– ಮುಂಗಾರು ಅಧಿವೇಶನಕ್ಕೂ ಮುನ್ನ ಆಪರೇಷನ್ ಟೈಗರ್ ಫೈನಲ್
ಮುಂಬೈ: ಉದ್ಧವ್ ಠಾಕ್ರೆಯ ಪುತ್ರ ಮೋಹ, ಹಿರಿಯ ನಾಯಕರು ಮತ್ತು ಶಾಸಕರ ಕಡೆಗಣೆಯಿಂದಾಗಿ 4 ವರ್ಷಗಳ ಹಿಂದೆ ಶಿವಸೇನೆ ಒಡೆದು ಹೋಳಾಯಿತು. ಏಕನಾಥ್ ಶಿಂಧೆ (Eknath Shindhe) ನೇತೃತ್ವದಲ್ಲಿ ಶಿವಸೇನೆ ನಾಯಕರು ಬಂಡಾಯ ಎದ್ದು ಸರ್ಕಾರವನ್ನೇ ಕೆಡವಿದ್ದರು. ಇದೀಗ ಉದ್ಧವ್ ಠಾಕ್ರೆ ನೇತೃತ್ವದ ಶಿವಸೇನಾ ಬಣ ಮತ್ತೆ ಒಡೆದು ಚೂರಾಗುವ ಸನಿಹದಲ್ಲಿದೆ.
ಪಕ್ಷದ ಹಿರಿಯ ನಾಯಕ ನಿತಿನ್ ತಿವಾರಿ ಸೇರಿ 14 ರಿಂದ 16 ಶಾಸಕರು ಮತ್ತು 7 ಸಂಸದರು ಉದ್ಧವ್ ಠಾಕ್ರೆ (Uddhav Thackeray) ನೇತೃತ್ವದ ಪಕ್ಷ ತೊರೆಯಲು ಸಿದ್ಧತೆ ನಡೆಸುತ್ತಿದ್ದಾರೆ ಎಂದು ತಿಳಿದುಬಂದಿದೆ. ಇದನ್ನ ʻಆಪರೇಷನ್ ಟೈಗರ್ʼ ಎಂದು ಕರೆಯಲಾಗುತ್ತಿದೆ. ಇದನ್ನೂ ಓದಿ: 75,000 ರೂ. ವರೆಗಿನ ಬೆಳೆ ಸಾಲ ಸಂಪೂರ್ಣ ಮನ್ನಾ – ರೈತರಿಗೆ ಬಿಗ್ ಗಿಫ್ಟ್ ಕೊಟ್ಟ ಸಿಎಂ ವಿಜಯ್

ಪಶ್ಚಿಮ ಬಂಗಾಳದಲ್ಲಿ ಟಿಎಂಸಿ ಶಾಸಕರು (TMC MLAs) ಹಾಗೂ ಸಂಸದರು ಬಂಡಾಯ ಎದ್ದಿರುವ ಹೊತ್ತಿನಲ್ಲೇ ಈ ಬೆಳವಣಿಗೆ ನಡೆದಿದೆ. ಮೂಲಗಳ ಪ್ರಕಾರ, ಮುಂದಿನ 6-7 ದಿನಗಳಲ್ಲಿ ಉದ್ಧವ್ ಠಾಕ್ರೆ ನೇತೃತ್ವದ ಶಿವಸೇನೆ ಮತ್ತೊಂದು ಬಣವಾಗಿ ಭಾಗವಾಗಬಹುದು. ಪಕ್ಷ ತೊರೆದ ಶಾಸಕರು ಹಾಗೂ ಸಂಸದರು ಡಿಸಿಎಂ ಏಕನಾಥ್ ಶಿಂಧೆ ಬಣದ ಶಿವಸೇನೆಗೆ ಸೇರ್ಪಡೆಯಾಗಬಹುದು. ಎಲ್ಲವೂ ಅಂದುಕೊಂಡಂತೆ ನಡೆದರೆ ಮುಂಗಾರು ಅಧಿವೇಶನಕ್ಕೂ ಮುನ್ನ ʻಆಪರೇಷನ್ ಟೈಗರ್ ಫೈನಲ್ʼ (Operation Tiger) ಆಗಲಿದೆ ಎಂದು ಹೇಳಲಾಗುತ್ತಿದೆ.
