ಬೆಂಗಳೂರು: ಎಂಜಿನಿಯರಿಂಗ್(Engineering) ಸೇರಿದಂತೆ ವಿವಿಧ ವೃತ್ತಿಪರ ಕೋರ್ಸ್‌ಗಳ ಪ್ರವೇಶಕ್ಕೆ ಮೊದಲ ಸುತ್ತಿನ ಸೀಟು ಹಂಚಿಕೆಯ ತಾತ್ಕಾಲಿಕ ಫಲಿತಾಂಶವನ್ನು ಕರ್ನಾಟಕ ಪರೀಕ್ಷಾ ಪ್ರಾಧಿಕಾರ (KEA) ಸೋಮವಾರ ರಾತ್ರಿ ಪ್ರಕಟಿಸಿದೆ.
ನಿರೀಕ್ಷೆ ಪ್ರಕಾರ ಜುಲೈ 14ರಂದು ಪ್ರಕಟಿಸಬೇಕಿತ್ತು. ಆದರೆ ನಿಗದಿಗಿಂತ ಮೊದಲೇ ಫಲಿತಾಂಶ(Result) ಹೊರಬಿದ್ದಿದೆ ಎಂದು ಪ್ರಾಧಿಕಾರದ ಕಾರ್ಯನಿರ್ವಾಹಕ ನಿರ್ದೇಶಕ ಹೆಚ್.ಪ್ರಸನ್ನ ಅವರು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ. ಇದನ್ನೂ ಓದಿ: ಪ್ರಿಯಾಂಕ್ ಖರ್ಗೆ ತವರಲ್ಲೇ 3 ಸಜಾ ಕೈದಿಗಳು ಜೈಲಿನಿಂದ ಪರಾರಿ
