ರಾಜಕೀಯ ವಿಷಯ ಚರ್ಚೆಗೆ ನಾಳೆ ಸಚಿವರ ಸಭೆ
ಬೆಂಗಳೂರು: ತಮಿಳುನಾಡಿಗೆ 12 ಸಾವಿರ ಕ್ಯೂಸೆಕ್ ನೀರು ಬಿಡುವ CWRC ಆದೇಶದ ಬಗ್ಗೆ ಚರ್ಚೆ ಮಾಡಿ ಕ್ರಮ ತೆಗೆದುಕೊಳ್ಳುತ್ತೇವೆ ಎಂದು ಸಿಎಂ ಡಿ.ಕೆ.ಶಿವಕುಮಾರ್ (D.K.Shivakumar) ತಿಳಿಸಿದ್ದಾರೆ.
ವಿಧಾನಸೌಧದಲ್ಲಿ ಮಾತನಾಡಿದ ಅವರು, 12 ಸಾವಿರ ಕ್ಯೂಸೆಕ್ ನೀರು ಬಿಡುವ ಆದೇಶ ಬಗ್ಗೆ ಗಮನಕ್ಕೆ ಬಂದಿದೆ. ನಮ್ಮ ಒಳಹರಿವು ಎಷ್ಟಿದೆ ಅಂತ ನೋಡ್ತಾ ಇದ್ದೀನಿ. ನಮ್ಮ ಪರಿಸ್ಥಿತಿ ನೋಡಿಕೊಂಡು ನಮ್ಮ ರೈತರನ್ನ ಕಾಪಾಡೋ ಕರ್ತವ್ಯ ಇದೆ. ರೈತರನ್ನು ಕಾಪಾಡಬೇಕು. ಕೋರ್ಟ್ ಆದೇಶ ಕೂಡಾ ಪಾಲನೆ ಮಾಡಬೇಕು. ಇವೆರಡನ್ನು ಗಮನದಲ್ಲಿಟ್ಟುಕೊಂಡು ನಮ್ಮ ನೀರಾವರಿ ಸಚಿವರು ಮಾತಾಡ್ತೀವಿ ಎಂದರು. ಇದನ್ನೂ ಓದಿ: ಕರ್ನಾಟಕಕ್ಕೆ ಮತ್ತೆ ಶಾಕ್ – ತಮಿಳುನಾಡಿಗೆ ದಿನಕ್ಕೆ 12 ಸಾವಿರ ಕ್ಯೂಸೆಕ್ ನೀರು ಬಿಡಿ
ಈಗಾಗಲೇ ಹೇಳಿದ್ದೇವೆ. ಬೆಳೆಗೂ ತೊಂದರೆ ಆಗಬಾರದು. ಕಾವೇರಿ ಮಾತ್ರವಲ್ಲ ಎಲ್ಲಾ ಡ್ಯಾಂ ನೀರು ಗಮನದಲ್ಲಿಟ್ಟುಕೊಂಡು ಬೆಳೆ ಬಗ್ಗೆ ತೀರ್ಮಾನ ಮಾಡಿ ಅಂತ ಹೇಳಿದ್ದೇವೆ ಎಂದು ತಿಳಿಸಿದರು.
ನಾನು ಪಾರದರ್ಶಕವಾಗಿ ಇದ್ದೇನೆ. ಮಾಧ್ಯಮಗಳಲ್ಲಿ ನೀವು ತೋರುಸ್ತೀರಾ ಅಂತ ಮಾಡೋರು ಯಾರು ಹೋಗೊಲ್ಲ. ನೀರು ಹಿಡಿದಿಟ್ಟುಕೊಳ್ಳಲು ಆಗೊಲ್ಲ. ತಾಳ್ಮೆಯಿಂದ ಇರಿ. ನಿಮಗೋಸ್ಕರವೇ ನಾವು ಇರೋದು. ಜನ ಅಧಿಕಾರ ಕೊಟ್ಟಿರೋದು ರೈತರನ್ನು ಬದುಕಿಸಲು. ಯಾವ ರೈತರಿಗೆ ತೊಂದರೆ ಮಾಡೋ ಇಷ್ಟ ಇಲ್ಲ. ತಾಳ್ಮೆಯಿಂದ ಇರಿ. ಸೌಹಾರ್ದಯಿಂದ ಇರಿ. ಪ್ರಕೃತಿ ನಮ್ಮನ್ನ ಬದುಕಿಸುತ್ತದೆ ಎಂದು ಮನವಿ ಮಾಡಿದರು. ಇದನ್ನೂ ಓದಿ: ಯಾರು ಬರಲಿ, ಬಿಡಲಿ ಕಾವೇರಿಗಾಗಿ ಬಂದ್ ಮಾಡೇ ಮಾಡ್ತೀವಿ: ವಾಟಾಳ್ ನಾಗರಾಜ್
ನಾಳೆ ರಾಜಕೀಯ ವಿಚಾರಗಳನ್ನು ಚರ್ಚೆ ಮಾಡಲು ಸಚಿವರು, ಕೆಲವು ನಾಯಕರ ಸಭೆ ಕರೆದಿದ್ದೇನೆ. ಸಚಿವರು, ಲೀಡರ್ಸ್ ಸಭೆ ಕರೆದಿದ್ದೇನೆ. ನಮ್ಮ ಪಕ್ಷದ ಪ್ಲ್ಯಾನ್ ಆಫ್ ಆಕ್ಷನ್ ಬಗ್ಗೆ ಚರ್ಚೆಗೆ ಕರೆದಿದ್ದೇನೆ. ರಾಜಕೀಯವಾಗಿ ಏನು ಬರಬಹುದು. ಹೇಗೆ ಹ್ಯಾಂಡಲ್ ಮಾಡಬೇಕು ಅಂತ ಮೊದಲ ಸಭೆ ಮಾಡಿ ಮಾರ್ಗದರ್ಶನ ಕೊಡಬೇಕು. ಅದಕ್ಕೆ ಕರೆದಿದ್ದೇನೆ. ನಾಡಿದ್ದು ಕ್ಯಾಬಿನೆಟ್ ಸಭೆ ಇದೆ. ನಾಳೆ ಪೊಲಿಟಿಕಲ್ ಮೀಟಿಂಗ್ ಇದೆ ಎಂದು ಹೇಳಿದರು.