ವದಂತಿ ಬೆನ್ನಲ್ಲೇ ಹೈವೋಲ್ಟೇಜ್ ಸಭೆ
ತನ್ನ ಬಣದ ನಾಯಕರು ಪಕ್ಷ ತೊರೆಯಲು ಸಜ್ಜಾಗುತ್ತಿದ್ದಾರೆ ಅನ್ನೋ ವದಂತಿ ಬೆನ್ನಲ್ಲೇ ಎಚ್ಚೆತ್ತ ಉದ್ಧವ್ ಠಾಕ್ರೆ ತಮ್ಮ ಮಾತೋಶ್ರೀ ನಿವಾಸದಲ್ಲಿ ಸಭೆ ಕರೆದಿದ್ದಾರೆ. 9 ಲೋಕಸಭಾ ಸಂಸದರ ಸಭೆ ಕರೆದು, ಗಂಭೀರ ಚರ್ಚೆ ನಡೆಸುತ್ತಿದ್ದಾರೆ. ಈ ಮೂಲಕ ಯುಬಿಟಿ ಪಕ್ಷದ ಬಲ ನಿರ್ಣಯಿಸುವ ಜೊತೆಗೆ ವದಂತಿಗಳನ್ನ ಅಲ್ಲಗಳೆದಿದೆ. ಇದನ್ನೂ ಓದಿ: ನಮ್ಮ ದೇಶದಲ್ಲಿ ಶ್ರೀರಾಮನೇ ಲೆಕ್ಕ ಕೊಡಬೇಕು, ರಾಮನ ಹೆಸ್ರಲ್ಲಿ ರಾಜಕೀಯ ಮಾಡಿದವರು ಲೆಕ್ಕ ಕೊಡಬಾರದ?: ಪ್ರಿಯಾಂಕ್ ಖರ್ಗೆ

ಸಂಸದರು ಏನ್ ಹೇಳ್ತಾರೆ?
ಇದಕ್ಕೂ ಮುನ್ನ ಶಿವಸೇನೆಯ (Shiv Sena UBT) ಸಂಸದ ಸಂಜಯ್ ದೇಶಮುಖ್ ಅವರನ್ನು ಭೇಟಿಯಾದ ಶಿಂಧೆ ಬಣದ ಸಂಸದ ಪ್ರತಾಪ್‌ರಾವ್ ಜಾಧವ್, ನಾವು ಹಿಂದೆ ಸಹೋದ್ಯೋಗಿಗಳಾಗಿದ್ದೆವು. ಆದ್ದರಿಂದ ಭೇಟಿಯಾಗುತ್ತಲೇ ಇರುತ್ತೇವೆ. ಹಾಗೆಂದ ಮಾತ್ರಕ್ಕೆ ಅವರು ತೊರೆಯುತ್ತಿದ್ದಾರೆ ಎಂದರ್ಥವಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಇದನ್ನೂ ಓದಿ: ಪ್ರತಿಭಟನೆ ವೇಳೆ ಕಾಕ್ರೋಚ್ ಪಾರ್ಟಿ ಸಂಸ್ಥಾಪಕನಿಗೆ ಕಪಾಳಮೋಕ್ಷ – ವಿಡಿಯೋ ವೈರಲ್
ಆದ್ರೆ ನಾವು ಉದ್ಧವ್ ಬಣದ ಸಂಸದರೊಂದಿಗೆ ಮಾತನಾಡುವ ಅನೇಕರು ಠಾಕ್ರೆಗಳು ಮತ್ತು ಸಂಜಯ್ ರಾವತ್ ಬಗ್ಗೆ ಅತೃಪ್ತರಾಗಿದ್ದಾರೆ ಅನ್ನೋದು ಗೊತ್ತಾಗುತ್ತೆ. ಅವರು ಯಾರನ್ನ ಭೇಟಿಯಾಗುತ್ತಾರೆ ಎಂಬ ಬಗ್ಗೆ ನಿರಂತರವಾಗಿ ಅನುಮಾನದಲ್ಲಿದ್ದಾರೆ. ಇದರಲ್ಲೇನಾದ್ರೂ ಅಸಮಾಧಾನ ಸ್ಫೋಟಗೊಂಡರೆ ಪಕ್ಷ ತೊರೆಯಬಹುದು ಎಂದು ಹೇಳಿದ್ದಾರೆ.
