದ್ದೇವೆ. ಭ್ರಷ್ಟಾಚಾರಿಗಳನ್ನು ಪ್ರೇರೇಪಿಸುವ ಪಕ್ಷ ಕಾಂಗ್ರೆಸ್. ಭ್ರಷ್ಟಾಚಾರಕ್ಕೆ ಮತ್ತೊಂದು ಹೆಸರು ಕಾಂಗ್ರೆಸ್ ಅಲ್ಲದೇ ಬೇರೇನೂ ಅಲ್ಲ. ದೇಶಕ್ಕೆ ಭ್ರಷ್ಟಾಚಾರವನ್ನು ಪರಿಚಯಿಸಿದ್ದೇ ಕಾಂಗ್ರೆಸ್ ಎಂದು ಟೀಕಿಸಿದರು. ಇದನ್ನೂ ಓದಿ: 52 ಲಕ್ಷ ಮೌಲ್ಯದ ಬೆಳ್ಳಿ, ಚಿನ್ನಾಭರಣ ಕಳ್ಳತನ – ಐದು ದಿನಗಳ ಬಳಿಕ ಮನೆಗೆ ಬಂದ ಮಹಿಳೆಗೆ ಶಾಕ್
ಸುಳ್ಳು ಹೇಳುವುದು, ತಮಗೆ ಬೇಕಾದ್ದನ್ನು ಮಾತ್ರ ಹೋರಾಟ ಮಾಡಿ ನುಣುಚಿಕೊಳ್ಳುವುದು ಕಾಂಗ್ರೆಸ್ಸಿನ ಸ್ವಭಾವ ಎಂದು ಆಕ್ಷೇಪಿಸಿದರು. ನೀಟ್ ವಿಚಾರದಲ್ಲಿ ಜಂತರ್ ಮಂತರ್‌ನಲ್ಲಿ ಆಗಿದ್ದೇ ಉತ್ತಮ ಉದಾಹರಣೆ. ಕಾಕ್ರೋಚ್‌ಗಳು ಸೇರಿ ವಿದ್ಯಾರ್ಥಿಗಳ ಹೆಸರಿನಲ್ಲಿ ಹೋರಾಟಕ್ಕೆ ಕರೆ ಕೊಟ್ಟರು. ಕೊನೆಯಲ್ಲಿ ಆದುದೇನೆಂದು ದೇಶ ನೋಡಿದೆ. ವಿಚ್ಛಿದ್ರಕಾರಿ ಶಕ್ತಿಗಳು ಪ್ರವೇಶಿಸಿ ದೇಶಕ್ಕೆ ಗಂಡಾಂತರ ಸೃಷ್ಟಿ ಮಾಡಲು ಪ್ರಯತ್ನ ಪ್ರಾರಂಭವಾಗಿತ್ತು. ಆಗ ಪ್ರಧಾನಿಯವರು ಕಠಿಣ ಶಿಕ್ಷೆಯ ಮಸೂದೆ ಅಂಗೀಕರಿಸುವಂತೆ ಮಾಡಿದರು ಎಂದು ವಿವರಿಸಿದರು. ಇದನ್ನೂ ಓದಿ: ಭ್ರಷ್ಟಾಚಾರ ವಿಚಾರದಲ್ಲಿ ರಾಜಿ ಇಲ್ಲ, ಡಬಲ್ ಬಿಲ್ ಮಾಡುವವರನ್ನು ಬಡಿದು ಹಾಕುವೆ: ಡಿ.ಕೆ ಶಿವಕುಮಾರ್
ಆಗ, ರಾಹುಲ್ ಗಾಂಧಿ ಮಾಡಿದ್ದೇನು? ಸೋರಿಕೆಯನ್ನೂ ವಿರೋಧಿಸುತ್ತಾರೆ. ಸೋರಿಕೆ ತಡೆಯುವುದನ್ನೂ ವಿರೋಧಿಸುತ್ತಾರೆ ಎಂದು ದೂರಿದರು. ಅವರದು ದ್ವಿಮುಖ ನೀತಿಯಲ್ಲವೇ ಎಂದು ಖಂಡಿಸಿದರು. ಜಾರ್ಖಂಡ್‌ನಲ್ಲಿ ಇವತ್ತು ಆಗಿದ್ದೇನು? ಅಲ್ಲಿಯ ವಿದ್ಯಾರ್ಥಿಗಳು ತಮಗಾದ ಅನ್ಯಾಯ ವಿರೋಧಿಸಿ ನ್ಯಾಯ ಕೇಳಿ ಹೋರಾಟ ಮಾಡಿದ್ದಾರೆ. ಅಲ್ಲಿ ಕಾಂಗ್ರೆಸ್ ಮತ್ತು ಮಿತ್ರ ಪಕ್ಷದ ಸರ್ಕಾರವಿದೆ. ಜಾರ್ಖಂಡ್‌ನಲ್ಲಿ ಸರ್ಕಾರದಿಂದ ಕ್ರೂರ ವರ್ತನೆ ನಡೆಯುತ್ತಿದೆ ಎಂದು ಆರೋಪಿಸಿದರು. ಇದನ್ನೂ ಓದಿ: ತಮಿಳುನಾಡಿಗೆ 12 ಸಾವಿರ ಕ್ಯೂಸೆಕ್ ನೀರು ಬೀಡಲು ಆದೇಶ – ಚರ್ಚೆ ಮಾಡಿ ತೀರ್ಮಾನ: ಸಿಎಂ
ವಿದ್ಯಾರ್ಥಿಗಳನ್ನು ಹತ್ತಿಕ್ಕುತ್ತಿದ್ದಾರೆ. ಜಂತರ್ ಮಂತರ್‌ನಲ್ಲಿ ಹೋರಾಟ ಮಾಡಿದವರು ಎಲ್ಲಿ ಮಾಯವಾಗಿದ್ದಾರೆ? ಯುವಜನರ ಹೋರಾಟಕ್ಕೆ ಬಿಜೆಪಿ ಜೊತೆಯಲ್ಲಿರುತ್ತದೆ. ದೇಶದ ಪ್ರಧಾನಿಯವರು ಕರೆ ಕೊಟ್ಟಂತೆ ದೇಶದ ಸುಭದ್ರತೆಗೆ ಕೆಲಸ ಮಾಡೋಣ ಎಂದು ತಿಳಿಸಿದರು. ಇದನ್ನೂ ಓದಿ: ಧಾರವಾಡ | ಶಾಲಾ ವಾಹನ ಹರಿದು ಎರಡು ವರ್ಷದ ಮಗು ಸಾವು

