ಚಿತ್ರದುರ್ಗ: ಯಾವ ಖಾತೆ ನೀಡಿದರೂ ನಿರೀಕ್ಷೆಯಂತೆ ಕೆಲಸ ಮಾಡುತ್ತೇನೆ ಎಂದು ಸಚಿವ ಟಿ.ರಘುಮೂರ್ತಿ (T Raghumurthy) ಹೇಳಿದ್ದಾರೆ.
ಸಚಿವ ಸ್ಥಾನ ಕೈತಪ್ಪಿದಕ್ಕೆ ಕೆಲ ಶಾಸಕರ ಅಸಮಾಧಾನ ವಿಚಾರದ ಕುರಿತು ಚಿತ್ರದುರ್ಗದಲ್ಲಿ (Chitradurga) ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ವರಿಷ್ಠರಿಂದ ಅಸಮಾಧಾನ ನೀಗಿಸುವ ಕೆಲಸ ಆಗುತ್ತಿದೆ. ಸಿರಿಗೆರೆ ತರಳಬಾಳು ಶ್ರೀ ದೆಹಲಿಗೆ ತೆರಳಿದ್ದರು. ಭದ್ರಾ ಮೇಲ್ದಂಡೆ ಯೋಜನೆಗೆ ಹೆಚ್ಚಿನ ಅನುದಾನಕ್ಕೆ ಪ್ರಯತ್ನಿಸಿದ್ದರು. ಭರವಸೆಯಿಂದ ಕೇಂದ್ರ 6,200 ಕೋಟಿ ನೀಡಲಿ ಎಂದು ಶ್ರೀಗಳು ಹೇಳಿದ್ದಾರೆ. ಬಿಡದಿ ಟೌನ್ ಶಿಪ್‌ಗೆ ಮೂಲ ಕಾರಣ ಯಾರೆಂದು ಸಿಎಂ ಹೇಳಿದ್ದಾರೆ. ಈ ಮೊದಲು ಎಕರೆಗೆ 25 ಲಕ್ಷ ರೂ. ಪರಿಹಾರ ನೀಡಲಾಗುತ್ತಿತ್ತು. ಈಗ ಎಕರೆಗೆ ಮೂರು ಕೋಟಿ ನೀಡಲಾಗುತ್ತಿದೆ ಎಂದರು. ಇದನ್ನೂ ಓದಿ: ಕಾಶ್ಮೀರಿ ಪಂಡಿತ ನೌಕರರಿಗೆ ಉಗ್ರರ ಬೆದರಿಕೆ – ರಜೆ ನೀಡಿ ಸುರಕ್ಷಿತ ತಾಣಗಳಿಗೆ ಸ್ಥಳಾಂತರ
ಅಸಮಾಧಾನಿತ ಶಾಸಕರು ಜೆಡಿಎಸ್‌ಗೆ ಬರುವಂತೆ ಹೆಚ್‌ಡಿಕೆ ಆಫರ್ ವಿಚಾರವಾಗಿ ಪ್ರತಿಕ್ರಿಯಿಸಿ, ವಿರೋಧ ಪಕ್ಷದವರು ಏನು ಬೇಕಾದರೂ ಆಫರ್ ಕೊಡಬಹುದು. ಏನಾದರೂ ಆಫರ್ ಕೊಟ್ಟು ಆಮಿಷ ತೋರಿಸಬಹುದು, ಅದೆಲ್ಲಾ ಆಗಲ್ಲ. ನಮ್ಮ ಶಾಸಕರು, ಮಂತ್ರಿಗಳು ಒಂದೇ ಕುಟುಂಬದ ಅಣ್ಣ ತಮ್ಮಂದಿರಿದ್ದಂತೆ. ಕುಟುಂಬದಲ್ಲಿ ಸಣ್ಣಪುಟ್ಟ ವ್ಯತ್ಯಾಸಗಳು ಆದಾಗ ನೋವು ಆಗುವುದು ಸಹಜ. ಮಂತ್ರಿ ಮಂಡಲದ ವಿಚಾರದಲ್ಲಿಯೂ ಅದೇ ಆಗಿರೋದು ಎಂದು ಹೇಳಿದರು. ಇದನ್ನೂ ಓದಿ: ಚೀನಾದ ರಾಕೆಟ್ ಉಡಾವಣೆ ವಿಫಲ: ಬಾಹ್ಯಾಕಾಶದಲ್ಲೇ ಪತನ
136 ಶಾಸಕರಲ್ಲಿ ಸಿಎಂ, ಡಿಸಿಎಂ ಸೇರಿ 34 ಮಂದಿಗೆ ಅವಕಾಶ ಸಿಕ್ಕಿದೆ. ಅದರಲ್ಲಿ ಮೊದಲ ಬಾರಿ ಶಾಸಕರಾದವರಿಗೂ ಅವಕಾಶ ಲಭಿಸಿದೆ. ನಿರೀಕ್ಷೆ ಇದ್ದಾಗ ಅಸಮಾಧಾನ ಆಗುವುದು ಖಂಡಿತ ಸಹಜ. ಅಸಮಾಧಾನ ನೀಗಿಸುವ ಕೆಲಸ ನಮ್ಮ ವರಿಷ್ಠರು ಮಾಡುತ್ತಾರೆ. ಖಾತೆ ಹಂಚಿಕೆ ವಿಚಾರದಲ್ಲಿ ವಿಳಂಬ ವಿಚಾರವಾಗಿ ಮಾತನಾಡಿ, ಶಾಸಕರು ಕೇಳುವ ಪ್ರಶ್ನೆಗಳನ್ನ ಅಧಿಕಾರಿಗಳು ತಯಾರಿ ಮಾಡಿಕೊಂಡಿರುತ್ತಾರೆ. ಮಂತ್ರಿಗಳಾದವರು ಯಾವ ಖಾತೆ ಬರುತ್ತೆ ನೋಡಿ ಅಧ್ಯಯನ ಮಾಡಿ ಉತ್ತರ ಕೊಡುವ ಕೆಲಸ ಮಾಡುತ್ತೇವೆ ಎಂದರು. ಇದನ್ನೂ ಓದಿ: ಗುಬ್ಬಿ, ಕುಣಿಗಲ್ ಬರಪೀಡಿತ ಪ್ರದೇಶಕ್ಕೆ ಡಿಸಿಎಂ ಪರಮೇಶ್ವರ್ ಭೇಟಿ

