ನೆಲಮಂಗಲ: ಎಸ್‌ಐಆರ್ (SIR) ಬಳಿಕ ಇದೀಗ ಬೀದಿ ಬೀದಿಗಳಲ್ಲಿ ಗೃಹಜ್ಯೋತಿ (Gruhajyoti Scheme) ಪರಿಷ್ಕರಣೆ ಮಾಡುತ್ತಿರುವ ಅಕ್ರಮದ ವಾಸನೆ ಬಟಾಬಯಲಾಗಿದೆ.
ಬೆಂಗಳೂರು ಹೊರವಲಯದ ನೆಲಮಂಗಲದಲ್ಲಿ (Nelamangala) ಎಲ್ಲೆಂದರಲ್ಲಿ ಗೃಹಜ್ಯೋತಿ ಫಾರಂ ಫಿಲ್ಲಿಂಗ್ ಮಾಡುತ್ತಿರುವ ಗಂಭೀರವಾದ ಆರೋಪ ಕೇಳಿಬಂದಿದೆ. ಮನೆ ಮನೆಗೆ ಹೋಗಿ ಪರಿಶೀಲನೆ ಮಾಡಬೇಕಿದ್ದ ಸಿಬ್ಬಂದಿ, ಎಲೆಂದರಲ್ಲಿ ಜನರಿಗೆ ಗೃಹಜ್ಯೋತಿ ಫಾರಂ ಕೊಟ್ಟು ಪರಿಷ್ಕರಣೆ ಮಾಡುತ್ತಿದ್ದಾರೆ ಎನ್ನಲಾಗಿದೆ. ಇದನ್ನೂ ಓದಿ: ಕೆಪಿಎಸ್‌ಸಿ ಮಾಜಿ ಅಧ್ಯಕ್ಷ ಶಿವಶಂಕರಪ್ಪ ಸಾಹುಕಾರ್ ಪುತ್ರಿಗೆ ನೋಟಿಸ್
ಮನೆಯವರು ಹೊರರಾಜ್ಯದವರ, ಐಟಿದಾರರ, ಎಪಿಎಲ್‌ದಾರರ, ಬಾಡಿಗೆ ಮನೆಯವರ ಹೀಗೆ ನಾನಾ ಪ್ರಶ್ನೆಗಳು ಗೃಹಜ್ಯೋತಿ ಪರಿಷ್ಕರಣಾ ಅರ್ಜಿಯಲ್ಲಿದ್ದು, ಆದರೆ ಬೆಂಗಳೂರು ಉತ್ತರ ತಾಲೂಕಿನ ಮಾದನಾಯಕನಹಳ್ಳಿ ವ್ಯಾಪ್ತಿಯ ನಾರಾಯಣಪ್ಪಪಾಳ್ಯದಲ್ಲಿ ಎಲ್ಲವೂ ವಿಫಲವಾಗಿದೆ ಎಂದು ಜನರು ವಿಡಿಯೋ ಮಾಡಿ, ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇಲ್ಲಿನ ಬಡಾವಣೆಯ ಎಲ್ಲಾ ಜನರನ್ನು ಒಂದೆಡೆ ಸೇರಿಸಿ ಸಿಬ್ಬಂದಿ ಫಾರಂ ತುಂಬಲು ಕೊಟ್ಟಿದ್ದಾರೆ. ಹೀಗೆ ಆದರೆ ಸೂಕ್ತ ಫಲಾನುಭವಿಗಳಿಗೆ ಸೂಕ್ತ ರೀತಿಯಲ್ಲಿ ಅರ್ಹತೆ ಸಿಗಲ್ಲ ಎಂದು ಜನಸಾಮಾನ್ಯರು ಕಿಡಿಕಾರಿದ್ದಾರೆ.ಇದನ್ನೂ ಓದಿ: ಯುಜಿಸಿಇಟಿ ಮೊದಲ ಸುತ್ತಿನ ತಾತ್ಕಾಲಿಕ ಫಲಿತಾಂಶ ಪ್ರಕಟ-ಕೆಇಎ
