ಧಾರವಾಡ: ಶಾಲಾ ಮಕ್ಕಳನ್ನು (School Bus) ಕರೆದುಕೊಂಡು ಹೋಗಲು ಬಂದಿದ್ದ ವಾಹನ ಹರಿದು (accident) ಎರಡು ವರ್ಷದ ಮಗು ಮೃತಪಟ್ಟಿರುವ ಘಟನೆ ಧಾರವಾಡ (Dharwad) ಜಿಲ್ಲೆಯ ಅಳ್ನಾವರ ತಾಲೂಕಿನ ಹುಲ್ಲಿಕೇರಿ ಗ್ರಾಮದಲ್ಲಿ ನಡೆದಿದೆ.
ಮೃತ ಮಗುವನ್ನು ಹುಲ್ಲಿಕೇರಿ ಗ್ರಾಮದ ಲುಕ್ಮಾನ್ ಬೋಗೂರ (2) ಎಂದು ಗುರುತಿಸಲಾಗಿದೆ.
ಮಂಗಳವಾರ ಶಾಲಾ ಮಕ್ಕಳನ್ನು ಕರೆದುಕೊಂಡು ಹೋಗಲು ಶಾಲಾ ವಾಹನ ಹುಲ್ಲಿಕೇರಿ ಗ್ರಾಮಕ್ಕೆ ಬಂದಿತ್ತು. ಈ ವೇಳೆ ರಸ್ತೆ ಬದಿಯಲ್ಲಿ ನಿಂತಿದ್ದ ಲುಕ್ಮಾನ್ ಮೇಲೆ ವಾಹನ ಹರಿದು ಹೋಗಿದೆ ಎನ್ನಲಾಗಿದೆ.
ವಾಹನ ಹರಿದ ಪರಿಣಾಮ ಮಗುವಿಗೆ ಗಂಭೀರ ಗಾಯಗಳಾಗಿದ್ದು, ಸ್ಥಳದಲ್ಲೇ ಮೃತಪಟ್ಟಿದೆ. ಇದನ್ನೂ ಓದಿ: ಯಾವ ಖಾತೆ ನೀಡಿದರೂ ನಿರೀಕ್ಷೆಯಂತೆ ಕೆಲಸ ಮಾಡುತ್ತೇನೆ: ಟಿ ರಘುಮೂರ್ತಿ
ಘಟನೆ ಅಳ್ನಾವರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದು, ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ತನಿಖೆ ಮುಂದುವರಿಸಿದ್ದಾರೆ.ಇದನ್ನೂ ಓದಿ: ಸಿರಿಯಾ ಮಾಜಿ ಅಧ್ಯಕ್ಷ ಬಶರ್ ಅಲ್-ಅಸ್ಸಾದ್‌ಗೆ ಮರಣದಂಡನೆ

